ಹಾರುವ ಕಾರಿನ ಕನಸು ನನಸಾಗುವತ್ತ: 2 ನಗರಗಳ ನಡುವೆ ಹಾರಾಡಿತು ಕಾರು!

By Kannadaprabha News  |  First Published Jul 2, 2021, 8:41 AM IST

* ನಿತ್ರಾ ನಗರದಿಂದ ಬ್ರಾಟಿಸ್ಲಾವಾಕ್ಕೆ ಹಾರಾಟ ನಡೆಸಿದ ಏರ್‌ಕಾರ್‌

* 2 ನಗರಗಳ ನಡುವೆ ಹಾರಾಡಿತು ಕಾರು

* ಹಾರುವ ಕಾರಿನ ಕನಸು ನನಸಾಗುವತ್ತ

* ರಸ್ತೆಯಲ್ಲಿ ಚಲಿಸುವ, ಬೇಕೆಂದಾಗ ಹಾರುವ ಕಾರು 35 ನಿಮಿಷ ಯಶಸ್ವಿ ಹಾರಾಟ


ಬ್ರಾಟಿಸ್ಲಾವಾ(ಜು.02): ಹಾಲಿವುಡ್‌ ಚಿತ್ರಗಳಲ್ಲಿ ಕಂಡುಬರುತ್ತಿದ್ದ ಹಾರುವ ಕಾರಿನ ಕನಸು ನನಸಾಗುವ ಕ್ಷಣ ಕೊನೆಗೂ ಸನ್ನಿಹಿತವಾಗಿದೆ. ಸ್ಲೋವಾಕಿಯಾ ಮೂಲದ ಕ್ಲೈನ್‌ ವಿಷನ್‌ ಕಂಪನಿ ಅಭಿವೃದ್ಧಿಪಡಿಸಿರುವ ‘ಏರ್‌ ಕಾರ್‌’ ಇದೆ ಮೊದಲ ಬಾರಿಗೆ ಎರಡು ನಗರಗಳ ನಡುವೆ ಯಶಸ್ವಿಯಾಗಿ ಸಂಚಾರ ನಡೆಸಿದೆ. ಈ ಮೂಲಕ ನೆಲ ಮತ್ತು ಆಗಸ ಎರಡರಲ್ಲೂ ಸಂಚರಿಸಬಲ್ಲ ಕಾರು ಬಳಕೆದಾರರಿಗೆ ಲಭ್ಯವಾಗುವ ಸಮಯ ಸನ್ನಿಹಿತವಾದ ಸುಳಿವು ಸಿಕ್ಕಿದೆ.

ಜೂ.28ರಂದು ಸ್ಲೋವಾಕಿಯಾದ ನಿತ್ರಾ ವಿಮಾನ ನಿಲ್ದಾಣದಿಂದ ಹಾರಾಟ ಕೈಗೊಂಡ ‘ಏರ್‌ ಕಾರ್‌’ ಬ್ರಾಟಿಸ್ಲಾವಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೇವಲ 35 ನಿಮಿಷದಲ್ಲಿ ಬಂದು ತಲುಪಿದೆ. ಕಂಪನಿಯ ಸಿಇಒ ಸ್ಟೀಪ್‌ ಕ್ಲೈನ್‌ ಏರ್‌ ಕಾರನ್ನು ಚಲಾಯಿಸಿದ್ದಾರೆ.

Latest Videos

undefined

ಕಳೆದ ಫೆಬ್ರವರಿಯಲ್ಲಿ ಏರ್‌ ಕಾರ್‌ ತನ್ನ ಮೊದಲ ಹಾರಾಟ ಕೈಗೊಂಡಿತ್ತು. ಸ್ಲೋವಾಕಿಯಾದ ನಾಗರಿಕ ವಿಮಾನಯಾನ ಸಂಸ್ಥೆಯ ಮೇಲ್ವಿಚಾರಣೆಯಲ್ಲಿ ಏರ್‌ ಕಾರ್‌ ಈಗಾಗಲೇ 40 ಗಂಟೆಗಳ ಪ್ರಯಾಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಹಿನ್ನೆಲೆಯಲ್ಲಿ ಶೀಘ್ರವೇ ವಾಣಿಜ್ಯಿಕವಾಗಿ ಏರ್‌ ಕಾರ್‌ ಉತ್ಪಾದನೆಗೆ ಅನುಮೋದನೆ ದೊರಕುವ ನಿರೀಕ್ಷೆ ಇದೆ.

ಕಾರಿನ ವಿಶೇಷತೆಗಳೆನು?

ಕಾರಿಗೆ 16 ಅಶ್ವ ಶಕ್ತಿಯ ಬಿಎಂಡಬ್ಲು ್ಯ ಎಂಜಿನ್‌ ಬಳಕೆ

2.15 ನಿಮಿಷದಲ್ಲಿ ಆಕಾಶಕ್ಕೆ ಜಿಗಿಯಬಲ್ಲದು, ಆದರೆ ರನ್‌ವೇ ಬೇಕು

8200 ಅಡಿ ಎತ್ತರದಲ್ಲಿ 1000 ಕಿ.ಮೀ.ದೂರ ಹಾರಾಟ ಸಾಮರ್ಥ್ಯ

ಗರಿಷ್ಠ 170ರಿಂದ 190 ಕಿ.ಮೀ. ವೇಗದಲ್ಲಿ ಹಾರಾಟ ನಡೆಸಬಲ್ಲದು

ಕಾರಿನಿಂದ ವಿಮಾನವಾಗಿ ಬದಲಾಗಲು ಎರಡೂವರೆ ನಿಮಿಷ ಸಾಕು

ಇಬ್ಬರನ್ನು ಹೊತ್ತೊಯ್ಯಬಲ್ಲ ಸಾಮರ್ಥ ಇದಕ್ಕಿದೆ

ಕಾಪ್ಟರ್‌ನಂತೆ ನೇರವಾಗಿ ಮೇಲೇರುವುದು, ಇಳಿಯುವುದು ಸಾಧ್ಯವಿಲ್ಲ.

 

click me!