ಅ.11 ರಿಂದ ಧಾರವಾಡದಲ್ಲಿ ರಾಜ್ಯ ಮಟ್ಟದ ಹೊನಲು-ಬೆಳಕಿನ ಕಬಡ್ಡಿ

Published : Oct 10, 2019, 07:30 AM ISTUpdated : Oct 10, 2019, 07:38 AM IST
ಅ.11 ರಿಂದ ಧಾರವಾಡದಲ್ಲಿ ರಾಜ್ಯ ಮಟ್ಟದ ಹೊನಲು-ಬೆಳಕಿನ ಕಬಡ್ಡಿ

ಸಾರಾಂಶ

ರಾಜ್ಯ ಮಟ್ಟದ ಹೊನಲು-ಬೆಳಕು ಕಬಡ್ಡಿ|  ಮೊದಲ ಬಾರಿಗೆ ಅಂತಾ​ರಾಷ್ಟ್ರೀಯ ಮಟ್ಟದ ಮೈದಾ​ನ​ದಲ್ಲಿ ಪಂದ್ಯ​ಗ​ಳು| ರಾಜ್ಯದ 30 ಜಿಲ್ಲೆ​ಗ​ಳಿಂದ 800 ಕ್ರೀಡಾ​ಪ​ಟು​ಗಳು ಭಾಗಿ| ಬಾಲಕ- ಬಾಲಕಿಯರಿಗೆ ವಿವಿಧ ಕಾಲೇಜುಗಳಲ್ಲಿ ಪ್ರತ್ಯೇಕ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ|

ಧಾರ​ವಾಡ(ಅ.10): ಮೊಟ್ಟಮೊದಲ ಬಾರಿಗೆ ರಾಜ್ಯ ಮಟ್ಟದ ಪದವಿಪೂರ್ವ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಹೊನಲು- ಬೆಳಕಿನ ಕಬಡ್ಡಿ ಪಂದ್ಯಾ​ವ​ಳಿ​ಯ​ನ್ನು ಅ. 11 ರಿಂದ 3 ದಿನ​ಗಳ ಕಾಲ ನಗರದ ಆರ್‌.ಎನ್‌. ಶೆಟ್ಟಿ ಒಳಾಂಗಣ ಕ್ರೀಡಾಂಗಣದ ಮ್ಯಾಟ್‌ (ಅಂತಾರಾಷ್ಟ್ರೀಯ ಗುಣಮಟ್ಟದ ಮೈದಾನ) ಮೇಲೆ ನಡೆ​ಸ​ಲಾ​ಗು​ತ್ತಿದೆ ಎಂದು ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ ಪ್ರಭಾರಿ ಉಪ ನಿರ್ದೇ​ಶ​ಕಿ ಶಾರದಾ ಕಿರೇ​ಸೂರ ಹೇಳಿದ್ದಾರೆ.

ನಗರದಲ್ಲಿ ಬುಧ​ವಾರ ಸುದ್ದಿ​ಗೋ​ಷ್ಠಿ​ಯಲ್ಲಿ ಮಾತ​ನಾ​ಡಿದ ಅವರು, ರಾಷ್ಟ್ರೀಯ ಮಟ್ಟದ ಪಂದ್ಯಾ​ವ​ಳಿಯು ಕಡ್ಡಾ​ಯ​ವಾಗಿ ಮ್ಯಾಟ್‌ ಮೇಲೆಯೇ ಆಡಿ​ಸ​ಲಾ​ಗ​ತ್ತಿದೆ. ಆದರೆ, ರಾಜ್ಯ ಮಟ್ಟದ ಕ್ರೀಡೆಗಳು ಮಾತ್ರ ಬಯಲು ಮೈದಾ​ನ​ದಲ್ಲಿ ನಡೆ​ಸ​ಲಾ​ಗು​ತ್ತಿತ್ತು. ಇದೇ ಮೊದಲ ಬಾರಿಗೆ ಧಾರ​ವಾ​ಡ​ದಲ್ಲಿ ನಡೆ​ಯ​ಲಿ​ರುವ ಕಬಡ್ಡಿ ಪಂದ್ಯ​ಗಳು ಅಂತಾ​ರಾ​ಷ್ಟ್ರೀಯ ಗುಣ​ಮ​ಟ್ಟದ ಮೈದಾ​ನ​ದಲ್ಲಿ ನಡೆ​ಸ​ಲಾ​ಗು​ತ್ತಿದೆ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಜ. ತೋಂಟದಾರ್ಯ ವಿದ್ಯಾಪೀಠದ ಹಿರೇಮಲ್ಲೂರ ಈಶ್ವರನ್‌ ಪದವಿಪೂರ್ವ ಕಾಲೇಜು ಸಹ​ಯೋ​ಗ​ದಲ್ಲಿ ಈ ಕ್ರೀಡಾ​ಕೂಟವು ನಾಕೌಟ್‌ ಪದ್ಧತಿಯಲ್ಲಿ ನಡೆಯ​ಲಿದೆ. ರಾಜ್ಯದ 30 ಜಿಲ್ಲೆಗಳ 800 ಬಾಲಕ- ಬಾಲಕಿಯರು ಭಾಗವಹಿಸಿದ್ದಾರೆ. ಒಳಾಂಗಣದ ಕ್ರೀಡಾಂಗಣದಲ್ಲಿ ನೆಲಹಾಸಿನ ನಾಲ್ಕು ಅಂಕಣಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಬಾಲಕ- ಬಾಲಕಿಯರಿಗೆ ವಿವಿಧ ಕಾಲೇಜುಗಳಲ್ಲಿ ಪ್ರತ್ಯೇಕ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. 

ಆಟಗಾರರಿಗೆ ವಸತಿ ನಿಲಯದಿಂದ ಕ್ರೀಡಾಂಗಣದ ವರೆಗೆ ಬಸ್‌ ಸೌಕರ್ಯ ಒಗಿಸಲಾಗುವುದು. ಕ್ರೀಡಾಕೂಟದಲ್ಲಿ 70 ಜನ ಪರಿಣಿತ ನಿರ್ಣಾಯಕರು ಕಾರ್ಯನಿರ್ವಹಿಸಲಿದ್ದು, ನಿಯಮಾವಳಿಯಂತೆ ಕ್ರೀಡಾಕೂಟದಲ್ಲಿ ವಿಜೇತ ತಂಡಗಳು ನವೆಂಬರ್‌ ತಿಂಗ​ಳಲ್ಲಿ ದೆಹಲಿಯಲ್ಲಿ ನಡೆ​ಯ​ಲಿ​ರುವ ರಾಷ್ಟ್ರ​ಮ​ಟ್ಟದ ಪಂದ್ಯಾ​ವ​ಳಿ​ಯಲ್ಲಿ ಭಾಗ​ವ​ಹಿ​ಸ​ಲಿ​ದ್ದಾರೆ.
 

PREV
click me!

Recommended Stories

ರೀಲ್ಸ್ ಹುಚ್ಚಿಗೆ ಬಿಜೆಪಿ ನಾಯಕನ ಪುತ್ರ ಸಾವು, ಆಡಿ ಕಾರು ಚಾಲಕನ ಮೇಲೆ ಕೇಸ್, ಅಪ್ರಾಪ್ತನಿಗೆ ಬೈಕ್ ಕೊಡೋದು ಎಷ್ಟು ಸರಿ?
ರೀಲ್ಸ್ ಹುಚ್ಚಿಗೆ ಬಿಜೆಪಿ ನಾಯಕನ ಪುತ್ರ ಬಲಿ, ಘಟನೆ ಒಂದು ಪಾಠ ಎಂದ ಶಾಸಕ ಮಹೇಶ್ ಟೆಂಗಿನಕಾಯಿ, ಜಾಲತಾಣ ಬ್ಯಾನ್ ಯಾರಿಗೆ?