ಆಟೋ ಕ್ಷೇತ್ರದ ದಿಗ್ಗಜ ಮಾರುತಿ ಸುಜುಕಿ ಮಾಜಿ MD ಜಗದೀಶ್ ಖಟ್ಟರ್ ನಿಧನ!

By Suvarna News  |  First Published Apr 26, 2021, 6:12 PM IST

ಭಾರತೀಯ ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಎಂದೇ ಗುರುತಿಸಿಕೊಂಡಿದ್ದ ಮಾರುತಿ ಸುಜುಕಿ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ಖಟ್ಟರ್ ಹೃದಯಾಘಾತದಿಂದ ನಿಧನರಾಗಿದ್ದಾರೆ. 
 


ನವದೆಹಲಿ(ಏ.26): ಭಾರತದ ಆಟೋಮೊಬೈಲ್ ಕ್ಷೇತ್ರಕ್ಕೆ ಮಾರುತಿ ಸುಜುಕಿ ಕೊಡುಗೆ ಅಪಾರವಾಗಿದೆ. ದೇಶದಲ್ಲಿ ಕಾರು ಕ್ರಾಂತಿ ಮಾಡಿದ ಮಾರುತಿ ಸುಜುಕಿ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ಖಟ್ಟರ್ ನಿಧನರಾಗಿದ್ದಾರೆ. 78 ವರ್ಷದ ಜಗದೀಶ್ ಖಟ್ಟರ್ ಇಂದು(ಏ.26) ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಸ್ವಿಫ್ಟ್ ನಾಗಾಲೋಟ ತಡೆಯೋರಿಲ್ಲ; ಟಾಪ್‌ 10 ಪಟ್ಟಿಯಲ್ಲಿ ಮಾರುತಿಯದ್ದೇ ಕಾರ್‌ಬಾರು

Latest Videos

undefined

1993ರಲ್ಲಿ ಮಾರುತಿ ಉದ್ಯೋಗ ಲಿಮಿಟೆಡ್ ಕಂಪನಿ ಸೇರಿಕೊಂಡ ಜಗದೀಶ್ ಖಟ್ಟರ್, ಭಾರತದಲ್ಲಿ ಮಾರುತಿ ಸುಜುಕಿ ಕಂಪನಿ ದೇಶದ ಮೂಲೆ ಮೂಲೆಗೂ ತಲುಪಿಸಿದ ಕೀರ್ತಿ ಪಡೆದಿದ್ದಾರೆ. 2007ರ ವರೆಗೆ ಮಾರುತಿ ಸುಜುಕಿ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಖಟ್ಟರ್ ಬಳಿಕ ನಿವೃತ್ತಿಯಾಗಿದ್ದರು. 

ಜಗದೀಶ್ ಖಟ್ಟರ್ ಮುಂದಾಳತ್ವದಲ್ಲಿ ಮಾರುತಿ ಸುಜುಕಿ ಗಮನಾರ್ಹ ಬೆಳವಣಿಗೆ ಕಂಡಿತ್ತು. ಮಾರುತಿ 800 ಕಾರು ಇವರ ಕಾಲದಲ್ಲಿ ಅತ್ಯಂತ ಜನಪ್ರಿಯಾ ಕಾರಾಗಿ ಮಿಂಚಿದೆ. ಇಷ್ಟೇ ಅಲ್ಲ ಇತರ ಎಲ್ಲಾ ಕಾರುಗಳನ್ನು ಹಿಂದಿಕ್ಕಿ, ದೇಶದ ಕಾರಾಗಿ ಹೊರಹೊಮ್ಮಿತ್ತು. ಜಪಾನ್ ಜೊತೆಗಿನ ಪಾಲುದಾರಿಕೆ ಸಂಬಂಧ ಕಂಪನಿ ಎದುರಿಸಿದ ಕೆಲ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಿದ ಹೆಗ್ಗಳಿಕೆಯೂ ಖಟ್ಟರ್‌ಗಿದೆ.

ಮಾರುತಿ ಸುಜುಕಿ  ಲಿಮಿಟೆಡ್ ಕಂಪನಿ ಸೇರುವ ಮೊದಲು  IAS ಅಧಿಕಾರಿಯಾಗಿ 37 ವರ್ಷ ಸೇವೆ ಸಲ್ಲಿಸಿದ್ದರು.  ಕೇಂದ್ರ ಉಕ್ಕು ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಅಲ್ಲದೆ, ಅವರು ಉತ್ತರ ಪ್ರದೇಶ ಸರ್ಕಾರದ ವಿವಿಧ ಆಡಳಿತಾತ್ಮಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು.

click me!