ಎಲೆ​ಕ್ಟ್ರಿಕ್‌ ಕಾರಿಗೆ 1.5 ಲಕ್ಷ ಸಬ್ಸಿ​ಡಿ: ನೂತನ ನೀತಿ ಬಿಡು​ಗ​ಡೆ!

By Suvarna News  |  First Published Jun 23, 2021, 12:43 PM IST

* ಮುಂದಿನ ನಾಲ್ಕು ವರ್ಷ​ದಲ್ಲಿ 2 ಲಕ್ಷಕ್ಕೂ ಅಧಿಕ ಎಲೆ​ಕ್ಟ್ರಿಕ್‌ ವಾಹ​ನ​ಗ​ಳನ್ನು ರಸ್ತೆ​ಗೆ ಇಳಿ​ಸುವ ಗುರಿ

* ಗುಜ​ರಾ​ತ್‌​ನಲ್ಲಿ ಎಲೆ​ಕ್ಟ್ರಿಕ್‌ ಕಾರಿಗೆ 1.5 ಲಕ್ಷ ಸಬ್ಸಿ​ಡಿ

* ನೂತನ ಎಲೆ​ಕ್ಟ್ರಿಕ್‌ ವಾಹನ ನೀತಿ ಬಿಡು​ಗ​ಡೆ


ನವ​ದೆ​ಹ​ಲಿ(ಜೂ.23): ಮುಂದಿನ ನಾಲ್ಕು ವರ್ಷ​ದಲ್ಲಿ 2 ಲಕ್ಷಕ್ಕೂ ಅಧಿಕ ಎಲೆ​ಕ್ಟ್ರಿಕ್‌ ವಾಹ​ನ​ಗ​ಳನ್ನು ರಸ್ತೆ​ಗೆ ಇಳಿ​ಸುವ ಗುರಿ​ಯೊಂದಿಗೆ ಗುಜ​ರಾತ್‌ ಸರ್ಕಾರ ನೂತನ ಎಲೆ​ಕ್ಟ್ರಿಕ್‌ ವಾಹನ ನೀತಿ​ಯೊಂದನ್ನು ಮಂಗ​ಳ​ವಾರ ಬಿಡು​ಗಡೆ ಮಾಡಿದೆ. ಪ್ರತಿ ಎಲೆ​ಕ್ಟ್ರಿಕ್‌ ವಾಹ​ನ​ಗಳ ಮೇಲೆ ಗುಜರಾತ್‌ ಸರ್ಕಾರ 1.5 ಲಕ್ಷ ರು. ಸಬ್ಸಿ​ಡಿ​ಯನ್ನು ನೀಡ​ಲಿದೆ. ಅಲ್ಲದೇ ಎಲೆಕ್ಟ್ರಿಕ್‌ ದ್ವಿಚಕ್ರ ವಾಹ​ನ​ಗ​ಳ ಖರೀ​ದಿಗೆ 20 ಸಾವಿರ ರು.ವ​ರೆಗೂ ಸಬ್ಸಿಡಿ ಲಭ್ಯ​ವಾ​ಗ​ಲಿದೆ. ಮೂರು ಚಕ್ರದ ವಾಹ​ನ​ಗ​ಳಿಗೆ 50 ಸಾವಿರ ರು. ಸಬ್ಸಿಡಿ ದೊರೆ​ಯ​ಲಿದೆ.

ಈ ಯೋಜ​ನೆಯ ಅಡಿ​ಯಲ್ಲಿ ರಾಜ್ಯ​ದಲ್ಲಿ 250 ಎಲೆ​ಕ್ಟ್ರಿಕ್‌ ವಾಹನ​ಗಳ ಚಾರ್ಜಿಂಗ್‌ ಸ್ಟೇಶ​ನ್‌​ಗ​ಳನ್ನು ನಿರ್ಮಿ​ಸ​ಲಾ​ಗು​ತ್ತ​ದೆ. ಗುಜ​ರಾತ್‌ ಆರ್‌​ಟಿ​ಒ​ನಲ್ಲಿ ನೋಂದಣಿ ಆಗುವ ಎಲೆ​ಕ್ಟ್ರಿಕ್‌ ವಾಹ​ನ​ಗ​ಳಿಗೆ ನೋಂದಣಿ ಶುಲ್ಕ​ದಿಂದ ವಿನಾ​ಯಿತಿ ನೀಡ​ಲಾ​ಗಿದೆ. ಇತರ ರಾಜ್ಯ​ಗ​ಳಿಗೆ ಹೋಲಿಸಿ​ದರೆ ಎಲೆ​ಕ್ಟ್ರಿಕ್‌ ವಾಹ​ನ​ಗ​ಳಿಗೆ ಪ್ರತಿ ಕೊಲೋ​ವ್ಯಾ​ಟ್‌ಗೆ ಗುಜ​ರಾತ್‌ ಸರ್ಕಾರ ದುಪ್ಪಟ್ಟು ಸಬ್ಸಿಡಿ ನೀಡ​ಲಿದೆ.

Latest Videos

ಮುಂದಿನ 4 ವರ್ಷ​ಗ​ಳಲ್ಲಿ ಗುಜ​ರಾ​ತಿ​ನಲ್ಲಿ 1.10 ಲಕ್ಷ ಎಲೆ​ಕ್ಟ್ರಿಕ್‌ ದ್ವಿಚ​ಕ್ರ​ವಾ​ಹ​ನ​ಗಳು, 70 ಸಾವಿರ ಎಲೆ​ಕ್ಟ್ರಿಕ್‌ ಆಟೋ​ರಿ​ಕ್ಷಾ​ಗಳು ಮತ್ತು 20 ಸಾವಿರ ಎಲೆ​ಕ್ಟ್ರಿಕ್‌ ಕಾರು​ಗಳು ಸಂಚ​ರಿ​ಸಲಿವೆ ಎಂದು ಅಂದಾ​ಜಿ​ಸ​ಲಾ​ಗಿದೆ.

click me!