Driving Licence ಲೈಸೆನ್ಸ್ ಪಡೆಯಲು RTO ಮುಂದೆ ಡ್ರೈವಿಂಗ್ ಟೆಸ್ಟ್ ಬೇಕಿಲ್ಲ, ಹೊಸ ನಿಯಮ ಜು.1ರಿಂದ ಜಾರಿ!

By Contributor Asianet  |  First Published May 5, 2022, 5:01 PM IST
  • ಡ್ರೈವಿಂಗ್ ಲೈಸೆನ್ಸ್ ನಿಯಮ ಮತ್ತಷ್ಟು ಸರಳ
  • ಹೊಸ ನಿಯಮದಡಿಯಲ್ಲಿ RTO ಮುಂದೆ ಟೆಸ್ಟ್ ಅಗತ್ಯವಿಲ್ಲ
  • ಸರದಿ ಸಾಲಿನಲ್ಲಿ ನಿಂತು ಡ್ರೈವಿಂಗ್ ಲಸೆನ್ಸ್ ಪಡೆಯುವ ಅಗತ್ಯವಿಲ್ಲ

ನವದೆಹಲಿ(ಮೇ.05): ಡ್ರೈವಿಂಗ್ ಸ್ಕೂಲ್‌ನಲ್ಲಿ ಸರಿಯಾಗಿ ಡ್ರೈವಿಂಗ್ ಮಾಡಿ, ಡ್ರೈವಿಂಗ್ ಟೆಸ್ಟ್ ದಿನ RTO ಮುಂದೆ ಚಡಪಡಿಸಿ ಲೈಸೆನ್ಸ್ ತಪ್ಪಿಸಿಕೊಂಡವರ ಸಂಖ್ಯೆ ಹೆಚ್ಚೇ ಇದೆ. ಇತ್ತ ಸರದಿ ಸಾಲಿನಲ್ಲಿ ಕಾದು ಕಾದು ಸುಸ್ತಾದವರೂ ಇದ್ದಾರೆ. ಇನ್ಮುಂದೆ ಹಾಗಲ್ಲ, ಡ್ರೈವಿಂಗ್ ಲೈಸೆನ್ಸ್(Driving license) ಪಡೆಯುವುದು ಕಷ್ಟದ ವಿಚಾರವೇನಲ್ಲ. ಆರ್‌ಟಿಒ(RTO) ಮುಂದೆ ಡ್ರೈವಿಂಗ್ ಟೆಸ್ಟ್(Driving Test) ಮಾಡಬೇಕಿಲ್ಲ, ಸಾಲಿನಲ್ಲಿ ನಿಲ್ಲಬೇಕಿಲ್ಲ, ಅತೀ ಸರಳವಾಗಿ ಸುಲಭವಾಗಿ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಸಾಧ್ಯ. ಈ ಹೊಸ ನಿಯಮ ಜುಲೈ 1 ರಿಂದ ಜಾರಿಯಾಗುತ್ತಿದೆ.

ಕೇಂದ್ರ ಸರ್ಕಾರ ದೇಶದಲ್ಲಿನ ಡ್ರೈವಿಂಗ್ ಲೈಸೆನ್ಸ್ ಪಡೆಯುವ ನೀತಿಯನ್ನು ಸರಳೀಕೃತಗೊಳಿಸಿದೆ. ಇದರಿಂದ ಹೊಸದಾಗಿ ಡ್ರೈವಿಂಗ್ ಲಸೆನ್ಸ್ ಪಡೆಯುವವರು, ಹಳೆ ಲೆಸೆನ್ಸ್ ನವೀಕರಿಸುವವರೂ ಹೆಚ್ಚು ತಲೆಕೆಡಿಸಿಕೊಳ್ಳಬೇಕಿಲ್ಲ. 

Tap to resize

Latest Videos

ಈ ದೇಶಗಳಲ್ಲಿ ಡ್ರೈವ್ ಮಾಡಲು ಭಾರತೀಯ ಡ್ರೈವಿಂಗ್ ಲೈಸೆನ್ಸ್ ಸಾಕು !

ರಾಜ್ಯ ಅಥವಾ ಕೇಂದ್ರ ಸರ್ಕಾರದ ಅಧೀನದಲ್ಲಿ ಖಾಸಗಿ ಡ್ರೈವಿಂಗ್ ಕೇಂದ್ರ
ರಾಜ್ಯ ಅಥವಾ ಕೇಂದ್ರ ಸರ್ಕಾರದ ಸಾರಿಗೆ ಪ್ರಾಧಿಕಾರದ ಅಡಿಯಲ್ಲಿ ಖಾಸಗಿ ಡ್ರೈವಿಂಗ್ ಕೇಂದ್ರಗಳು ಇರಲಿದೆ. ಈ ಕೇಂದ್ರಗಳು ಡ್ರೈವಿಂಗ್ ಲೆಸೆನ್ಸ್ ವಿಚಾರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ. ಈ ಕೇಂದ್ರಗಳ ಅವಧಿ ಕೇವಲ 5  ವರ್ಷ ಮಾತ್ರ, ಬಳಿಕ ಪರವಾನಗಿಯನ್ನು ನವೀಕರಣ ಮಾಡಬೇಕು.

ಆರ್‌ಟಿಒ ಮುಂದೆ ಡ್ರೈವಿಂಗ್ ಟೆಸ್ಟ್ ಬೇಕಿಲ್ಲ
ಸದ್ಯ ಡ್ರೈವಿಂಗ್ ಸ್ಕೂಲ್ ಮೂಲಕ ಅಥವಾ ವೈಯುಕ್ತಿಕವಾಗಿ ಲೈಸೆನ್ಸ್‌ಗೆ ಅರ್ಜಿ ಹಾಕಿದರೆ, ಆರ್‌ಟಿಒ ಅಧಿಕಾರಗಳ ಮುಂದೆ ಡ್ರೈವಿಂಗ್ ಟೆಸ್ಟ್ ಮಾಡಬೇಕು. ಈ ಟೆಸ್ಟ್‌ನಲ್ಲಿ ಪಾಸ್ ಆದವರಿಗೆ ಮಾತ್ರ ಲೈಸೆನ್ಸ್ ನೀಡಲಾಗುತ್ತದೆ. ಆದರೆ ಹೊಸ ನಿಯಮದಡಿಯಲ್ಲಿ ಆರ್‌ಟಿಒ ಮುಂದೆ ಡ್ರೈವಿಂಗ್ ಟೆಸ್ಟ್ ನೀಡಬೇಕಾದ ಅಗತ್ಯವಿಲ್ಲ. ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಖಾಸಗಿ ಡ್ರೈವಿಂಗ್ ಕೇಂದ್ರಗಳಲ್ಲಿ ಡ್ರೈವಿಂಗ್ ಪಾಸ್ ಮಾಡಿದರೆ ಸಾಕು. ಈ ಕೇಂದ್ರಗಳು ನೀಡುವ ಡ್ರೈವಿಂಗ್ ಸರ್ಟಿಫೀಕೆಟ್ ಆಧಾರದಲ್ಲಿ ಸಾರಿಗೆ ಪ್ರಾಧಿಕಾರದಿಂದ ಲೈಸೆನ್ಸ್ ಪಡೆಯಬಹುದು.

ಡ್ರೈವಿಂಗ್ ಲೆಸೆನ್ಸ್‌ನಲ್ಲೂ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ಲೈಟ್ ಮೋಟಾರ್, ಗೇರ್, ವಿಥ್ ಗೇರ್ ಸೇರಿದಂತೆ ಹಲವು ವಿಭಾಗಗಳು ಇರಲಿವೆ.

Driving License : ಡ್ರೈವಿಂಗ್ ಲೈಸನ್ಸ್ ನವೀಕರಣ ಬಹಳ ಸುಲಭ, ಎಲ್ಲವೂ ಆನ್ ಲೈನ್

MC 50CC -  50 CC  ಅಥವಾ ಅದಕ್ಕಿಂತ ಕಡಿಮೆ ಎಂಜಿನ್ ಸಾಮರ್ಥ್ಯದ ಮೋಟಾರ್‌ಸೈಕಲ್ ಲೈಸೆನ್ಸ್ 
MC EX50CC - ಗೇರ್ ಹೊಂದಿರುವ LMVs ವಾಗನ ಹಾಗೂ  50CC ಅಥವಾ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಕಾರು ಅಥವಾ ಮೋಟಾರ್‌ಸೈಕಲ್ 
MCWOG/FVG - ಗೇರ್ ಇಲ್ಲದ ಯಾವುದೇ ಸಾಮರ್ಥ್ಯದ ಎಂಜಿನ್ ಹೊಂದಿರುವ ಮೋಟಾರ್‌ಸೈಕಲ್ ಲೈಸೆನ್ಸ್ 
M/CYCL.WG - ಗೇರ್ ಹಾಗೂ ಗೇರ್ ಇಲ್ಲ ಎಲ್ಲಾ ಮೋಟಾರ್‌ಸೈಕಲ್ 
LMV-NT ಲೈಟ್ ಮೋಟಾರ್ ವಾಹನ(LMVs) 

ಇನ್ನು ವಾಣಿಜ್ಯ ವಾಹನಗಳ ಡ್ರೈವಿಂಗ್ ಲೈಸೆನ್ಸ್‌ನಲ್ಲಿ ಕೆಲ ಬದಲಾವಣೆಗಳಿವೆ.
HMV, HGMV,  HPMV/HTV , MGV, LMV - LMV ಹಾಗೂ  trailer ಎಂದು ವರ್ಗೀಕರಿಸಲಾಗಿದೆ. 

ಇನ್ನು ವಾಹನ ಸಂಬಂಧಿ ಎಲ್ಲಾ ವ್ಯವಹಾರಕ್ಕೆ ಆಧಾರ್‌ ಕಡ್ಡಾಯ
ನೂತನ ವಾಹನ ಖರೀದಿ, ನೋಂದಣಿ ಸೇರಿದಂತೆ ವಾಹನಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ವ್ಯವಹಾರಗಳಿಗೆ ಆಧಾರ್‌ ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇದರನ್ವಯ ಆಧಾರ್‌ ಸಂಖ್ಯೆಯೊಂದಿಗೆ ಸಂಯೋಜನೆಯಾದ ಮೊಬೈಲ್‌ ಸಂಖ್ಯೆಗೆ ಒಟಿಪಿ ರವಾನೆಯಾದ ಬಳಿಕವಷ್ಟೇ ವಾಹನ ಸಂಬಂಧಿಯ ವ್ಯವಹಾರಗಳು ಪೂರ್ಣಗೊಳ್ಳಲಿವೆ. ತನ್ಮೂಲಕ ಸರ್ಕಾರಕ್ಕೆ ಒಬ್ಬ ವ್ಯಕ್ತಿಯ ಬಳಿ ಎಷ್ಟುವಾಹನಗಳಿವೆ ಎಂಬ ಮಾಹಿತಿ ಸರ್ಕಾರಕ್ಕೆ ಸುಲಭವಾಗಿ ಲಭ್ಯವಾಗಲಿದೆ. ಜೊತೆಗೆ ನಕಲಿ ನೋಂದಣಿ ಸೇರಿದಂತೆ ಇನ್ನಿತರ ಅಕ್ರಮಗಳಿಗೆ ಆಧಾರ್‌ ಆಧಾರಿತ ನೋಂದಣಿಯಿಂದ ಕಡಿವಾಣ ಬೀಳಲಿದೆ ಎಂಬುದು ಸರ್ಕಾರದ ವಾದ. ಈವರೆಗೆ ವಾಹನಗಳ ನೋಂದಣಿ ಸೇರಿದಂತೆ ಯಾವುದೇ ವ್ಯವಹಾರಗಳಿಗೆ ಆಧಾರ್‌ ಕಡ್ಡಾಯವಿರಲಿಲ್ಲ.

click me!