
ಭಾರತದಲ್ಲಿ ವಾಹನ ಚಲಾಯಿಸಲು ಅರ್ಹ ವಯಸ್ಕರು ಪರವಾನಗಿ ಪಡೆಯಬೇಕೆಂಬ ನಿಯಮವಿದೆ. ಆದರೂ, ದೇಶದ ಚಿಕ್ಕ ಗ್ರಾಮಗಳಲ್ಲಿ ಮಕ್ಕಳು ಕೂಡ ವಾಹನಗಳನ್ನು ಚಲಾಯಿಸುತ್ತಾರೆ. ಇದು ತಪ್ಪು. ಆದರೂ ಪೋಷಕರು ವಾಹನವನ್ನು ಮಕ್ಕಳಿಗೆ ಕೊಡುತ್ತಾರೆ ಅಥವಾ ಮಕ್ಕಳು ಪೋಷಕರ ಮಾತು ಮೀರಿ ವಾಹನವನ್ನು ಓಡಿಸುತ್ತಾರೆ. ಪರವಾನಗಿ ಎಂಬುದು ಕಾನೂನಿನ ಪ್ರಕಾರ ಹಕ್ಕು. ಪರವಾನಗಿ ಹೊಂದಿಲ್ಲದಿರುವುದು ಭಾರತೀಯ ದಂಡ ಸಂಹಿತೆಗೆ ಒಳಪಟ್ಟಿದೆ.
ಭಾರತದಲ್ಲಿ ನೀಡಲಾಗುವ ಚಾಲನಾ ಪರವಾನಗಿ:
ಕಲಿಕಾ ಪರವಾನಗಿ (Learning License): ಭಾರತದಲ್ಲಿ, ವಾಹನ ಚಲಾಯಿಸಲು ಕಲಿಯುತ್ತಿರುವ ವ್ಯಕ್ತಿಗಳಿಗೆ ನೀಡಲಾಗುವ ಪರವಾನಗಿ ಇದು. ಆರು ತಿಂಗಳ ಕಾಲ ಮಾನ್ಯವಾಗಿರುವ ಈ ಪರವಾನಗಿ ಮುಗಿದ ನಂತರ ಶಾಶ್ವತ ಚಾಲನಾ ಪರವಾನಗಿಗೆ ಅರ್ಜಿ ಸಲ್ಲಿಸಬಹುದು.
ಶಾಶ್ವತ ಚಾಲನಾ ಪರವಾನಗಿ: RTO ನಡೆಸುವ ಚಾಲನಾ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಮಾತ್ರ ಈ ಪರವಾನಗಿ ನೀಡಲಾಗುತ್ತದೆ. ಇದನ್ನು ಹೊಂದಿರುವವರು ನಿರ್ದಿಷ್ಟ ಪ್ರಕಾರದ ವಾಹನವನ್ನು ಚಲಾಯಿಸಲು ಅನುಮತಿಸುತ್ತದೆ.
ವಾಣಿಜ್ಯ ಚಾಲನಾ ಪರವಾನಗಿ: ಲಾರಿಗಳು, ಬಸ್ಸು, ಟ್ಯಾಕ್ಸಿಗಳಂತಹ ಸಾರ್ವಜನಿಕ ಸೇವೆಗಳ ವಾಹನಗಳನ್ನು ಚಲಾಯಿಸುವ ವ್ಯಕ್ತಿಗಳಿಗೆ ಈ ಪರವಾನಗಿ ನೀಡಲಾಗುತ್ತದೆ.
ಅಂತಾರಾಷ್ಟ್ರೀಯ ಚಾಲನಾ ಅನುಮತಿ (IDP): ವಿದೇಶಗಳಲ್ಲಿ ವಾಹನ ಚಲಾಯಿಸಲು ಈ ಪರವಾನಗಿ ನೀಡಲಾಗುತ್ತದೆ.
ಭಾರತದಲ್ಲಿ ಯಾವ ರೀತಿಯ ವಾಹನ ಹೊಂದಿರುವವರಿಗೆ ಯಾವ ಪರವಾನಗಿ ಎಂದು ನೋಡೋಣ:
ಶಾಶ್ವತ ಚಾಲನಾ ಪರವಾನಗಿ:
MC 50CC (Motorcycle 50CC) - ಮೋಟಾರ್ ಸಾಮರ್ಥ್ಯ 50CC ಅಥವಾ ಅದಕ್ಕಿಂತ ಕಡಿಮೆ ಸಾಮರ್ಥ್ಯದ ವಾಹನಗಳು
MCWOG/FVG - ಯಾವುದೇ ಇಂಜಿನ್ ಪ್ರಕಾರವಾಗಿದ್ದರೂ, ಆದರೆ ಗಿಯರ್ ಇಲ್ಲದ ಮೋಪೆಡ್ ಮತ್ತು ಸ್ಕೂಟರ್ ಸೇರಿ LMV-NT - ಸಾರಿಗೆಯಲ್ಲದ ಉದ್ದೇಶಗಳಿಗಾಗಿ ಬಳಸಲಾಗುವ ಹಗುರ ಮೋಟಾರ್ ವಾಹನಗಳು
MC EX50CC - ಗಿಯರ್ ಹೊಂದಿರುವ ಮೋಟಾರ್ ಸೈಕಲ್‌ಗಳು, 50CC ಅಥವಾ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಮೋಟಾರ್ ಸೈಕಲ್‌ಗಳು, ಕಾರುಗಳು ಸೇರಿದಂತೆ ಹಗುರ ಮೋಟಾರ್ ವಾಹನಗಳು (LMV)
ಗೇರ್ ಹೊಂದಿರುವ MC ಅಥವಾ M/CYCL.WG ಗಿಯರ್ ಹೊಂದಿರುವ ಎಲ್ಲ ಮೋಟಾರ್ ಸೈಕಲ್‌ಗಳು
ವಾಣಿಜ್ಯ ವಾಹನಗಳಿಗೆ:
MGV ಮಧ್ಯಮ ಸರಕು ವಾಹನಗಳು
LMV ಮೋಟಾರ್ ಕಾರುಗಳು, ಜೀಪ್, ಟ್ಯಾಕ್ಸಿಗಳು, ವಿತರಣಾ ವ್ಯಾನ್‌ಗಳು ಸೇರಿ ಹಗುರ ಮೋಟಾರ್ ವಾಹನಗಳು
HMV ಭಾರಿ ಮೋಟಾರ್ ವಾಹನಗಳು
HGMV ಭಾರಿ ವಸ್ತುಗಳನ್ನು ಸಾಗಿಸುವ ಮೋಟಾರ್ ವಾಹನ
HPMV/HTV ಭಾರಿ ಪ್ರಯಾಣಿಕರ ಮತ್ತು ಭಾರಿ ಸಾರಿಗೆ ವಾಹನ
ಟ್ರೇಲರ್‌ನಂತಹ ಭಾರಿ ವಾಹನ ಚಾಲನಾ ಪರವಾನಗಿ ಹೊಂದಿರುವ ವ್ಯಕ್ತಿ ಭಾರಿ ಟ್ರೇಲರ್ ಪರವಾನಗಿಗೆ ಅರ್ಜಿ ಸಲ್ಲಿಸಬಹುದು.
ಭಾರತದಲ್ಲಿ ಚಾಲನಾ ಪರವಾನಗಿಗೆ ವಯಸ್ಸಿನ ಅರ್ಹತೆ ಮತ್ತು ಮಾನದಂಡಗಳು:
50ccವರೆಗಿನ ಯಂತ್ರ ಸಾಮರ್ಥ್ಯದ ಗೇರ್ ಇಲ್ಲದ ವಾಹನಗಳು: 16 ವರ್ಷ ವಯಸ್ಸಾಗಿರಬೇಕು, ಪೋಷಕರ ಒಪ್ಪಿಗೆ ಅಗತ್ಯ
ಗೇರ್ ವಾಹನಗಳು: 18 ವರ್ಷ ತುಂಬಿರಬೇಕು, ಸಂಚಾರ ನಿಯಮಗಳ ಬಗ್ಗೆ ತಿಳಿದಿರಬೇಕು
ವಾಣಿಜ್ಯ ವಾಹನಗಳು: 20 ವರ್ಷ (ಕೆಲವು ರಾಜ್ಯಗಳಲ್ಲಿ 18 ವರ್ಷ) ತುಂಬಿರಬೇಕು, 8ನೇ ತರಗತಿಯವರೆಗೆ ಔಪಚಾರಿಕ ಶಿಕ್ಷಣ ಪೂರ್ಣಗೊಳಿಸಿರಬೇಕು. ಸರ್ಕಾರಿ ಅಥವಾ ಸರ್ಕಾರ ಅನುಮೋದಿತ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದಿರಬೇಕು.
ಚಾಲನಾ ಪರವಾನಗಿಗೆ ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:
ಭಾರತದಲ್ಲಿ ಚಾಲನಾ ಪರವಾನಗಿಗೆ ಅರ್ಜಿ ಸಲ್ಲಿಸಲು ಕೆಳಗೆ ಪಟ್ಟಿ ಮಾಡಿರುವ ದಾಖಲೆಗಳು ಅಗತ್ಯ:
ವಯಸ್ಸಿನ ಪ್ರಮಾಣಪತ್ರ: ಜನನ ಪ್ರಮಾಣಪತ್ರ, ಶಾಲಾ ಅಂತಿಮ ಪ್ರಮಾಣಪತ್ರ, ಪಾಸ್‌ಪೋರ್ಟ್, ಪ್ಯಾನ್ ಕಾರ್ಡ್ ಅಗತ್ಯ
ಗುರುತಿನ ಪ್ರಮಾಣಪತ್ರ: ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್ ಮುಂತಾದವು.
ವಿಳಾಸದ ಪ್ರಮಾಣಪತ್ರ: ಮನೆ ವಿಳಾಸ, ವಿದ್ಯುತ್ ಬಿಲ್, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪಾಸ್‌ಪೋರ್ಟ್ ಮುಂತಾದವು.
ಇತರ ಅಗತ್ಯವಿರುವ ದಾಖಲೆಗಳು:
ಚಾಲನಾ ಕಲಿಕಾ ಪರವಾನಗಿಗೆ ಅರ್ಜಿ ಸಲ್ಲಿಸುವಾಗ 3 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳ ಅಗತ್ಯವಿದೆ.
ಅರ್ಜಿ ಶುಲ್ಕ:
ಸರಿಯಾಗಿ ಭರ್ತಿ ಮಾಡಿದ ಅರ್ಜಿ ನಮೂನೆ
40 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಅರ್ಜಿದಾರರಿಗೆ ವೈದ್ಯಕೀಯ ಪ್ರಮಾಣಪತ್ರ ಕಡ್ಡಾಯವಾಗಿದೆ.
ಚಾಲನಾ ಪರವಾನಗಿಗೆ ಅರ್ಜಿ ಸಲ್ಲಿಸುವುದು ಹೇಗೆ?
ನೀವು ಚಾಲನಾ ಪರವಾನಗಿಗೆ ಆನ್‌ಲೈನ್‌ನಲ್ಲಿ ಅಥವಾ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ವಿಧಾನವೇನು?
ಆನ್‌ಲೈನ್ ವಿಧಾನ:
ಆನ್‌ಲೈನ್‌ನಲ್ಲಿ ಚಾಲನಾ ಪರವಾನಗಿಗೆ ಅರ್ಜಿ ಸಲ್ಲಿಸಲು ಕೆಳಗೆ ನಮೂದಿಸಿರುವ ಸೂಚನೆಗಳನ್ನು ಅನುಸರಿಸಬೇಕು.
1: https://parivahan.gov.in/parivahan//en ತಾಣಕ್ಕೆ ಭೇಟಿ ನೀಡಬೇಕು
2: 'ಚಾಲನಾ ಪರವಾನಗಿ ಸಂಬಂಧಿತ ಸೇವೆ' ಕ್ಲಿಕ್ ಮಾಡಿ, ನಂತರ 'ಆನ್‌ಲೈನ್ ಸೇವೆಗಳು' ಎಂಬುದರ ಅಡಿಯಲ್ಲಿ ಆಯ್ಕೆಯನ್ನು ಆರಿಸಿ
3: ನಿಮ್ಮ ರಾಜ್ಯವನ್ನು ಆರಿಸಿಕೊಳ್ಳಿ.
4: 'ಚಾಲನಾ ಪರವಾನಗಿಗೆ ಅರ್ಜಿ ಸಲ್ಲಿಸಿ' ಎಂಬುದನ್ನು ಕ್ಲಿಕ್ ಮಾಡಬೇಕು
5: 'ಮುಂದುವರೆಸಿ' ಎಂಬುದನ್ನು ಕ್ಲಿಕ್ ಮಾಡಿ.
6: ಈಗ ಅರ್ಜಿಯನ್ನು ಭರ್ತಿ ಮಾಡಿ, ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು. ಪರೀಕ್ಷೆಯಲ್ಲಿ ಭಾಗವಹಿಸಲು ಸ್ಥಳವನ್ನು ಮುಂಗಡವಾಗಿ ಕಾಯ್ದಿರಿಸಿ, ಶುಲ್ಕ ಪಾವತಿಸಬೇಕು.
7: ನೀವು ಆರಿಸಿಕೊಂಡ ದಿನಾಂಕ ಮತ್ತು ಸಮಯದಲ್ಲಿ RTO ಕಚೇರಿಯಲ್ಲಿ ಸಂಬಂಧಿಸಿದ ಅಧಿಕಾರಿಯನ್ನು ಭೇಟಿಯಾಗಬೇಕು
8: ನೀವು ಚಾಲನಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ, ಪರವಾನಗಿಯು ನೋಂದಾಯಿತ ವಿಳಾಸಕ್ಕೆ ಕಳುಹಿಸಲಾಗುವುದು.
ಗಮನಿಸಿ: ಹೊಸ ನಿಯಮದ ಪ್ರಕಾರ, ಅರ್ಜಿದಾರರು ಅಂಗೀಕೃತ ಖಾಸಗಿ ಶಾಲೆಯಲ್ಲಿಯೂ ತಮ್ಮ ಚಾಲನಾ ಪರೀಕ್ಷೆಯನ್ನು ಪೂರ್ಣಗೊಳಿಸಬಹುದು. RTO-ಯಲ್ಲಿ ಚಾಲನಾ ಪರೀಕ್ಷೆ ಬರೆಯುವುದು ಕಡ್ಡಾಯವಲ್ಲ.
ಆಫ್‌ಲೈನ್ ವಿಧಾನ:
ಚಾಲನಾ ಪರವಾನಗಿಗೆ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದ ಹೇಗೆ?
1: ಭಾರತೀಯ ಚಾಲನಾ ಪರವಾನಗಿ ನಮೂನೆಯಾದ ಅರ್ಜಿ ನಮೂನೆಯನ್ನು ಪಡೆಯಿರಿ (ಕಲಿಕಾ ಪರವಾನಗಿಗೆ ನಮೂನೆ 1 ಮತ್ತು ಶಾಶ್ವತ ಪರವಾನಗಿಗೆ ನಮೂನೆ 4). ಈ ನಮೂನೆಯು ರಾಜ್ಯ ಸಾರಿಗೆ ವೆಬ್‌ಸೈಟ್‌ನಲ್ಲಿ ಅಥವಾ ಹತ್ತಿರದ RTO ಕಚೇರಿ, ಆನ್‌ಲೈನ್‌ನಲ್ಲಿ ಲಭ್ಯವಿದೆ.
2: ನಮೂನೆಯನ್ನು ಭರ್ತಿ ಮಾಡಿ, ವಯಸ್ಸು ಮತ್ತು ವಿಳಾಸದ ಪುರಾವೆಗಳೊಂದಿಗೆ ನಿಮ್ಮ ಪ್ರದೇಶದಲ್ಲಿರುವ RTO ಕಚೇರಿಗೆ ಹೋಗಿ ಸಲ್ಲಿಸಿ. ನಿಮ್ಮ ಚಾಲನಾ ಪರವಾನಗಿ ಪರೀಕ್ಷೆ ದಿನಾಂಕವನ್ನು RTO ಅಧಿಕಾರಿಗಳಿಂದ ಕೇಳಿ ಮತ್ತು ಸಂಬಂಧಿಸಿದ ಶುಲ್ಕ ಪಾವತಿಸಿ.
3: ನಿಗದಿ ಪಡಿಸಿದ ಸಮಯ ಮತ್ತು ದಿನಾಂಕದೊಳಗೆ ಚಾಲನಾ ಪರವಾನಗಿ ಪರೀಕ್ಷಾ ಸ್ಥಳಕ್ಕೆ ಹೋಗಿ. ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ನಿಮ್ಮ ಚಾಲನಾ ಪರವಾನಗಿಯನ್ನು ನೋಂದಾಯಿತ ವಿಳಾಸಕ್ಕೆ ಕಳುಹಿಸಲಾಗುತ್ತದೆ.
ನೀವು ಅಭ್ಯಾಸ ಮಾಡುತ್ತಿರುವ ಚಾಲನಾ ಶಾಲೆಯ ಸಿಬ್ಬಂದಿಯೂ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಮಾಡಬಹುದು.
ಭಾರತದಲ್ಲಿ ಚಾಲನಾ ಪರವಾನಗಿ ಶುಲ್ಕಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ.
ಚಾಲನಾ ಪರವಾನಗಿಯನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಲು, ಕೆಳಗೆ ತಿಳಿಸಲಾದ ಪ್ರಕ್ರಿಯೆಯನ್ನು ಅನುಸರಿಸಿ:
1: https://parivahan.gov.in/parivahan//en ಸೈಟ್‌ಗೆ ಹೋಗಿ
2: 'ಚಾಲನಾ ಪರವಾನಗಿ ಸಂಬಂಧಿತ ಸೇವೆಗಳು' ಮೇಲೆ ಕ್ಲಿಕ್ ಮಾಡಿ ಮತ್ತು ಆನ್‌ಲೈನ್ ಸೇವೆಗಳ ಅಡಿಯಲ್ಲಿ ಆಯ್ಕೆಯನ್ನು ಆರಿಸಿ.
3: ರಾಜ್ಯವನ್ನು ಆಯ್ಕೆಮಾಡಿ
4: 'ಅರ್ಜಿ ಸ್ಥಿತಿ' ಮೇಲೆ ಕ್ಲಿಕ್ ಮಾಡಿ.
5: ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸಿ.
6: 'ಸಲ್ಲಿಸು' ಕ್ಲಿಕ್ ಮಾಡುವುದರಿಂದ ಅರ್ಜಿ ಸ್ಥಿತಿ ತೋರಿಸುತ್ತದೆ.
ಬದಲಾಗಿ, ನಿಮ್ಮ ಚಾಲನಾ ಪರವಾನಗಿಯ ಸ್ಥಿತಿಯನ್ನು ಪರಿಶೀಲಿಸಲು ನೀವು ಹತ್ತಿರದ RTO ಕಚೇರಿಯನ್ನು ಸಂಪರ್ಕಿಸಬಹುದು.
ಶಾಶ್ವತ ಚಾಲನಾ ಪರವಾನಗಿಗಾಗಿ ಪರೀಕ್ಷಾ ವಿಧಾನ
ದ್ವಿಚಕ್ರ ವಾಹನಗಳಿಗೆ: ದ್ವಿಚಕ್ರ ವಾಹನ ಚಾಲನಾ ಕಲಿಕಾ ಪರವಾನಗಿ ಪರೀಕ್ಷೆಗೆ ಸಾಮಾನ್ಯವಾಗಿ 8ನೇ ಸಂಖ್ಯೆಯ ಆಕಾರದಲ್ಲಿ ಬೈಸಿಕಲ್ ಅನ್ನು ಓಡಿಸಬೇಕಾಗುತ್ತದೆ. ಇದು ಅರ್ಜಿದಾರರ ಆಯ್ಕೆಗೆ ಒಂದು ಪರೀಕ್ಷೆ. ಅರ್ಜಿದಾರರು ನೆಲದ ಮೇಲೆ ಕಾಲಿಡದೆ ನಿಗದಿತ ಸಮಯದೊಳಗೆ ಇದನ್ನು ಪೂರ್ಣಗೊಳಿಸಬೇಕು.
ನಾಲ್ಕು ಚಕ್ರಗಳ ವಾಹನಗಳಿಗೆ:
ಅರ್ಜಿದಾರರು ವಾಹನವನ್ನು 8 ಸಂಖ್ಯೆಯ ಸ್ವರೂಪದಲ್ಲಿ ಓಡಿಸಿ, ತೋರಿಸಬೇಕು. ಈ ಪರೀಕ್ಷೆಯು ನಿಮ್ಮ ಮುಂದಕ್ಕೆ ಮತ್ತು ಹಿಂದಕ್ಕೆ ಚಲಿಸುವ, ಪಾರ್ಕ್ ಮಾಡುವ, ಕನ್ನಡಿಗಳನ್ನು ಬಳಸಿ ಚಾಲನೆ ಮಾಡುವ, ಗೇರ್‌ಗಳನ್ನು ಬದಲಾಯಿಸುವ ಮತ್ತು ಬ್ರೇಕ್ ಮಾಡುವ ಸಾಮರ್ಥ್ಯವನ್ನು ಪರೀಕ್ಷಿಸುತ್ತದೆ.
ಭಾರತದಲ್ಲಿ ಅಂತಾರಾಷ್ಟ್ರೀಯ ಚಾಲನಾ ಪರವಾನಗಿ
ಭಾರತೀಯ ರಸ್ತೆ ಸಾರಿಗೆ ಪ್ರಾಧಿಕಾರ (ಆರ್‌ಟಿಎ) ವಿದೇಶಗಳಿಗೆ ಪ್ರಯಾಣಿಸುವ ಭಾರತೀಯ ನಾಗರಿಕರಿಗೆ ಅಂತಾರಾಷ್ಟ್ರೀಯ ಚಾಲನಾ ಪರವಾನಗಿಗಳನ್ನು (ಐಡಿಪಿ) ನೀಡುತ್ತದೆ. ದಾಖಲೆಯು ಮಾನ್ಯವಾಗಿದ್ದರೆ ಯಾವುದೇ ವಿದೇಶದಲ್ಲಿ ವಾಹನ ಚಲಾಯಿಸಲು ಅನುಮತಿ ನೀಡಲಾಗುತ್ತದೆ. ವಿದೇಶಿ ರಸ್ತೆಗಳಲ್ಲಿ ಪ್ರಯಾಣಿಸುವಾಗ, ನಿಮ್ಮ ಮೂಲ ಚಾಲನಾ ಪರವಾನಗಿ, ಪಾಸ್‌ಪೋರ್ಟ್ ಮತ್ತು ಅಂತಾರಾಷ್ಟ್ರೀಯ ಚಾಲನಾ ಪರವಾನಗಿ (IDP) ನಿಮ್ಮೊಂದಿಗೆ ಇರುವುದು ಕಡ್ಡಾಯವಾಗಿದೆ.
ಡ್ರೈವಿಂಗ್ ಲೈಸೆನ್ಸ್ ಬಗ್ಗೆ ಆಗಾಗ ಕೇಳುವ ಪ್ರಶ್ನೆಗಳು:
ವಾಹನ ಚಲಾಯಿಸೋರು ಯಾವಾಗಲೂ ತಮ್ಮೊಂದಿಗೆ ಚಾಲನಾ ಪರವಾನಗಿಯನ್ನು ಕೊಂಡೊಯ್ಯಬೇಕೇ?
ಹೌದು, ನೀವು ಅದನ್ನು ಯಾವಾಗಲೂ ನಿಮ್ಮೊಂದಿಗೆ ಇಟ್ಟುಕೊಳ್ಳಬೇಕು. ಇದು ರಸ್ತೆಯಲ್ಲಿ ವಾಹನ ಚಲಾಯಿಸಲು ನಿಮಗೆ ಅನುಮತಿಸುವ ಕಾನೂನು ದಾಖಲೆ.
ನಾನು ಚಾಲನಾ ಪರವಾನಗಿ ಅರ್ಜಿ ನಮೂನೆಯನ್ನು ಆನ್‌ಲೈನ್‌ನಲ್ಲಿ ಪ್ರವೇಶಿಸಬಹುದೇ?
ನಿಮ್ಮ ರಾಜ್ಯದ ಮೋಟಾರು ವಾಹನ ಇಲಾಖೆಯ ವೆಬ್‌ಸೈಟ್ ಮೂಲಕ ನೀವು ಚಾಲನಾ ಪರವಾನಗಿ ಅರ್ಜಿ ನಮೂನೆಯನ್ನು ಆನ್‌ಲೈನ್‌ನಲ್ಲಿ ಪಡೆಯಬಹುದು.
ಪರವಾನಗಿ ಇಲ್ಲದೆ ವಾಹನ ಚಲಾಯಿಸುವುದರಿಂದ ಉಂಟಾಗುವ ಪರಿಣಾಮಗಳೇನು?
ಪರವಾನಗಿ ಇಲ್ಲದೆ ವಾಹನ ಚಲಾಯಿಸಿ ಅಧಿಕಾರಿಗಳಿಂದ ಸಿಕ್ಕಿಬಿದ್ದರೆ ದಂಡ, ಜೈಲು ಶಿಕ್ಷೆ ಮತ್ತು ವಾಹನ ಮುಟ್ಟುಗೋಲು ಹಾಕಿಕೊಳ್ಳಬಹುದು. ಹೆಚ್ಚುವರಿಯಾಗಿ, ಮಾನ್ಯವಾದ ಪರವಾನಗಿ ಇಲ್ಲದೆ ವಾಹನ ಚಲಾಯಿಸುವುದರಿಂದ ನಿಮ್ಮ ಮೋಟಾರು ವಿಮಾ ರಕ್ಷಣೆಯನ್ನು ರದ್ದುಗೊಳಿಸಬಹುದು.
ಶಾಶ್ವತ ಚಾಲನಾ ಪರವಾನಗಿ ಎಷ್ಟು ಕಾಲ ಮಾನ್ಯವಾಗಿರುತ್ತದೆ?
ಶಾಶ್ವತ ಚಾಲನಾ ಪರವಾನಗಿಯು ನೀಡಿದ ದಿನಾಂಕದಿಂದ 20 ವರ್ಷಗಳವರೆಗೆ ಮಾನ್ಯವಾಗಿರುತ್ತದೆ.
ಭಾರತದಲ್ಲಿ ಚಾಲನಾ ಪರವಾನಗಿ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ?
ನೀವು ಪರಿವಾಹನ್ ಪೋರ್ಟಲ್‌ನಲ್ಲಿ ಚಾಲನಾ ಪರವಾನಗಿ ಅರ್ಜಿ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು.
ಚಾಲನಾ ಪರವಾನಗಿ ಸಂಖ್ಯೆಯಲ್ಲಿ ಏನಿದೆ?
ಪ್ರತಿಯೊಂದು ಚಾಲನಾ ಪರವಾನಗಿಯು ರಾಜ್ಯದ ಹೆಸರು, ಶಾಖೆಯ ಕೋಡ್, ನೀಡಿದ ವರ್ಷ ಮತ್ತು 13 ಅಕ್ಷರಗಳ ಸಂಖ್ಯೆಯ ಚಾಲಕ ಪ್ರೊಫೈಲ್ ಐಡಿಯನ್ನು ಒಳಗೊಂಡಿರುತ್ತದೆ.
ಚಾಲನಾ ಪರವಾನಗಿ ಪಡೆಯಲು ವೈದ್ಯಕೀಯ ಪ್ರಮಾಣಪತ್ರ ಕಡ್ಡಾಯವೇ?
ಸಾಮಾನ್ಯವಾಗಿ ಚಾಲನಾ ಪರವಾನಗಿ ಪಡೆಯಲು ವೈದ್ಯಕೀಯ ಪ್ರಮಾಣಪತ್ರದ ಅಗತ್ಯವಿದೆ.
ಚಾಲನಾ ಪರವಾನಗಿ ಇಲ್ಲದೆ ವಾಹನ ಚಲಾಯಿಸಿದರೆ ದಂಡವೇನು?
ಮಾನ್ಯ ಚಾಲನಾ ಪರವಾನಗಿ ಇಲ್ಲದೆ ವಾಹನ ಚಲಾಯಿಸಿದರೆ 5000 ರೂ.ಗಳವರೆಗೆ ದಂಡ, 3 ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ಎರಡನ್ನೂ ವಿಧಿಸಬಹುದು.
ನನ್ನ ಚಾಲನಾ ಪರವಾನಗಿಯಲ್ಲಿ ನನ್ನ ವಿಳಾಸವನ್ನು ಆನ್‌ಲೈನ್‌ನಲ್ಲಿ ನವೀಕರಿಸಬಹುದೇ?
ನಿಮ್ಮ ಚಾಲನಾ ಪರವಾನಗಿಯಲ್ಲಿ ನಿಮ್ಮ ವಿಳಾಸವನ್ನು ಆನ್‌ಲೈನ್‌ನಲ್ಲಿ ಬದಲಾಯಿಸಲು ಸಾಧ್ಯವಿಲ್ಲ, ಆದರೆ ನೀವು ವಿಳಾಸ ಬದಲಾವಣೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು ಮತ್ತು ಪರಿಶೀಲನೆಗಾಗಿ ಪ್ರಾದೇಶಿಕ ಸಾರಿಗೆ ಕಚೇರಿಯನ್ನು (RTO) ಸಂಪರ್ಕಿಸಬಹುದು.
ಭಾರತೀಯ ಚಾಲನಾ ಪರವಾನಗಿಯನ್ನು ಬೇರೆ ದೇಶದಲ್ಲಿ ವಾಹನ ಚಲಾಯಿಸಲು ಬಳಸಬಹುದೇ?
ಭಾರತೀಯ ಚಾಲನಾ ಪರವಾನಗಿಯನ್ನು ಬೇರೆ ದೇಶದಲ್ಲಿ ವಾಹನ ಚಲಾಯಿಸಲು ಬಳಸಲಾಗುವುದಿಲ್ಲ. ಇದಕ್ಕೆ ಅಂತಾರಾಷ್ಟ್ರೀಯ ಚಾಲನಾ ಪರವಾನಗಿಯನ್ನು ಪಡೆಯುವ ಅಗತ್ಯವಿದೆ.
ಭಾರತದಲ್ಲಿ ಶಾಶ್ವತ ಚಾಲನಾ ಪರವಾನಗಿ ಪಡೆಯಲು ಎಷ್ಟು ದಿನಗಳು ಬೇಕಾಗುತ್ತದೆ?
ನೀವು ಚಾಲನಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ, ನೀವು ಒದಗಿಸಿದ ವಿಳಾಸಕ್ಕೆ 30 ದಿನಗಳಲ್ಲಿ ನಿಮ್ಮ ಚಾಲನಾ ಪರವಾನಗಿಯನ್ನು ಮೇಲ್ ಮೂಲಕ ಪಡೆಯಬಹುದು. ಆದರೆ ಈಗ ಅದು ಎರಡು ದಿನಗಳಲ್ಲಿ ಲಭ್ಯವಿದೆ.
ಚಾಲನಾ ಪರವಾನಗಿಗಾಗಿ ನಾನು ಹೇಗೆ ಅರ್ಜಿ ಸಲ್ಲಿಸುವುದು?
ಚಾಲನಾ ಪರವಾನಗಿಗೆ ಅರ್ಜಿ ಸಲ್ಲಿಸಲು, ನಿಮಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು.