ಭಾರತದಲ್ಲಿ ಆಟೋಮೊಬೈಲ್ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಾಗಿದೆ. ಕಾರಿನ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಹೀಗಾಗಿ ಕಾರಿನಾ ಸುರಕ್ಷತಾ ರೇಟಿಂಗ್ ಪ್ರಕಟಿಸುವುದು ಕಡ್ಡಾಯವಾಗಿದೆ. ಇದೀಗ 2 ಏರ್‌ಬ್ಯಾಗ್ ಕಡ್ಡಾಯ ನಿಯಮದಿಂದ ಇದೀಗ ಭಾರತ ಕಾರುಗಳಿಗ 6 ಏರ್‌ಬ್ಯಾಗ್ ಕಡ್ಡಾಯ ನಿಯಮ ಜಾರಿ ಮಾಡಿದೆ. ಈ ಹೊಸ ನಿಯಮ ಯಾವಾಗ ಅನುಷ್ಟಾನ, ಸದ್ಯ 2 ಏರ್‌ಬ್ಯಾಗ್ ಅಥವಾ ಏರ್‌ಬ್ಯಾಗ್ ಇಲ್ಲದೇ ಇರುವ ಕಾರುಗಳಿದೆ ದಂಡ ಹಾಕುತ್ತಾರಾ? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ನವದೆಹಲಿ(ಸೆ.29): ಭಾರತದ ವಾಹನ ಸುರಕ್ಷತಾ ನಿಯಮ ಮತ್ತಷ್ಟು ಕಠಿಣವಾಗಿದೆ. ಇದೀಗ ವಿದೇಶದಲ್ಲಿರುವಂತ ಕಠಿಣ ನಿಯಮ ಭಾರತದಲ್ಲೂ ಇದೆ. ಈಗಾಗಲೇ ಪ್ರಯಾಣಿಕರ ಕಾರು ಕೆಲ ಮಾನದಂಡಗಳನ್ನು ಹೊಂದಿರಲೇಬೇಕು. ಈ ಮಾನದಂಡಗಳನ್ನು ಇದೀಗ ಪರಿಷ್ಕರಿಸಲಾಗಿದೆ. ಇದರಲ್ಲಿ ಪ್ರಮುಖವಾಗಿ ಭಾರತದಲ್ಲಿ ಇಷ್ಟು ದಿನ ಕಾರುಗಳಿಗೆ 2 ಏರ್‌ಬ್ಯಾಗ್ ಕಡ್ಡಾಯವಾಗಿತ್ತು. ಆದರೆ ಇದೀಗ 6 ಏರ್‌ಬ್ಯಾಗ್ ಕಡ್ಡಾಯ ಮಾಡಲಾಗಿದೆ. ಪರ ವಿರೋಧದ ನಡುವೆ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಆಟೋಮೊಬೈಲ್ ಕಂಪನಿಗಳಿಗೆ ಅಂತಿಮ ಗಡುವು ನೀಡಿದ್ದಾರೆ. 2023ರ ಅಕ್ಟೋಬರ್ 1 ರಿಂದ ಎಲ್ಲಾ ಹೊಸ ಕಾರುಗಳಲ್ಲಿ(M-1 ವಿಭಾಗ) 6 ಏರ್‌ಬ್ಯಾಗ್ ಕಡ್ಡಾಯವಾಗಿದೆ.
6 ಏರ್‌ಬ್ಯಾಗ್(6 Airbags) ಕಡ್ಡಾಯನಿಯಮದಿಂದ ಕಾರಿನ ಬೆಲೆ ದುಬಾರಿಯಾಗಲಿದೆ. ಇದರಿಂದ ಮಧ್ಯಮ ವರ್ಗದ ಜನರಿಗೆ ಕಾರು(Car) ಕೈಗೆಟುಕದ ವಸ್ತುವಾಗಲಿದೆ. ಕಾರು ಮಾರಾಟ ಸಂಪೂರ್ಣ ಕುಸಿತವಾಗಲಿದೆ. ಹೀಗಾಗಿ 6 ಏರ್‌ಬ್ಯಾಗ್ ಕಡ್ಡಾಯ(Passenger Vehicle) ನಿಯಮ ಹಿಂಪಡೆಯಬೇಕು ಎಂದು ಹಲವು ಆಟೋಮೊಬೈಲ್ ಕಂಪನಿಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿತ್ತು. ಈ ಕುರಿತು ಸ್ಪಷ್ಟನೆ ನೀಡಿರುವ ನಿತಿನ್ ಗಡ್ಕರಿ(Nitin Gadkari), ಕಾರಿನಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರ ಸುರಕ್ಷತೆಗೆ(vehicle safety) ಮೊದಲ ಆದ್ಯತೆ. ಹೀಗಾಗಿ 6 ಏರ್‌ಬ್ಯಾಗ್ ಕಡ್ಡಾಯವಾಗಿದೆ. ಕಾರಿನ ಬೆಲೆ ಏರಿಕೆಯಾದರೂ ನಿಯಮದಲ್ಲಿ ಯಾವುದೇ ಬದಲಾವಣೆ ಇಲ್ಲ. ಕಾರಿನ ಬೆಲೆಗಿಂತ ಜೀವದ ಬೆಲೆ ಹೆಚ್ಚಿದೆ ಎಂದು ಗಡ್ಕರಿ ಹೇಳಿದ್ದಾರೆ.
ಕಾರ್‌ಗಳಲ್ಲಿ 6 ಏರ್ ಬ್ಯಾಗ್ ಪ್ರಚಾರ, ಅಕ್ಷಯ್ ಕುಮಾರ್‌ರನ್ನ ಹೊಗಳಿದ ನಿತಿನ್ ಗಡ್ಕರಿ!
ಟಾಟಾ ಸನ್ಸ್ ಮಾಜಿ ಚೇರ್ಮೆನ್ ಸೈರಸ್ ಮಿಸ್ತ್ರಿ(Cyrus Mistry) ಅಪಘಾತದಲ್ಲಿ ನಿಧನರಾದ ಬಳಿಕ ಕಾರಿನ ಸುರಕ್ಷತೆ, ಸೀಟ್ ಬೆಲ್ಟ್, ಏರ್‌ಬ್ಯಾಗ್ ಕುರಿತು ಸಾಕಷ್ಟು ಚರ್ಚೆಗಳಾಗಿವೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಇದೀಗ 6 ಏರ್‌ಬ್ಯಾಗ್ ಕಡ್ಡಾಯ ಮುದ್ರೆ ಒತ್ತಿದೆ. ಶೀಘ್ರದಲ್ಲೇ ಜಾರಿಯಾಗಬೇಕಿದ್ದ ಈ ಕಡ್ಡಾಯ ನಿಯಮವನ್ನು ಮುಂದಿನ ವರ್ಷದ ಅಕ್ಟೋಬರ್ 1 ರ ವರೆಗೆ ಕಾಲಾವಕಾಶ ನೀಡಲಾಗಿದೆ.
2 ಏರ್‌ಬ್ಯಾಗ್, ಏರ್‌ಬ್ಯಾಗ್ ಇಲ್ಲದ ಕಾರಿಗೆ ದಂಡ ಹಾಕುತ್ತಾರಾ?
ಅಕ್ಟೋಬರ್ 1, 2023ರಿಂದ ಉತ್ಪಾದನೆಯಾಗುವ, ಮಾರಾಟವಾಗುವ ಹೊಸ ಕಾರುಗಳಲ್ಲಿ 6 ಏರ್‌ಬ್ಯಾಗ್ ಕಡ್ಡಾಯವಾಗಿರಬೇಕು. ಅಲ್ಲೀವರೆಗೆ ಸದ್ಯ ಇರುವ 2 ಏರ್‌ಬ್ಯಾಗ್ ನಿಯಮ ಚಾಲ್ತಿಯಲ್ಲಿರಲಿದೆ. ಇನ್ನು ಈಗಾಗಲೇ ವಾಹನ ಖರೀದಿಸಿದವರು ಹೊಸ ನಿಯಮದಿಂದ ಆತಂಕ ಪಡಬೇಕಿಲ್ಲ. ಆದರೆ ಎಚ್ಚರಿಕೆಯಿಂದ ಚಾಲನೆ ಮಾಡಬೇಕು ಅಷ್ಟೆ. ಕಾರಣ ಅಕ್ಟೋಬರ್ 1 , 2023ರಿಂದ ಮಾರಾಟವಾಗುವ ಹೊಸ ಕಾರುಗಳು, ಉತ್ಪಾದನೆಯಾಗುವ ಹೊಸ ಕಾರುಗಳಿಗೆ ಈ ನಿಯಮ ಅನ್ವಯಿಸಲಿದೆ.
ಸೀಟ್‌ಬೆಲ್ಟ್ ಧರಿಸದಿದ್ದರೆ ಕಾರಿನ ಏರ್‌ಬ್ಯಾಗ್ಸ್ ನಿಷ್ಪ್ರಯೋಜಕ ಏಕೆ?
ಭಾರತದಲ್ಲಿ ಶೇ.90ರಷ್ಟು ಕಾರಿಗೆ 6 ಏರ್‌ಬ್ಯಾಗಿಲ್ಲ
ಭಾರತದ ರಸ್ತೆಗಳಲ್ಲಿ ಸಂಚರಿಸುವ ಕಾರುಗಳ ಪೈಕಿ ಶೇ.90ರಷ್ಟರಲ್ಲಿ ಜೀವರಕ್ಷಣೆಗೆ ನೆರವಾಗುವ 6 ಏರ್‌ಬ್ಯಾಗ್ ವ್ಯವಸ್ಥೆ ಇಲ್ಲ. ಕಾರಣ ಭಾರತದಲ್ಲಿ ಜನ ಅಗ್ಗದ ದರ ಕಾರುಗಳಿಗೆ ಹೆಚ್ಚಾಗಿ ಮೊರೆ ಹೋಗುತ್ತಾರೆ ಎಂದು ವರದಿಯೊಂದು ತಿಳಿಸಿದೆ.ಕೇವಲ 2 ಏರ್‌ಬ್ಯಾಗ್‌ಗಳನ್ನು ಮಾತ್ರ ಹೊಂದಿರುವ ಕಾರುಗಳ ಬೆಲೆ ಕಡಿಮೆ ಇದ್ದು, ಹೆಚ್ಚು ಜನರು ಈ ಕಾರುಗಳನ್ನು ಕೊಳ್ಳಲು ಬಯಸುತ್ತಾರೆ.