
ಹುಬ್ಬಳ್ಳಿ [ಅ.15]: ಏಕಾಂತದಲ್ಲಿದ್ದ ದೃಶ್ಯ ಸೆರೆ ಹಿಡಿದು ಬ್ಲಾಕ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದ ಹುಬ್ಬಳ್ಳಿಯ ಸಿದ್ಧರೂಢ ಮಠದ ಧರ್ಮದರ್ಶಿ ಡಾ.ಬಸನಗೌಡ ಸಂಕನಗೌಡರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಧರ್ಮದರ್ಶಿಗಳ ವಿಶೇಷ ಸಭೆಯಲ್ಲಿ ವೈಯಕ್ತಿಕ ಕಾರಣ ನೀಡಿ ಬಸನಗೌಡ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಇವರೊಂದಿಗೆ ಇದ್ದರೆನ್ನಲಾದ ಇನ್ನೊಬ್ಬ ಟ್ರಸ್ಟಿ ವಿಜಯಲಕ್ಷ್ಮಿ ಪಾಟೀಲ್ ಸಭೆಗೆ ಗೈರು ಹಾಜರಾಗಿದ್ದು, ಈ ನಿಟ್ಟಿನಲ್ಲಿ ಮತ್ತೆ ಬುಧವಾರ ಸಭೆ ಕರೆಯಲಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಏಕಾಂತದಲ್ಲಿದ್ದ ದೃಶ್ಯ ಸೆರೆಹಿಡಿದು ನಾಲ್ವರು ಬ್ಲ್ಯಾಕ್‌ಮೇಲ್ ಮಾಡಿ ಹಣ ಸುಲಿಗೆ ಮಾಡಿದ್ದಾರೆಂದು ಪೊಲೀಸರಿಗೆ ದೂರು ನೀಡಿದ್ದ ಡಾ. ಬಸನಗೌಡ ಸಂಕನಗೌಡರ್ ತಮ್ಮ ಸ್ಥಾನ ತೊರೆದಿದ್ದಾರೆ.
ಮಠದ ಸೂಪರ್ ವೈಸರ್ ಸುನೀಲ್ ಕಮ್ಮಾರ್ ಚಿತಾವಣೆ ಮೇರೆಗೆ ಸಂತೋಷ್ ಪೂಜಾರಿ, ಸಂಜು ಪಟದಾರಿ, ಗಣೇಶ್ ಕನ್ನೂರ್ ಎಂಬುವವರಿಂದ ಬ್ಲ್ಯಾಕ್‌ಮೇಲ್ ನಡೆದಿದ್ದು, ಹತ್ತು ಲಕ್ಷ ರೂಪಾಯಿ ಪಡೆದು ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇವರ ಕಿರುಕುಳದಿಂದ ಬೇಸತ್ತು ಬಳಿಕ ಸಂಕನಗೌಡರ್ ದೂರು ನೀಡಿದ್ದರು.
ಹುಬ್ಬಳ್ಳಿ ಸಿದ್ಧಾರೂಢ ಮಠದ ಟ್ರಸ್ಟಿಗಳಿಗೆ ಬ್ಲ್ಯಾಕ್‌ಮೇಲ್ ಮಾಡ್ತಿದ್ದ ನಾಲ್ವರ ಬಂಧನ...
ಇವರ ದೂರಿನ ಆಧಾರದಲ್ಲಿ ನಾಲ್ವರು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ.