ಹುಬ್ಬಳ್ಳಿ ಸ್ಫೋಟ: ಎಫ್‌ಎಸ್‌ಎಲ್‌ ವರದಿ ಬಳಿಕವೇ ಸತ್ಯಾಂಶ ಬೆಳಕಿಗೆ

Published : Oct 27, 2019, 01:43 PM IST
ಹುಬ್ಬಳ್ಳಿ ಸ್ಫೋಟ: ಎಫ್‌ಎಸ್‌ಎಲ್‌ ವರದಿ ಬಳಿಕವೇ ಸತ್ಯಾಂಶ ಬೆಳಕಿಗೆ

ಸಾರಾಂಶ

ರೈಲ್ವೆ ನಿಲ್ದಾಣದಲ್ಲಿನ ಲಘು ಸ್ಫೋಟ ಪ್ರಕರಣ| ಎಫ್‌ಎಸ್‌ಎಲ್‌ ವರದಿ ಬರುವವರೆಗೂ ಯಾವುದೇ ಮಾಹಿತಿ ಬಹಿರಂಗಗೊಳಿಸಲು ಸಾಧ್ಯವಿಲ್ಲ ಎಂದ ಸಚಿವ ಬಸವರಾಜ ಬೊಮ್ಮಾಯಿ| ಸ್ಫೋಟಕದ ಮಾದರಿಯನ್ನು ಎಫ್‌ಎಸ್‌ಎಲ್‌ ಪಡೆದಿದ್ದು, ಪರೀಕ್ಷೆ ನಡೆಸಲಾಗುತ್ತಿದೆ| ಪರೀಕ್ಷೆಯ ವರದಿ ಬಳಿಕ ಸಂಪೂರ್ಣ ಮಾಹಿತಿ ಬಹಿರಂಗ ಪಡಿಸಲಾಗುವುದು|

ಹುಬ್ಬಳ್ಳಿ(ಅ.27):  ಇಲ್ಲಿನ ರೈಲ್ವೆ ನಿಲ್ದಾಣದಲ್ಲಿನ ಲಘು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ಎಫ್‌ಎಸ್‌ಎಲ್‌ ವರದಿ ಬರುವವರೆಗೂ ಯಾವುದೇ ಮಾಹಿತಿ ಬಹಿರಂಗಗೊಳಿಸಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ. 

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಫೋಟಕದ ಮಾದರಿಯನ್ನು ಎಫ್‌ಎಸ್‌ಎಲ್‌ ಪಡೆದಿದ್ದು, ಪರೀಕ್ಷೆ ನಡೆಸಲಾಗುತ್ತಿದೆ. ಪರೀಕ್ಷೆಯ ವರದಿ ಬಳಿಕ ಸಂಪೂರ್ಣ ಮಾಹಿತಿ ಬಹಿರಂಗ ಪಡಿಸಲಾಗುವುದು. ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ಪೊಲೀಸರ ಸಹಕಾರದಲ್ಲಿ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪ್ರಕರಣ ತನಿಖಾ ಹಂತದಲ್ಲಿರುವುದರಿಂದ ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ. ಅಮರಾವತಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಸ್ಫೋಟಕ ಹೇಗೆ ಬಂತು?, ಯಾರು, ಯಾವ ಉದ್ದೇಶಕ್ಕಾಗಿ ಸ್ಪೋಟಕ ಇಟ್ಟಿದ್ದರು? ಎಂಬಿತ್ಯಾದಿ ಅಂಶಗಳ ಕುರಿತು ತನಿಖೆ ನಡೆಯುತ್ತಿದೆ. ಅಗತ್ಯ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಹೇಳಿದ್ದಾರೆ.  
 

PREV
click me!

Recommended Stories

ವಧು-ವರ ಇಲ್ಲದೆ ಹುಬ್ಬಳ್ಳೀಲಿ ಆರತಕ್ಷತೆ!
22 ವರ್ಷ ಚಾಲಕನಾಗಿದ್ದವನಿಗೆ ತಾವೇ ಡ್ರೈವ್ ಮಾಡಿ ಅಪರೂಪದ ಬೀಳ್ಕೊಡುಗೆ ಕೊಟ್ಟ ಧಾರವಾಡ ವಿವಿ ಕುಲಸಚಿವ!