ಈ ನಾಲ್ಕು ವಿಧದ ಡೆಂಗ್ಯೂ ಬಗ್ಗೆ ನಿಮಗೂ ತಿಳಿದಿರಲಿ!

By Web DeskFirst Published Oct 18, 2019, 5:27 PM IST
Highlights

ಒಮ್ಮೆ ಡೆಂಗ್ಯೂ ಬಂದರೆ ಮತ್ತೊಮ್ಮೆ ಬರೋಲ್ಲ, ಕೊಳಕು ನೀರಲ್ಲಿ ಮಾತ್ರ ಈ ಸೊಳ್ಳೆ ಮೊಟ್ಟೆ ಇಡುತ್ತೆ...ಮುಂತಾದ ತಪ್ಪು ಕಲ್ಪನೆಗಳ ನಡುವೆಯೇ ಯಾವ ಯಾವ ರೀತಿಯ ಡೆಂಗ್ಯೂ ಮನುಷ್ಯನನ್ನು ಕಾಡುತ್ತದೆ ಎಂಬ ಮಾಹಿತಿ ಇಲ್ಲಿದೆ ನೋಡಿ...

ಒಮ್ಮೆ ಗಂಭೀರವಾದ ರೋಗದಿಂದ ಗುಣವಾಗಿದ್ದೀರಿ ಎಂದಾದಲ್ಲಿ ಮತ್ತೆ ಆ ರೋಗ ನಿಮ್ಮನ್ನು ಬಾಧಿಸುವುದಿಲ್ಲವೆಂಬ ನಂಬಿಕೆ ಹಲವರಿಗಿದೆ. ಆದರೆ, ಇದೊಂದು ತಪ್ಪು ಕಲ್ಪನೆ. ಸಿಡುಬಿನಂಥ ರೋಗಕ್ಕೆ ಇದು ಅನ್ವಯಿಸಬಹುದು. ಆದರೆ, ಡೆಂಗ್ಯೂ ವಿಚಾರದಲ್ಲಿ ಇದು ತಪ್ಪು ಕಲ್ಪನೆ.

ಪ್ರಸ್ತುತ ಅತ್ಯಂತ ಭಯ ಹುಟ್ಟಿಸುವ ಕಾಯಿಲೆಗಳಲ್ಲಿ ಡೆಂಗ್ಯೂ ಸಹ ಒಂದು. ಏಡಸ್ ಎಂಬ ಸೊಳ್ಳೆ ಮನುಷ್ಯನನ್ನು ಕಚ್ಚಿದರೆ ಡೆಂಗ್ಯೂ ಬಾಧಿಸಬಹುದು. ಇತರೆ ರೋಗಗಳಂತೆ ರೋಗಿಯೊಂದಿಗೆ ಆರೋಗ್ಯವಂತರು ಸಂಪರ್ಕ ಸಾಧಿಸಿದರೆ ಬರುವಂತ ರೋಗವಲ್ಲ ಇದು. ಬದಲಾಗಿ ಸೊಳ್ಳೆಯಿಂದ ಕಚ್ಚಿಸಿಕೊಳ್ಳದಂತಿದ್ದರೆ ಮಾತ್ರ ತಡೆಯಬಲ್ಲ ರೋಗವಿದು.

ಶುದ್ಧ ನೀರಲ್ಲೂ ಡೆಂಗ್ಯೂ ಸೊಳ್ಳೆ ಇಡುತ್ತೆ ಮೊಟ್ಟೆ

ವಿಶ್ವ ಆರೋಗ್ಯ ಸಂಸ್ಥೆಯೂ ಡೆಂಗ್ಯೂ ಬಗ್ಗೆ ಗಂಭೀರವಲ್ಲದ ಡೆಂಗ್ಯೂ ಹಾಗೂ ಗಂಭೀರ ಡೆಂಗ್ಯೂ ಎಂಬ ಎರಡು ವಿಧಗಳಾಗಿ ಗುರುತಿಸಿದೆ. ನಿಶ್ಯಕ್ತಿ, ಜ್ವರ, ತಲೆ ನೋವು ಹಾಗೂ ದೇಹ ಬೇನೆ ಈ ರೋಗದ ಲಕ್ಷಣಗಳು. ಈ ರೋಗ ಲಕ್ಷಣವಿರುವ ವ್ಯಕ್ತಿಗೆ ತಕ್ಷಣವೇ ವೈದ್ಯಕೀಯ ಸಲಹೆ ಬೇಕು. ಆದರೆ, ಸುದೀರ್ಘ ಕಾಲ ಜನರನ್ನು ಬಾಧಿಸುವುದಿಲ್ಲ. ಆದರೆ, ಗಂಭೀರವಾದ ಡೆಂಗ್ಯೂವಾದರೆ ಪ್ಲೇಟ್‌ಲೆಟ್ಸ್ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗುತ್ತದೆ. ಪ್ಲಾಸ್ಮಾ ಲೀಕೇಜ್ ಆಗುತ್ತೆ. ಮೆದುಳು ಸ್ರಾವವಾಗುವುದಲ್ಲದೇ, ಹಲವು ಪ್ರಕರಣಗಳಲ್ಲಿ ಬಹು ಅಂಗಾಂಗ ವೈಫಲ್ಯವೂ ಸಂಭವಿಸುವ ಸಾಧ್ಯತೆಯೂ ಇದೆ. ದಾಖಲಾದ ಪ್ರಕರಣಗಳಲ್ಲಿ ತೀವ್ರ ಗಂಭೀರ ಡೆಂಗ್ಯೂ ಶೇ.1ರಷ್ಟು ರೋಗಿಯನ್ನು ಕಾಡುವ ಸಾಧ್ಯತೆ ಇದ್ದು, ಆ ರೋಗಿಗಳು ಸಾಯುವುದೇ ಹೆಚ್ಚು.

ಜೀವನದಲ್ಲಿ ಒಮ್ಮೆ ಮಾತ್ರ ಡೆಂಗ್ಯೂನಿಂದ ಬಳಲುತ್ತಾರೆ ಎಂಬ ನಂಬಿಕೆಗೆ ವಿರುದ್ಧವಾಗಿ ಹಲವರು ಹಲವು ಬಾರಿ ಈ ರೋಗಕ್ಕೆ ತುತ್ತಾಗಿದ್ದು ಇದೆ. ಉದ್ಯಮಿ ರೀನಾ ಡೆಂಗ್ಯೂಗೆ ಎರಡು ಬಾರಿ ತುತ್ತಾದ ಅನುಭವವನ್ನು ಹಂಚಿಕೊಂಡಿದ್ದಾರೆ. 'ನನ್ನ ಜೀವನದ ಅತ್ಯಂತ ದುರಾದೃಷ್ಟ ದಿನಗಳಿವು. ಒಮ್ಮೆ ಬಂದ ಡೆಂಗ್ಯೂ ಮತ್ತೆ ನನ್ನನ್ನು ಬಾಧಿಸುತ್ತದೆ ಎಂದು ನಾನು ಭಾವಿಸಿರಲಿಲ್ಲ. ಎರಡನೇ ಬಾರಿಯಂತೂ ಮತ್ತೂ ಗಂಭೀರವಾಗಿ ಈ ರೋಗ ಕಾಡಿತ್ತು. ಐದು ಸಾರಿ ರಕ್ತೆ ಬೇಕಾಯಿತು ನನಗೆ. ಬಹುತೇಕ ಅರೆ ಪ್ರಜ್ಞಾವಸ್ಥೆಯಲ್ಲಿದ್ದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರವೂ ಸುಧಾರಿಸಿಕೊಳ್ಳಲು ಸುಮಾರು ಎರಡು ತಿಂಗಳೇ ಬೇಕಾಯಿತು.'

ಸರ್ವಕಾಲಕ್ಕೂ ಕುತ್ತು ತರೋ ಡೆಂಗ್ಯೂ ಸೊಳ್ಳೆ

ಇವರ ಅನುಭವವನ್ನು ಕೇಳಿದಾಗ ಸೊಳ್ಳೆಯೂ ಜೀವಕ್ಕೆ ಮಾರಕವಾಗುವಷ್ಟು ಅಪಾಯಕಾರಿ ಎಂಬುವುದು ಸ್ಪಷ್ಟವಾಗುತ್ತದೆ.

click me!