ಜೂನ್ 1 ರಿಂದ ಡ್ರೈವಿಂಗ್ ಲೈಸೆನ್ಸ್‌ಗೆ ಹೊಸ ನಿಯಮ, RTO ಎದುರು ಟೆಸ್ಟ್ ಮಾಡಬೇಕಿಲ್ಲ!

By Chethan Kumar  |  First Published May 21, 2024, 7:06 PM IST

ಡ್ರೈವಿಂಗ್ ಲೈಸೆನ್ಸ್ ಪಡೆಯಲು ಆರ್‌ಟಿಒ ಮುಂದೆ ಟೆಸ್ಟ್ ಡ್ರೈವ್ ಅಥವಾ ರೈಡ್ ಮಾಡಬೇಕು. ಇಲ್ಲಿ ಪಾಸ್ ಆದರೆ ಲೈಸೆನ್ಸ್ ಕೈ ಸೇರಲಿದೆ. ಇನ್ಮುಂದೆ ಆರ್‌ಟಿಎ ಎದರು ಡ್ರೈವಿಂಗ್ ಟೆಸ್ಟ್ ಮಾಡಬೇಕಿಲ್ಲ. ಹೊಸ ನಿಯಮ ಜೂನ್ 1ರಿಂದ ಜಾರಿಯಾಗುತ್ತಿದೆ. 
 


ನವದೆಹಲಿ(ಮೇ.21) ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಹೊಸ ನಿಯಾಮಳಿ ರೂಪಿಸಿದೆ. ಪ್ರಮುಖವಾಗಿ ಡ್ರೈವಿಂಗ್ ಲೈಸೆನ್ಸ್ ಪಡೆಯುವ ವಿಧಾನವನ್ನೇ ಬದಲಿಸಿದೆ. ಈ ಹೊಸ ನಿಯಮ ಜೂನ್ 1 ರಿಂದ ಜಾರಿಯಾಗಲಿದೆ.  ಇನ್ಮುಂದೆ ಡ್ರೈವಿಂಗ್ ಲೈಸೆನ್ಸ್ ಪಡೆಯಲು ವಾಹನ ಕಲಿತು ಆರ್‌ಟಿಒ ಎದರು ಪರೀಕ್ಷೆ ಪಾಸ್ ಮಾಡಬೇಕಿಲ್ಲ.  ಆರ್‌ಟಿಒ ಎದುರು ಡ್ರೈವಿಂಗ್ ಟೆಸ್ಟ್ ಮಾಡದೇ ಲೈಸೆನ್ಸ್ ಪಡೆಯಲು ಅವಕಾಶ ಮಾಡಿಕೊಡಲಾಗಿದೆ.

ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ಹೊಸ ನಿಯಮದ ಪ್ರಕಾರ, ಡ್ರೈವಿಂಗ್ ಪರೀಕ್ಷೆಯನ್ನು ಖಾಸಗಿ ಸಂಸ್ಥೆಗಳು ಮಾಡಲಿದೆ. ಸರ್ಕಾರದಿಂದ ಅಧಿಕೃತ ಪರವಾನಗೆ ಪಡೆದ ಖಾಸಗಿ ಸಂಸ್ಥೆಗಳೇ ಲೈಸೆನ್ಸ್ ನೀಡಲಿದೆ. ಜೂನ್ 1, 2024ರಿಂದ ಡ್ರೈವಿಂಗ್ ಲೈಸೆನ್ಸ್ ಪಡೆಯಲು, ಈ ಖಾಸಗಿ ತರಬೇತಿ ಸಂಸ್ಥೆಗಳಲ್ಲಿ ಕಾರು, ದ್ವಿಚಕ್ರ ವಾಹನ ಅಥವಾ ಇತರ ವಾಹನ ಕಲಿತು, ಅದೇ ಸಂಸ್ಥೆಯ ಅಧಿಕಾರಿಗಳ ಮುಂದೆ ಟ್ರೈಯಲ್ ನೀಡಬೇಕು. ಖಾಸಗಿ ಸಂಸ್ಥೆಗಳ ಸಿಬ್ಬಿಂಧಿಗಳು ಅಥವಾ ಅಧಿಕಾರಿಗಳು ಡ್ರೈವಿಂಗ್ ಲೈಸೆನ್ಸ್ ಪ್ರಮಾಣಪತ್ರ ನೀಡಲಿದ್ದಾರೆ.

Tap to resize

Latest Videos

undefined

ಸಾರ್ವಜನಿಕರಿಗೆ ಹೊಸ ವರ್ಷದ ಶಾಕ್, ಕರ್ನಾಟಕದಲ್ಲಿ ಡ್ರೈವಿಂಗ್ ಲೈಸೆನ್ಸ್ ಮತ್ತಷ್ಟು ದುಬಾರಿ!

ಖಾಸಗಿ ವಾಹನ ತರಬೇತಿ ಸಂಸ್ಥೆಗಳಲ್ಲಿ ನೀವು ಡ್ರೈವಿಂಗ್ ಅಥವಾ ರೈಡಿಂಗ್ ಸಾಬೀತುಪಡಿಸಬೇಕು. ತರಬೇತಿ ಸಂಸ್ಥೆಯಲ್ಲಿ ಕಲಿತು, ಆರ್‌ಟಿಒ ಮುಂದೆ ಟೆಸ್ಟ್ ನೀಡುವ ಪರಿಪಾಠಕ್ಕೆ ಬ್ರೇಕ್ ಹಾಕಲಾಗಿದೆ. ಇದರ ಜೊತೆಗೆ ಟ್ರಾಫಿಕ್ ನಿಯಮ ದಂಡದಲ್ಲೂ ಮಹತ್ತರ ಬದಲಾವಣೆ ಮಾಡಲಾಗಿದೆ. ಈ ಪೈಕಿ ಅತೀವೇಗದ ಪ್ರಯಾಣಕ್ಕೆ 1,000 ರೂಪಾಯಿಂದ 2,000 ರೂಪಾಯಿ ಇದೆ. ಆದರೆ ಅಪ್ರಾಪ್ತರು ವಾಹನ ಚಲಾಯಿಸಿದರೆ ಬರೋಬ್ಬರಿ 25,000 ರೂಪಾಯಿ ದಂಡ ವಿಧಿಸಲಾಗುತ್ತದೆ. ಇಷ್ಟೇ ಅಲ್ಲ ಕಾರು ಮಾಲೀಕರ ರಿಜಿಸ್ಟ್ರೇಶನ್ ರದ್ದಾಗಲಿದೆ. ಇತ್ತ ಅಪ್ರಾಪ್ತ 25 ವರ್ಷಗಳ ವರೆಗೆ ಲೈಸೆನ್ಸ್ ಪಡೆಯುವಂತಿಲ್ಲ. 

ಇನ್ನು ಸರ್ಕಾರದಿಂದ ಲೈಸೆನ್ಸ್ ನೀಡಲು ಅಧಿಕೃತ ಪರವಾನಗೆ ಪಡೆಯುವ ಸಂಸ್ಥಗಳಿಗೂ ಮಾನದಂಡ ರೂಪಿಸಲಾಗಿದೆ. ಇದೇ ವೇಳೆ ಲೈಸೆನ್ಸ್, ಅರ್ಜಿ ಸೇರಿದಂತೆ ಶುಲ್ಕ ವಿಧಿಸುವಲ್ಲೂ ಸರ್ಕಾರ ನಿಯಮ ರೂಪಿಸಿದೆ.

ಲರ್ನಿಂಗ್ ಲೈಸೆನ್ಸ್(ಫಾರ್ಮ್ 3) : 150 ರೂಪಾಯಿ
ಲರ್ನಿಂಗ್ ಲೈಸೆನ್ಸ್ ಪರೀಕ್ಷಾ ಶುಲ್ಕಾ ( ಅಥವಾ ಮರಳಿ ಪ್ರಯತ್ನ) : 50 ರೂಪಾಯಿ
ಡ್ರೈವಿಂಗ್ ಲೈಸೆನ್ಸ್ ಟೆಸ್ಟ್ ಶುಲ್ಕ: 300 ರೂಪಾಯಿ
ಡ್ರೈವಿಂಗ್ ಲೈಸೆನ್ಸ್ ನೀಡುವ ಶುಲ್ಕ : 200 ರೂಪಾಯಿ
ಅಂತಾರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಶುಲ್ಕ:1000 ರೂಪಾಯಿ
ಹೆಚ್ಚುವರಿ ವಾಹನ ಕ್ಲಾಸ್ ಲೈಸೆನ್ಸ್ ಶುಲ್ಕ: 500 ರೂಪಾಯಿ
ಲೈಸೆನ್ಸ್ ನವೀಕರಣ ಶುಲ್ಕ : 200 ರೂಪಾಯಿ
ಅವಧಿ ಬಳಿ ಲೈಸೆನ್ಸ್ ನವೀಕರಣ ಶುಲ್ಕ : 300 ರೂಪಾಯಿ
ಅವಧಿ ಮುಗಿದ ಒಂದು ವರ್ಷದ ಬಳಿಕ ನವೀಕರಣ: 1000 ರೂಪಾಯಿ 

ಸತತ 5 ವರ್ಷದ ಪ್ರಯತ್ನ, ಕೈಗಳಿಲ್ಲದ ಯುವತಿಗೆ ಸಿಕ್ಕಿತು 4 ವ್ಹೀಲರ್ ಡ್ರೈವಿಂಗ್ ಲೈಸೆನ್ಸ್!

click me!