ಎಲೆಕ್ಟ್ರಿಕ್ ವಾಹನ ಕ್ಷೇತ್ರದಲ್ಲಿ ಟಾಟಾ ಮೋಟಾರ್ಸ್ ದಾಖಲೆ, ಸರ್ಕಾರದಿಂದ 1,500 EV ಬಸ್ ಆರ್ಡರ್!

By Suvarna News  |  First Published Jul 24, 2022, 4:54 PM IST

ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ಟಾಟಾ ಮೋಟಾರ್ಸ್ ಅಗ್ರಸ್ಥಾನದಲ್ಲಿದೆ. ಭಾರತದಲ್ಲಿ ಕೈಗೆಟುಕುವ ದರದಲ್ಲಿ ಇವಿಗಳನ್ನು ಟಾಟಾ ಮೋಟಾರ್ಸ್ ನೀಡುತ್ತಿದೆ. ಇದೀಗ ದೆಹಲಿ ಸಾರಿಗೆ ಸಂಸ್ಥೆಯಿಂದ 1,5000 ಎಲೆಕ್ಟ್ರಿಕ್ ಬಸ್ ಆರ್ಡರ್ ಪಡೆದುಕೊಂಡಿದೆ.


ನವದೆಹಲಿ(ಜು.23) ಭಾರತದ ಅತಿದೊಡ್ಡ ವಾಣಿಜ್ಯ ವಾಹನಗಳ ತಯಾರಿಕಾ ಸಂಸ್ಥೆಯಾದ ಟಾಟಾ ಮೋಟರ್ಸ್, ಕನ್ವರ್ಜೆನ್ಸ್ ಎನರ್ಜಿ ಸರ್ವಿಸಸ್ ಲಿಮಿಟೆಡ್ ನೀಡಿದ ಅತಿದೊಡ್ಡ ಟೆಂಡರ್ ಅಡಿ ದೆಹಲಿ ಸಾರಿಗೆ ಸಂಸ್ಥೆಯಿಂದ(ಡಿಟಿಸಿ) 1500 ಎಲೆಕ್ಟ್ರಿಕ್ ಬಸ್‍ಗಳ ಪ್ರತಿಷ್ಠಿತ ಆರ್ಡರ್ ಗೆದ್ದುಕೊಂಡಿರುವುದಾಗಿ ಇಂದು ಘೋಷಿಸಿತು. ಒಪ್ಪಂದದ ಪ್ರಕಾರ, ಟಾಟಾ ಮೋಟರ್ಸ್  12-ವರ್ಷಗಳವರೆಗೆ 12-ಮೀಟರ್‍ಗಳ ತಗ್ಗಿದ ಭೂಅಂತರವಿರುವ ಪೂರ್ಣನಿರ್ಮಾಣದ ಎಲೆಕ್ಟ್ರಿಕ್ ಬಸ್‍ಗಳನ್ನು ಸರಬರಾಜು ಮಾಡಿ, ಕಾರ್ಯಾಚರಣೆ ನಡೆಸಿ ನಿರ್ವಹಿಸುತ್ತದೆ. ದೀರ್ಘಬಾಳಿಕೆ, ಪರಿಸರ-ಸ್ನೇಹಿ ಮತ್ತು ಕೈಗೆಟುಕುವಂತಹ ಸಾರ್ವಜನಿಕ ಸಂಚಾರಕ್ಕಾಗಿ ಟಾಟಾ ಸ್ಟಾರ್‍ಬಸ್ ಎಲೆಕ್ಟ್ರಿಕ್‍ಗಳು ಅತ್ಯಾಧುನಿಕ ತಂತ್ರಜ್ಞಾನ ಒದಗಿಸುತ್ತಿದ್ದು ಪ್ರಯಾಣಿಕರಿಗೆ ಸುರಕ್ಷಿತವಾದ, ಹಗುರವಾದ ಮತ್ತು ಆರಾಮದಾಯಕ ಪ್ರಯಾಣವನ್ನು ಸಾಧ್ಯಗೊಳಿಸಲು ಆಧುನಿಕ ಅಂಶಗಳೊಂದಿಗೆ ಸಜ್ಜುಗೊಂಡಿವೆ.

ಈ ಸಂದರ್ಭದಲ್ಲಿ ಮಾತನಾಡುತ್ತಾ, ಒಡಿ.ದೆಹಲಿ ಸಾರಿಗೆ ಸಂಸ್ಥೆಯ ಎಮ್‍ಡಿ- ಶ್ರೀ ನೀರಜ್ ಸೆಮ್ವಾಲ್, ಐಎಎಸ್, “ಟಾಟಾ ಮೋಟರ್ಸ್‍ಗೆ 1500 ಎಲೆಕ್ಟ್ರಿಕ್ ಬಸ್‍ಗಳ ಆರ್ಡರ್‍ಅನ್ನು ಖಾತ್ರಿಪಡಿಸುತ್ತಿರುವುದಕ್ಕೆ ನಮಗೆ ಸಂತೋಷವಾಗುತ್ತಿದೆ. ಪರಿಸರ-ಸ್ನೇಹಿ ಬಸ್‍ಗಳ ಪರಿಚಯವು ಬೃಹತ್ ಪ್ರಮಾಣದಲ್ಲಿ ವಾಯುಮಾಲಿನ್ಯವನ್ನು ಕಡಿಮೆಗೊಳಿಸಲು ನೆರವಾಗುವುದರ ಜೊತೆಗೆ ಲಕ್ಷಾಂತರ ದೆಹಲಿ ನಾಗರಿಕರಿಗೆ ಪ್ರಯೋಜನವನ್ನುಂಟು ಮಾಡಲಿದೆ. ಪ್ರಯಾಣಿಕರು, ಮತ್ತು ದೊಡ್ಡಪ್ರಮಾಣದಲ್ಲಿ ಸಮಾಜಕ್ಕೆ ಉಪಯೋಗವಾಗುವಂತಹ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸುವುದಕ್ಕೆ ಡಿಟಿಸಿ ಬದ್ಧವಾಗಿದೆ.”ಎಂದು ಹೇಳಿದರು.

Latest Videos

undefined

 

ಹಚ್ಚುವರಿ ಫೀಚರ್ಸ್ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ನೆಕ್ಸಾನ್ EV ಪ್ರೈಮ್‍ ಕಾರು ಬಿಡುಗಡೆ!

ಕನ್ವರ್ಜೆನ್ಸ್ ಎನರ್ಜಿ ಸರ್ವಿಸಸ್ ಲಿಮಿಟೆಡ್ (ಸಿಇಎಸ್‍ಎಲ್)ನ ಎಮ್‍ಡಿ ಮತ್ತು ಸಿಇಒ ಮಿಸ್ ಮಹುವಾ ಆಚಾರ್ಯ, “ಸಿಇಎಸ್‍ಎಲ್‍ನ ಮಹಾಸವಾಲಿನಡಿ ಎಲೆಕ್ಟ್ರಿಕ್ ಬಸ್‍ಗಳಿಗಾಗಿ ಡಿಟಿಸಿ ತನ್ನ ಅತಿದೊಡ್ಡ ಆರ್ಡರ್ ನೀಡಿರುವುದಕ್ಕೆ ನಮಗೆ ಅತ್ಯಂತ ಸಂತೋಷವಾಗುತ್ತಿದೆ. ಎಲೆಕ್ಟ್ರಿಕ್ ಬಸ್‍ಗಳಿಗೆ ಪರಿವರ್ತನೆಗೊಳ್ಳುವುದರಲ್ಲಿ ದೆಹಲಿ ಸರ್ಕಾರವು ಅತ್ಯಂತ ನಿದರ್ಶನೀಯ ನಾಯಕತ್ವ ಪ್ರದರ್ಶಿಸಿದೆ. ಇದರ ಪ್ರಯೋಜನ ಪಡೆದಿರುವುದು ನಮ್ಮ ಅದೃಷ್ಟ ಮತ್ತು ಟಾಟಾ ಮೋಟರ್ಸ್‍ನ ಉದಾರ ಸಹಯೋಗಕ್ಕಾಗಿ ನಾವು ಅವರಿಗೆ ಆಭಾರಿಯಾಗಿದ್ದೇವೆ.”ಎಂದು ಹೇಳಿದರು.

ಈ ಸ್ಮರಣೀಯ ಸಂದರ್ಭದಲ್ಲಿ ಟಾಟಾ ಮೋಟರ್ಸ್‍ನ ಪ್ರಾಡಕ್ಟ್ ಲೈನ್-ಬಸಸ್ ವಿಭಾಗದ ಉಪಾಧ್ಯಕ್ಷ ಶ್ರೀ ರೋಹಿತ್ ಶ್ರೀವಾಸ್ತವ, “ಡಿಟಿಸಿಯಿಂದ ಎಲೆಕ್ಟ್ರಿಕ್ ಬಸ್‍ಗಳಿಗಾಗಿ ಅತಿದೊಡ್ಡ ಆರ್ಡರ್ ಗೆದ್ದುಕೊಂಡಿರುವುದಕ್ಕೆ ನಮಗೆ ಅತ್ಯಂತ ಹರ್ಷವಾಗುತ್ತಿದೆ. ಈ ಬಸ್‍ಗಳ ಡೆಲಿವರಿ, ಡಿಟಿಸಿಯೊಂದಿಗಿನ ನಮ್ಮ ಸಹಭಾಗಿತ್ವವನ್ನು ಇನ್ನಷ್ಟು ಬಲಪಡಿಸಲಿದ್ದು ದೆಹಲಿ ನಗರದಲ್ಲಿ ಪರಿಸರ-ಸ್ನೇಹಿ ಸಾರ್ವಜನಿಕ ಸಂಚಾರಕ್ಕೆ ನೆರವಾಗಲಿದೆ.”ಎಂದರು.

ಇವಿ ವಲಯದಲ್ಲಿ ಅತಿ ಹೆಚ್ಚು ಮಾಸಿಕ ಮಾರಾಟ ದಾಖಲಿಸಿದ ಟಾಟಾ ಮೋಟರ್ಸ್

ಭಾರತದಕ್ಕೆ ಪರಿಸರ-ಸ್ನೇಹಿ ಸಾರಿಗೆ ಸೌಲಭ್ಯವನ್ನು ತರುವಲ್ಲಿ ಟಾಟಾ ಮೋಟರ್ಸ್ ಮುಂಚೂಣಿಯಲ್ಲಿದೆ. ಇದರ ಅತ್ಯಾಧುನಿಕ ಸಂಶೋಧನೆ ಮತ್ತು ಅಭಿವೃದ್ಧಿ ಘಟಕಗಳು, ಬ್ಯಾಟರಿ-ಎಲೆಕ್ಟ್ರಿಕ್, ಹೈಬ್ರಿಡ್, ಸಿಎನ್‍ಜಿ, ಎಲ್‍ಎನ್‍ಜಿ ಮತ್ತು ಹೈಡ್ರೋಜನ್ ಸೆಲ್ ಫ್ಯುಯೆಲ್ ತಂತ್ರಜ್ಞಾನ ಒಳಗೊಂಡಂತೆ ಪರ್ಯಾಯ ಇಂಧನ ತಂತ್ರಜ್ಞಾನದ ಮೂಲಕ ವಿನೂತನವಾದ ಪರಿಹಾರಗಳನ್ನು ಸಾಧ್ಯಗೊಳಿಸುವೆಡೆ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿವೆ. ಇಂದಿನವರೆಗೂ ಟಾಟಾ ಮೋಟರ್ಸ್. ಭಾರತದಲ್ಲಿ ಅನೇಕ ನಗರಗಳಲ್ಲಿ 650ಕ್ಕಿಂತ ಹೆಚ್ಚಿನ ಎಲೆಕ್ಟ್ರಿಕ್ ಬಸ್‍ಗಳನ್ನು ಸರಬರಾಜು ಮಾಡಿದ್ದು, ಸಂಘಟಿತವಾಗಿ ಇವೆಲ್ಲವೂ 39 ದಶಲಕ್ಷ ಕಿಲೋಮೀಟರ್ ಕ್ರಮಿಸಿವೆ.

click me!