
ನವದೆಹಲಿ(ಫೆ.24) ಈಗ ಆನ್‌ಲೈನ್ ಜಮಾನ. ಏನೇ ಬೇಕಿದ್ದರೂ ಬುಕ್ ಮಾಡಿದರೆ ಸಾಕು. ಮನೆಗೆ ಡೆಲಿವರಿ ಆಗುತ್ತೆ. ಈ ಪೈಕಿ ಝೆಪ್ಟೋ ಭಾರಿ ಜನಪ್ರಿಯತೆ ಪಡೆದಿದೆ. ಅಡುಗೆ ಸಾಮಾನು, ತರಕಾರಿ, ಹಣ್ಣು, ಎಲೆಕ್ಟ್ರಾನಿಕ್ಸ್ ಸೇರಿದಂತೆ ಹಲವು ವಸ್ತುಗಳನ್ನು ಝೆಪ್ಟೋ ಮೂಲಕ 10 ನಿಮಿಷದಲ್ಲಿ ತರಿಸಬಹುದು. ಇದೀಗ ಝೆಪ್ಟೋ ಹೊಸ ಜಾಹೀರಾತು ಬಿಡುಗಡೆ ಮಾಡಿದೆ. ಈ ಜಾಹೀರಾತಿನಲ್ಲಿ ಝೆಪ್ಟೋ ಹೊಚ್ಚ ಹೊಸ ಸ್ಕೋಡಾ ಕೈಲಾಖ್ ಕಾರನ್ನು ಡೆಲಿವರಿ ಮಾಡುತ್ತಿರುವ ದೃಶ್ಯವಿದೆ. ಇದರ ಬೆನ್ನಲ್ಲೇ ಝೆಪ್ಟೋ ಇದೀಗ 10 ನಿಮಿಷದಲ್ಲಿ ಕಾರು ಡೆಲಿವರಿ ಮಾಡಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಆದರೆ ಅಸಲಿಗೆ ಇದು ಝೆಪ್ಟೋ ಆರಂಭಿಸಿದ ಕಾರು ಡೆಲಿವರಿ ಸೇವೆಯಲ್ಲ. ಇದು ಸ್ಕೋಡಾ ಜೊತೆ ಒಪ್ಪಂದ ಮಾಡಿಕೊಂಡಿರುವ ಝೆಪ್ಟೋ, ಕಾರು ಟೆಸ್ಟ್ ಡ್ರೈವ್ ಸೇವೆಗೆ ಅನುವು ಮಾಡಿಕೊಡಲಿದೆ.
ಈ ಕುರಿತು ಹಲವು ಪೋಸ್ಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಝೆಪ್ಟೋದಿಂದ 10 ನಿಮಿಷದಲ್ಲಿ ಕಾರು ಡೆಲಿವರಿ. ಹೊಸ ಸೇವೆ ಎಂದು ಹಲವರು ಪೋಸ್ಟ್ ಮಾಡಿದ್ದಾರೆ. ಆದರೆ ಇದು ತಪ್ಪು ಮಾಹಿತಿಯಾಗಿದೆ. ಝೆಪ್ಟೋ ಸ್ಕೋಡಾ ಇಂಡಿಯಾ ಜೊತೆಗೆ ಒಪ್ಪಂದ ಮಾಡಿಕೊಂಡಿರುವುದು ನಿಜ. ಆದರೆ ಈ ಒಪ್ಪಂದ ಕಾರು ಡೆಲಿವರಿ ಅಲ್ಲ, ಇದು ಟೆಸ್ಟ್ ಡ್ರೈವ್ ಕಾರುಗಳನ್ನು ಗ್ರಾಹಕರ ಬಳಿ ತಲುಪಿಸುವ ಒಪ್ಪಂದವಾಗಿದೆ.
ಫೆಬ್ರವರಿ 4 ರಂದು ಝೆಪ್ಟೋ ಜಾಹೀರಾತು ವಿಡಿಯೋವನ್ನು ಪೋಸ್ಟ್ ಮಾಡಿತ್ತು. ನಮ್ಮ ಬಳಿ ಫೋನ್ ಇದೆ, ಮಿಕ್ಸರ್ ಇದೆ, ಟ್ಯಾಬ್‌ಲೆಟ್ ಇದೆ, ಇದೀಗ ಕಮಿಂಗ್ ಸೂನ್. ಸ್ಕೋಡಾ ಇಂಡಿಯಾ ಹೊಸ ಅಧ್ಯಾಯ ಎಂದು ಜಾಹೀರಾತು ಪೋಸ್ಟ್ ಮಾಡಿತ್ತು. ಇದರ ಜೊತೆಗೆ ಸ್ಕೋಡಾ ಇಂಡಿಯಾದ ಹೊಸ ಕೈಲಾಖ್ ಕಾರನ್ನು ಡೆಲಿವರಿ ಮಾಡುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿತ್ತು. ಹೀಗಾಗಿ ಹಲವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಮತ್ತೆ ಕೆಲವರು ಉದ್ದೇಶಪೂರ್ವಕವಾಗಿ ಸುಳ್ಳು ಮಾಹಿತಿ ಹರಡಿದ್ದಾರೆ.
ಅಸಲಿಗೆ ಝೆಪ್ಟೋ ಕೇವಲ 10 ನಿಮಿಷದಲ್ಲಿ ಸ್ಕೋಡಾ ಕೈಲಾಖ್ ಟೆಸ್ಟ್ ಡ್ರೈವ್ ಕಾರನ್ನು ಡೆಲಿವರಿ ಮಾಡಲಿದೆ. ಅಂದರೆ ಗ್ರಾಹಕರು ಸ್ಕೋಡಾ ಕೈಲಾಖ್ ಕಾರು ಖರೀದಿಸಲು ಬಯಸಿದ್ದರೆ, ಅವರು ಕೈಲಾಖ್ ಕಾರನ್ನು ಟೆಸ್ಟ್ ಡ್ರೈವ್ ಮಾಡಲು ಶೋ ರೂಂ, ಡೀಲರ್ ಬಳಿ ತೆರಳಬೇಕು ಎಂದಿಲ್ಲ. ಸ್ಕೋಡಾ ಅಧಿಕೃತ ವೆಬ್‌ಸೈಟ್ ಮೂಲಕ ಟೆಸ್ಟ್ ಡ್ರೈವ್‌ಗೆ ಕಾರು ಬುಕ್ ಮಾಡಿದರೆ ಸಾಕು. ಕೇವಲ 10 ನಿಮಿಷದಲ್ಲಿ ಝೆಪ್ಟೋ ಟೆಸ್ಟ್ ಡ್ರೈವ್ ಕಾರನ್ನು ಗ್ರಾಹಕರ ಮನೆಗೆ ತಲುಪಿಸಲಿದೆ. ಈ ಸೇವೆಯನ್ನು ಝೆಪ್ಟೋ ಆರಂಭಿಸಿದೆ. ಇತರ ವಸ್ತುಗಳಂತೆ ಝೆಪ್ಟೋ ಇದೀಗ ಟೆಸ್ಟ್ ಡ್ರೈವ್ ಕಾರನ್ನು ಡೆಲಿವರಿ ಮಾಡಲಿದೆ.
ಜೆಪ್ಟೋ ಲೆಕ್ಕಾಚಾರ ಅರ್ಥ ಮಾಡ್ಕೊಳ್ಳೋಕೆ ಆಗ್ತಿಲ್ಲ, ಇದು ರಿಯಾಯಿತಿಯಾ? ಪೋಸ್ಟ್ ವೈರಲ್