ತಂದೆ-ತಾಯಿ ಸಮಾಧಿ ಮಗ್ಗಲಲ್ಲೇ CS ಶಿವಳ್ಳಿ ಅಂತ್ಯಸಂಸ್ಕಾರ

Published : Mar 23, 2019, 07:13 PM IST
ತಂದೆ-ತಾಯಿ ಸಮಾಧಿ ಮಗ್ಗಲಲ್ಲೇ CS ಶಿವಳ್ಳಿ ಅಂತ್ಯಸಂಸ್ಕಾರ

ಸಾರಾಂಶ

ಯರಗುಪ್ಪಿಯಲ್ಲಿ ಸಿ.ಎಸ್.ಶಿವಳ್ಳಿ ಅಂತ್ಯಸಂಸ್ಕಾರ| ಯರಗುಪ್ಪಿಯಲ್ಲಿರುವ ಅವರ ಜಮೀನಿನಲ್ಲಿ ತಂದೆ-ತಾಯಿ ಸಮಾಧಿ ಪಕ್ಕದಲ್ಲೇ ಶಿವಳ್ಳಿ ಅಂತ್ಯಸಂಸ್ಕಾರ

ಹುಬ್ಬಳ್ಳಿ, [ಮಾ.23]: ತೀವ್ರ ಹೃದಯಘಾತದಿಂದ ಶುಕ್ರವಾರ ನಿಧನರಾಗಿದ್ದ ರಾಜ್ಯ ಪೌರಾಡಳಿತ ಸಚಿವ ಸಿ.ಎಸ್​. ಶಿವಳ್ಳಿ ಅವರ ಅಂತ್ಯಸಂಸ್ಕಾರ ಇಂದು [ಶನಿವಾರ] ಸಂಜೆ ನೆರವೇರಿತು.

ಯರಗುಪ್ಪಿಯಲ್ಲಿರುವ ಅವರ ಜಮೀನಿನಲ್ಲಿ ಹಾಲುಮತದ ಸಮಾಜದ ವಿಧಿವಿಧಾನಗಳೊಂದಿಗೆ ಹಾಗೂ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ತಂದೆಯ ಸಾವಿನ ನಡುವೆಯೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ಶಿವಳ್ಳಿ ಪುತ್ರಿ

ಶರಣಯ್ಯ ಶಾಸ್ತ್ರೀ ಹಿರೇಮಠ ಪೌರೋಹಿತ್ಯದಲ್ಲಿ ಹಾಲಮತ ಸಮಾಜದ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳು ನಡೆದವು. 3 ಸುತ್ತು ಕುಶಾಲ‌ ತೋಪು ಹಾರಿಸಿ ಸರ್ಕಾರಿ ಗೌರವ ಸಲ್ಲಿಸಲಾಯಿತು.

ತಂದೆ-ತಾಯಿ ಸಮಾಧಿ ಪಕ್ಕದಲ್ಲೇ ಶಿವಳ್ಳಿ ಅಂತ್ಯಸಂಸ್ಕಾರ
ಯರಗುಪ್ಪಿಯ ಜಮೀನಿನನಲ್ಲಿ ಸಿ.ಎಸ್​. ಶಿವಳ್ಳಿ ಅವರ ತಂದೆ ಸತ್ಯಪ್ಪ ಮತ್ತು ತಾಯಿ ಗಂಗಮ್ಮ ಅವರ ಸಮಾಧಿ ನಿರ್ಮಾಣವಾಗಿದೆ. ಈ ಎರಡು ಸಮಾಧಿಗಳ ಪಕ್ಕದಲ್ಲೇ ಸಿ.ಎಸ್​. ಶಿವಳ್ಳಿ ಅವರನ್ನೂ ಸಮಾಧಿ ಮಾಡಲಾಯಿತು. 

ಇದಕ್ಕಾಗಿ ಈಶ್ವರ ಲಿಂಗದ ಆಕೃತಿಯಲ್ಲಿ 12 ಪಾದ ಉದ್ದ ಮತ್ತು 12 ಪಾದ ಅಗಲವಾದ ಸಮಾಧಿ ನಿರ್ಮಿಸಲಾಗಿತ್ತು. ಇದರ ಮೇಲೆ ಈಶ್ವರ ಹಾಗೂ ಬಸವಣ್ಣನ ಮೂರ್ತಿಯನ್ನು ಸ್ಥಾಪಿಸಲಾಗುವುದು ಎಂದು ಶಿವಳ್ಳಿ ಅವರ ಕುಟುಂಬ ವರ್ಗದವರು ತಿಳಿಸಿದ್ದಾರೆ.

PREV
click me!

Recommended Stories

'ನಮ್ಮ ವಯಸ್ಸು ಮೀರುತ್ತಿದೆ, ಬೇಗ ಜಾಬ್ ಕರೆಯಲು ಹೇಳಿ ಸರ್' ಪೊಲೀಸ್ ಕಮಿಷನರ್ ಎದುರು ಗಳಗಳನೇ ಅತ್ತ ಕೊಪ್ಪಳ ಯುವತಿ
ಜಾಸ್ತಿ ಬೇಡ ಎರಡೇ ಮಕ್ಕಳನ್ನಷ್ಟೇ ಮಾಡಿಕೊಳ್ಳಿ: ನವದಂಪತಿಗಳಿಗೆ ಸಿಎಂ ಸಲಹೆ