ಹುಬ್ಬಳ್ಳಿ ಸ್ಫೋಟ: ಎರಡು ವಾರದಲ್ಲಿ ಎಫ್‌ಎಸ್‌ಎಲ್ ವರದಿ ನಿರೀಕ್ಷೆ

By Web Desk  |  First Published Oct 30, 2019, 2:39 PM IST

ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದ ಸ್ಫೋಟ ಪ್ರಕರಣ| ಸ್ಫೋಟಕದ ಕುರಿತು ಎಫ್‌ಎಸ್‌ಎಲ್ ವರದಿ ಇನ್ನೆರಡು ವಾರದಲ್ಲಿ ದೊರೆಯುವ ಸಾಧ್ಯತೆ| ಆರೋಪಿಗಳು ಎಲ್ಲಿಯವರು ಎಂಬುದು ಈ ವರದಿಯಿಂದ ತಿಳಿಯುವ ಸಾಧ್ಯತೆ| ಸ್ಫೋಟಕದಲ್ಲಿ ಗನ್‌ಪೌಡರ್ ಇರುವ ಕುರಿತು ಸ್ಪಷ್ಟವಾಗಿ ತಿಳಿಸಲು ಸಾಧ್ಯವಿಲ್ಲ| 


ಹುಬ್ಬಳ್ಳಿ[ಅ.30]: ನಗರದ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದ ಲಘು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಬಳಕೆಯಾದ ಸ್ಫೋಟಕದ ಕುರಿತು ಎಫ್‌ಎಸ್‌ಎಲ್ ವರದಿ ಇನ್ನೆರಡು ವಾರದಲ್ಲಿ ದೊರೆಯುವ ಸಾಧ್ಯತೆ ಇದೆ. ಆರೋಪಿಗಳು ಎಲ್ಲಿಯವರು ಎಂಬುದು ಈ ವರದಿಯಿಂದ ತಿಳಿಯುವ ಸಾಧ್ಯತೆ ಇರುವುದರಿಂದ ವರದಿ ಹೆಚ್ಚಿನ ಮಹತ್ವ ಪಡೆದಿದೆ.

ಬಿಡಿಡಿಎಸ್ ಸ್ಫೋಟಕವನ್ನು ನಿಷ್ಕ್ರಿಯಗೊಳಿಸುವ ಮುನ್ನ ಸ್ಫೋಟದ ತೀವ್ರತೆ ಪ್ರಮಾಣ ಪರೀಕ್ಷಿಸಿದಾಗ ಮಧ್ಯಮ ಪ್ರಮಾಣದ ತೀವ್ರತೆ ಕಂಡು ಬಂದಿದ್ದರಿಂದ ಮತ್ತಷ್ಟು ಮಾದರಿಯನ್ನು ಎಫ್‌ಎಸ್‌ಎಲ್‌ಕ್ಕೆ ಕಳುಹಿಸಲಾಗಿದೆ. ಇವೆಲ್ಲದರ ವರದಿ ಇನ್ನೆರಡು ವಾರದಲ್ಲಿ ಬರುವ ನಿರೀಕ್ಷೆಯಿದೆ ಎಂದು ರಾಜ್ಯ ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿ ಡಾ.ಬೋರಲಿಂಗಯ್ಯ ತಿಳಿಸಿದರು. 

Latest Videos

undefined

ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಸ್ಫೋಟ; ಒಬ್ಬನಿಗೆ ಗಾಯ

ಇನ್ನು ಸ್ಫೋಟಕದಲ್ಲಿ ಗನ್‌ಪೌಡರ್ ಇರುವ ಕುರಿತು ಸ್ಪಷ್ಟವಾಗಿ ತಿಳಿಸಲು ಸಾಧ್ಯವಿಲ್ಲ. ವರದಿ ಬಂದ ಬಳಿಕವೆ ದೃಢಪಡಲಿದೆ ಎಂದು ಅವರು ಹೇಳಿದರು. ಗನ್‌ಪೌಡರ್ ಬಳಸಿ ಸ್ಫೋಟಕ ತಯಾರಿಸಲಾಗಿದೆ ಎಂದುಎಫ್‌ಎಸ್‌ಎಲ್ ತಜ್ಞರು ಪೊಲೀಸರಿಗೆ ತಿಳಿಸಿದ್ದು, ನುರಿತವರೆ ಸ್ಫೋಟಕ ತಯಾರಿಸಿದ್ದಾರೆ ಎಂಬ ಅನುಮಾನ ತನಿಖಾ ತಂಡಕ್ಕೆ ಮೂಡಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಎಫ್‌ಎಸ್‌ಎಲ್ ತಜ್ಞರಿಂದ ಹಾಗೂ ಬಿಡಿಡಿಎಸ್‌ ತಂಡದಿಂದ ಸ್ಫೋಟಕದ ಕುರಿತು ಎನ್‌ಐಎ ಮಾಹಿತಿ ಪಡೆದಿದ್ದು, ಅವಶ್ಯಕತೆ ಉಂಟಾದಲ್ಲಿ ರೈಲ್ವೆ ನಿಲ್ದಾಣಕ್ಕೆ ಬಂದು ಪರಿಶೀಲಿಸುವುದಾಗಿ ತಿಳಿಸಿದೆ. ಹೀಗಾಗಿ ಸ್ಫೋಟದ ಸ್ಥಳ, ಒಡೆದ ಸ್ಟೇಷನ್ ವ್ಯವಸ್ಥಾಪಕರ ಗಾಜಿನ ಕಿಟಕಿಯನ್ನು ಯಥಾಸ್ಥಿತಿಯಲ್ಲಿ ಇಡಲಾಗಿದೆ. ಇನ್ನು, ತನಿಖೆಗಾಗಿ ಮಹಾರಾಷ್ಟ್ರ ಹಾಗೂ ಕೊಲ್ಲಾಪುರಕ್ಕೆ ತೆರಳಿದ್ದ ರಾಜ್ಯ ರೈಲ್ವೆಪೊಲೀಸ್ ತಂಡ ವಾಪಸಾಗಿದ್ದು, ಅಲ್ಲಿ ಸಿಸಿ ಕ್ಯಾಮೆರಾಪರಿಶೀಲಿಸಿ, ಟಿಕೆಟ್ ಹಾಗೂ ಇತರ ಮಾಹಿತಿಗಳನ್ನು ಕಲೆಹಾಕಿದೆ. ಆದರೆ, ಮಹತ್ವ ಎನಿಸುವ ಅಂಶಗಳು ಈ ವರೆಗೆಕಂಡುಬಂದಿಲ್ಲ ಎನ್ನುತ್ತವೆ ಪೊಲೀಸ್ ಮೂಲಗಳು.

ಹುಬ್ಬಳ್ಳಿ ಸ್ಫೋಟ: ಎಫ್‌ಎಸ್‌ಎಲ್‌ ವರದಿ ಬಳಿಕವೇ ಸತ್ಯಾಂಶ ಬೆಳಕಿಗೆ

ಈ ಬಗ್ಗೆ ಮಾತನಾಡಿದ ರಾಜ್ಯ ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿ  ಡಾ. ಬೋರಲಿಂಗಯ್ಯ ಅವರು, ಇನ್ನೆರಡು ವಾರದಲ್ಲಿ ಎಫ್‌ಎಸ್‌ಎಲ್‌ವರದಿ ಕೈ ಸೇರುವ ನಿರೀಕ್ಷೆಯಿದೆ. ಇದು ತನಿಖೆಯ ದೃಷ್ಟಿಯಿಂದ ಮಹತ್ವಪೂರ್ಣ ಎನಿಸಲಿದೆ ಎಂದು ತಿಳಿಸಿದ್ದಾರೆ.

click me!