ಧಾರವಾಡ: ಅಮಾವಾಸ್ಯೆ ದಿನ ಸ್ಮಶಾನದಲ್ಲಿ ವ್ಯಕ್ತಿ ನಿಗೂಢ ಸಾವು

Published : Apr 05, 2019, 10:25 PM ISTUpdated : Apr 05, 2019, 10:47 PM IST
ಧಾರವಾಡ: ಅಮಾವಾಸ್ಯೆ ದಿನ ಸ್ಮಶಾನದಲ್ಲಿ ವ್ಯಕ್ತಿ ನಿಗೂಢ ಸಾವು

ಸಾರಾಂಶ

ಸ್ಮಶಾನದಲ್ಲಿ ಹೃದಯಾಘಾತದಿಂದ ನಮಃ ಶಿವಾಯ ಎಂಬ ವ್ಯಕ್ತಿ ಸಾವು- ಧಾರವಾಡದ ಹೊಸ ಯಲ್ಲಾಪುರ ಬಡಾವಣೆಯಲ್ಲಿರೋ ಸ್ಮಶಾನದಲ್ಲಿ ಘಟನೆ| ವಾಮಾಚಾರ ಮಾಡಲು ಬಂದು ಸಾವನ್ನಪ್ಪಿರುವ ಶಂಕೆ |

ಧಾರವಾಡ, [ಏ.05]:  ಹೃದಯಾಘಾತದಿಂದ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಧಾರವಾಡದ ಹೊಸ ಯಲ್ಲಾಪುರ ಬಡಾವಣೆಯ ಸ್ಮಶಾನದಲ್ಲಿ ನಡೆದಿದೆ.

ನಮಃ ಶಿವಾಯ ಸಾವನ್ನಪ್ಪಿರುವ ವ್ಯಕ್ತಿ ಎಂದು ತಿಳಿದುಬಂದಿದೆ. ಇಂದು[ಶುಕ್ರವಾರ] ಅಮವಾಸ್ಯೆ ಇರುವ ಕಾರಣ  ಒಂದು ದಿನ ಮುಂಚೆ ಅಂದ್ರೆ ನಿನ್ನೆ ಗುರುವಾರ ರಾತ್ರಿ ವಾಮಾಚಾರ ಮಾಡಲು ಸ್ಮಶಾನಕ್ಕೆ ತೆರಳಿದ್ದು, ಈ ವೇಳೆ ಕಾರಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಶಂಕಿಸಲಾಗಿದೆ.
 
ಕಾರಿನಲ್ಲಿ ಕುಂಕುಮ ಲೇಪಿತ ತೆಂಗಿನಕಾಯಿ, ಕಪ್ಪು ಬಟ್ಟೆಯ ಗೊಂಬೆಗಳು ಪತ್ತೆ ಸೇರಿದಂತೆ ಹಲವು ಪೂಜಾ ಸಾಮಗ್ರಿ ಪತ್ತೆಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿಅಮವಾಸ್ಯೆ ಇರುವ ಕಾರಣ ವಾಮಾಚಾರಕ್ಕೆ ಬಂದಿದ್ದ ಎನ್ನಲಾಗಿದೆ. 

ವಿಷಯ ತಿಳಿದು ಸ್ಥಳಕ್ಕೆ ವಿದ್ಯಾಗಿರಿ ಠಾಣೆ ಪೊಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
 

PREV
click me!

Recommended Stories

'ನಮ್ಮ ವಯಸ್ಸು ಮೀರುತ್ತಿದೆ, ಬೇಗ ಜಾಬ್ ಕರೆಯಲು ಹೇಳಿ ಸರ್' ಪೊಲೀಸ್ ಕಮಿಷನರ್ ಎದುರು ಗಳಗಳನೇ ಅತ್ತ ಕೊಪ್ಪಳ ಯುವತಿ
ಜಾಸ್ತಿ ಬೇಡ ಎರಡೇ ಮಕ್ಕಳನ್ನಷ್ಟೇ ಮಾಡಿಕೊಳ್ಳಿ: ನವದಂಪತಿಗಳಿಗೆ ಸಿಎಂ ಸಲಹೆ