ಸೆಕೆಂಡ್ ಹ್ಯಾಂಡ್ ವಾಹನ ಖರೀದಿ, ಅನುಮಾನಸ್ಪದ ಕಾರು, ಹಿಟ್ ಅಂಡ್ ರನ್, ಅಪಘಾತ ಸೇರಿದಂತೆ ಹಲವು ಸಂದರ್ಭದಲ್ಲಿ ವಾಹನ ಮಾಲೀಕತ್ವ ಅತೀ ಅಗತ್ಯ ಮಾಹಿತಿಯಾಗಿದೆ. ಹಲವರು ಮೋಸ ಹೋಗಿದ್ದಾರೆ. ಇದೀಗ ವಾಹನ ಮಾಲೀಕತ್ವ ಪರಿಶೀಲನೆ ಸುಲಭವಾಗಿದೆ. ಸುಲಭವಾಗಿ ವಾಹನ ಮಾಲೀಕತ್ವ ಪರಿಶೀಲನೆ ಹೇಗೆ?
ನವದೆಹಲಿ(ಸೆ.21) ಕದ್ದು ವಾಹನಗಳ ಮಾರಾಟ, ಹಳೇ ಕಾರು ಖರೀದಿ, ಅನುಮಾನಸ್ಪದ ಕಾರು, ಹಿಟ್ ಅಂಡ್ ರನ್ ಸೇರಿದಂತೆ ಅಪಘಾತ ಹಾಗೂ ಇತರ ಸಂದರ್ಭಗಳಲ್ಲಿ ವಾಹನ ಮಾಲೀಕತ್ವ ಅತ್ಯಂತ ಮಹತ್ವದ ಮಾಹಿತಿಯಾಗಿದೆ. ಇದರ ಕೊರತೆಯಿಂದ ಹಲವರು ಮೋಸ ಹೋಗಿದ್ದಾರೆ. ಕದ್ದ ವಾಹನಗಳನ್ನು ನಕಲಿ ದಾಖಲೆ ಸೃಷ್ಟಿಸಿ ತಮ್ಮದೇ ವಾಹನ ಎಂದು ಮಾರಾಟ ಮಾಡಿ ಬಳಿಕ ಸಂಕಷ್ಟಕ್ಕೆ ಸಿಲುಕಿದ ಘಟನೆಗಳು ನಡೆದಿದೆ. ಇದೀಗ ಈ ಎಲ್ಲಾ ಸಮಸ್ಯಗಳಿಗೆ ಪರಿಹರಾವಾಗಿ ಕೇಂದ್ರ ಸರ್ಕಾರ ವಾಹನ ಮಾಲೀಕತ್ಪ ಮಾಹಿತಿ ಪಡೆಯುವುದನ್ನು ಸರಳಗೊಳಿಸಿದೆ. ಆನ್‌ಲೈನ್ ಮೂಲಕ ಒಂದೇ ಸೆಕೆಂಡ್‌ನಲ್ಲಿ ವಾಹನದ ಸಂಪೂರ್ಣ ಮಾಹಿತಿ ಕೈಗೆ ಸಿಗುವಂತೆ ಮಾಡಲಾಗಿದೆ.
ಹೊಸ ಪದ್ಧತಿಯಿಂದ ವಾಹನ ಮಾಲೀಕತ್ವ, ವಾಹನದ ವಿವರ, ವಿಮೆ ಮಾಹಿತಿ ಸೇರಿದಂತೆ ಹಲವು ವಿಚಾರಗಳು ತಿಳಿಯಲಿದೆ. ಆರ್‌ಟಿಒ ದಾಖಲೆಯಲ್ಲಿರುವ ಅಧಿಕೃತ ಮಾಹಿತಿಯನ್ನು ಪಡೆಯಲು ಸಾಧ್ಯವಿದೆ. ಇದರಿಂದ ಹಲವು ಜಟಿಲ ಸಮಸ್ಯೆಗಳು ನಿವಾರಣೆಯಾಗಲಿದೆ. ಕಾರು ಎಷ್ಟು ಬಾರಿ ವಿಮೆ ಮೊತ್ತವನ್ನು ಕ್ಲೈಮ್ ಮಾಡಿದೆ? ಕಾರಿನ ನೋಂದಣಿ ದಿನಾಂಕ ಸೇರಿದಂತೆ ಅಧಿಕೃತ ಮಾಹಿತಿಗಳು ಹಲುವ ಸಂದರ್ಭದಲ್ಲಿ ಅತೀ ಅಗತ್ಯ ಮಾಹಿತಿಗಳಾಗಿದೆ.
undefined
ದುಬಾರಿ ಇವಿಗೆ ಶೇ.5, ಪೆಟ್ರೋಲ್ ಕಾರಿಗೆ ಶೇ.50 ಜಿಎಸ್‌ಟಿ, ಕೇಂದ್ರ ಟೀಕಿಸಿ ಪೇಚಿಗೆ ಸಿಲುಕಿತಾ ಕಾಂಗ್ರೆಸ್!
ವಾಹನ ಮಾಲೀಕತ್ವ ಪರಿಶೀಲನೆ ಹೇಗೆ?
ಕೇಂದ್ರ ಸರ್ಕಾರದ ಪರಿವಾಹನ ಅಧಿಕೃತ ಪೋರ್ಟಲ್ ಮೂಲಕ ವಾಹನ ಮಾಹಿತಿ ಪರಿಶೀಲಿಸಲು ಸಾಧ್ಯ. ಇದಕ್ಕಾಗಿ ಪರಿವಾಹನ್ ಸೇವಾ ವೆಬ್‌ಸೈಟ್ ಭೇಟಿ ನೀಡಬೇಕು, ಇಲ್ಲಿ ಸರ್ವೀಸ್ ಆಯ್ಕೆ ಕ್ಲಿಕ್ ಮಾಡಿದ ಬಳಿಕ ಟು ನೋ ಯುವರ್ ವೆಹಿಕಲ್ ಡೀಟೆಲ್ಸ್( ನಿಮ್ಮ ವಾಹನ ಮಾಹಿತಿ) ಕ್ಲಿಕ್ ಮಾಡಬೇಕು. ವಾಹನ ನೋಂದಣಿ ಸಂಖ್ಯೆ ನಮೂದಿಸಿ ಬಳಿಕ ಕ್ಯಾಪ್ಚ ಪೂರ್ಣಗೊಳಿಸಬೇಕು. ಸಬ್‌ಮಿಟ್ ನೀಡಿದ ಬೆನ್ನಲ್ಲೇ ವಾಹನ ಮಾಲೀಕತ್ವ ಸೇರಿದಂತೆ ಇತರ ಮಾಹಿತಿಗಳು ಲಭ್ಯವಾಗಲಿದೆ.
ಎಸ್ಎಂಎಸ್
ಎಸ್ಎಂಎಸ್ ಮೂಲಕವೂ ವಾಹನ ಮಾಲೀಕತ್ವ ಪರಿಶೀಲನೆ ಸಾಧ್ಯವಿದೆ. ಎಸ್ಎಂಎಸ್ ಮೂಲಕ VAHAN ಎಂದು ಟೈಪ್ ಮಾಡಿ ಸ್ಪೇಸ್ ನೀಡಿ ಬಳಿಕ ವಾಹನ ರಿಜಿಸ್ಟ್ರೇಶನ್ ನಂಬರ್ ನಮೂದಿಸಬೇಕು. ಈ ಸಂದೇಶವನ್ನು 7738299899 ನಂಬರ್‌ಗೆ ಕಳುಹಿಸಬೇಕು. ತಕ್ಷಣವೇ ಈ ಇದಕ್ಕೆ ಪ್ರತಿಕ್ರಿಯೆ ಬರಲಿದೆ. ವಾಹನ ಸಂಪೂರ್ಣ ಮಾಹಿತಿ ಒಳಗೊಂಡ ಮಾಹಿತಿ ಬರಲಿದೆ.
ಯಾವೆಲ್ಲಾ ಮಾಹಿತಿ ಆರ್‌ಟಿಒ ದಾಖಲೆಯಲ್ಲಿರಲಿದೆ
ವಾಹನ ಮಾಲೀಕರ ಹೆಸರು
ವಾಹನ ಮಾಡೆಲ್ ಹಾಗೂ ಉತ್ಪಾದನೆ ವರ್ಷ
ವಾಹನ ಯಾವ ಕ್ಲಾಸ್ ಹಾಗೂ ಯಾವ ವಿಭಾಗಕ್ಕೆ ಸೇರಲಿದೆ(ಹ್ಯಾಚ್‌ಬ್ಯಾಕ್, ಎಸ್‌ಯುವಿ ಸೇರಿ ಇತರ ಮಾಹಿತಿ)
ಯಾವ ಇಂಧನದ ವಾಹನ
ನೋಂದಣಿ ವ್ಯಾಲಿಟಿಡಿ ಅವಧಿ
ವಾಹನದ ವಿಮೆ
ಬೆಂಗಳೂರಿನ ಅಲ್ಟ್ರಾವೊಯಿಲೆಟ್ ಇವಿ ಹತ್ತಿದ ತೇಜಸ್ವಿ ಸೂರ್ಯ, ಹೆಮ್ಮೆಯ ಬೈಕ್‌ಗೆ ಸಂಸದರ ಶಹಬ್ಬಾಷ್!