ಶಿವಸೇನೆ, ಎನ್‌ಸಿಪಿ ಕೈ ಹಿಡಿಯುತ್ತಿರುವುದು ಹೇಯ ಕೃತ್ಯ: ಮುತಾಲಿಕ್

By Web DeskFirst Published Nov 12, 2019, 1:14 PM IST
Highlights

ಪಕ್ಷಾಂತರಿಗಳಿಗೆ ಮಹಾರಾಷ್ಟ್ರ ಚುನಾವಣೆಯಲ್ಲಿ ಮತದಾರರು ಒಳ್ಳೆಯ ಬುದ್ದಿ ಕಲಿಸಿದ್ದಾರೆ| ಅಧಿಕಾರಕ್ಕೋಸ್ಕರ ತತ್ವ ಸಿದ್ದಾಂತಕ್ಕೆ ಮಾರಾಟ ಮಾಡಿ,ಹಿಂದೂ ವಿರೋಧಿಗಳ ಕೈ ಜೋಡಿಸೋದು ಸರಿಯಲ್ಲ|  ಶಿವಸೇನೆ ಮತ್ತು ಬಿಜೆಪಿ ಇನ್ನೊನ್ಮೆ ಯೋಚನೆ ಮಾಡಬೇಕು ಎಂದ ಪ್ರಮೊದ ಮುತಾಲಿಕ್|

ಧಾರವಾಡ[ನ.12]: ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟು ದಿನೇ ದಿನೇ ವಿಚಿತ್ರ ತಿರುವು ಪಡೆದುಕೊಳ್ಳುತ್ತಿದೆ. ಬಿಜೆಪಿ, ಶಿವಸೇನೆ ಒಂದಾಗಿ ಸರ್ಕಾರದ ರಚನೆ ಮಾಡಬೇಕಿತ್ತು, ಹಿಂದೂತ್ವದ ಪರವಾಗಿ ಇರೋದು ಬಿಜೆಪಿ, ಶಿವಸೇನೆ ಮಾತ್ರ,ಇಂತಹ ಸಂದರ್ಭದಲ್ಲಿ ಇವತ್ತು ಅಗುತ್ತಿರುವ ಬೆಳವಣಿಗೆ ಅಸಹ್ಯಕರವಾಗಿದೆ. ಶಿವಸೇನೆ, ಎನ್‌ಸಿಪಿ ಕೈ ಹಿಡಿಯುತ್ತಿರುವುದು ಹೇಯ ಕೃತ್ಯವಾಗಿದೆ. ಮುಂದಿನ ದಿನಗಳಲ್ಲಿ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಶ್ರೀರಾ‌ಮಸೇನೆ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಹೇಳಿದ್ದಾರೆ. 

ಮಂಗಳವಾರ ನಗರದಲ್ಲಿ ಮಾತನಾಡಿದ ಅವರು, ಪಕ್ಷಾಂತರಿಗಳಿಗೆ ಮಹಾರಾಷ್ಟ್ರ ಚುನಾವಣೆಯಲ್ಲಿ ಮತದಾರರು ಒಳ್ಳೆಯ ಬುದ್ದಿ ಕಲಿಸಿದ್ದಾರೆ. ಅಧಿಕಾರಕ್ಕೋಸ್ಕರ ತತ್ವ ಸಿದ್ದಾಂತಕ್ಕೆ ಮಾರಾಟ ಮಾಡಿ, ಹಿಂದೂ ವಿರೋಧಿಗಳ ಕೈ ಜೋಡಿಸೋದು ಸರಿಯಲ್ಲ. ಶಿವಸೇನೆ ಮತ್ತು ಬಿಜೆಪಿ ಇನ್ನೊನ್ಮೆ ಯೋಚನೆ ಮಾಡಬೇಕು ಎಂದು ತಿಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಶಿವಸೇನೆ ಪಕ್ಷ ಬಾಳ ಠಾಕ್ರೆ ಅವರ ಕನಸು, ಸಿದ್ದಾಂತವನ್ನು ನುಚ್ಚು ನೂರು ಮಾಡುತ್ತಿದೆ. ಭ್ರಷ್ಟ, ಹಿಂದೂ ವಿರೋಧಿ ಪಕ್ಷದ ಜೊತೆ ಕೈ ಜೋಡಿಸೋದು ಸರಿಯಲ್ಲ, ಶಿವಸೇನೆ ಅಂದರೆ ಬಾಳ್ ಸಾಹೇಬ್ ಠಾಕ್ರೆ. ಈ ಬೆಳವಣಿಗೆ ಬಹಳ ದುರದೃಷ್ಟಕರ ಸಂಗತಿಯಾಗಿದೆ. ಹಿಂದೂ ವಿರೋಧಿ, ಭ್ರಷ್ಟಾಚಾರ, ಭಯೋತ್ಪಾದಕರಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ. ಅಂತಹ ಕಾಂಗ್ರೆಸ್ ಗೆ ಬೆಂಬಲ ಪಡೆಯೋದ್ರಿಂದ ಶಿವಸೇನೆ ಅವನತಿ ಆಗುತ್ತದೆ. ಹಿಂದೂತ್ವಕ್ಕಾಗಿ ಬಿಜೆಪಿ, ಶಿವಸೇನೆ ಒಂದಾಗೋದು ಒಳ್ಳೆಯದು ಎಂದು ಹೇಳಿದ್ದಾರೆ.
 

click me!