ಇಬ್ಬರು ಸಹದೋರರು ಮಾರುತಿ ವ್ಯಾಗನರ್ ಕಾರನ್ನು ಅಕ್ಷರಶಃ ನೆಲದ ಮೇಲೆ ಓಡಾಡುವ ಹೆಲಿಕಾಪ್ಟರ್ ಆಗಿ ಪರಿವರ್ತಿಸಿದ್ದಾರೆ. ತಮ್ಮ ಕೈಚಳಕ, ಕ್ರಿಯಾತ್ಮಕತೆ, ಪ್ರತಿಭೆಯಿಂದ ಹೊಸ ಆವಿಷ್ಕಾರ ಮಾಡಿದ್ದಾರೆ. ಎಲ್ಲಾ ಕೆಲಸಗಳನ್ನು ಮುಗಿಸಿ ಪೈಂಟಿಂಗ್ ಮಾಡಸಿಲು ಹೊರಟ ಈ ಮಾರುತಿ ಹೆಲಿಕಾಪ್ಟರ್ ಪೊಲೀಸರ ವಶವಾಗಿದೆ.
ಲಖನೌ(ಮಾ.20) ಭಾರತದಲ್ಲಿ ಜುಗಾಡ್ ಅನ್ನೋ ಪದ ಭಾರಿ ಜನಪ್ರಿಯ. ತಮ್ಮ ಪ್ರತಿಭೆಯಿಂದ ಲಭ್ಯವಿರುವ ವಸ್ತುಗಳಲ್ಲಿ ಊಹಿಸಲು ಸಾಧ್ಯವಾಗದ ಪರಿಹಾರ ಕಂಡುಕೊಳುವುದು ಇಲ್ಲಿ ಮಾತ್ರ. ಇದೀಗ ಸಹೋದರರಿಬ್ಬರು ಹಳೇ ಮಾರುತಿ ಸುಜುಕಿ ವ್ಯಾಗನ್‌ಆರ್ ಕಾರಿನನ್ನು ಹೆಲಿಕಾಪ್ಟರ್ ಆಗಿ ಪರಿವರ್ತಿಸಿ ತಮ್ಮ ಪ್ರತಿಭೆ ತೋರಿಸಿದ್ದಾರೆ. ವ್ಯಾಗನ್‌ಆರ್ ಕಾರಿನ ಮೇಲ್ಬಾಗದಲ್ಲಿ ಹೆಲಿಕಾಪ್ಟರ್ ರೆಕ್ಕೆಗಳನ್ನು ಅಳವಡಿಸಲಾಗಿದೆ. ಇನ್ನು ಹಿಂಬಾಗದಲ್ಲಿ ಹೆಲಿಕಾಪ್ಟರ್ ಟೈಲ್ ರೀತಿಯಲ್ಲೇ ಮಾಡಿಫಿಕೇಶನ್ ಮಾಡಲಾಗಿದೆ. ಇನ್ನು ರೆಕ್ಕಿ, ಟೈಲ್‌ನಲ್ಲಿನ ಸಣ್ಣ ರೆಕ್ಕಿ ಹಾಗೂ ಲೈಟಿಂಗ್ಸ್ ಕಾರ್ಯಗಳು ಮುಕ್ತಾಯಗೊಂಡು ಇನ್ನೇನು ಪೈಟಿಂಗ್ ಮಾಡಬೇಕು ಅನ್ನುವಷ್ಟರಲ್ಲೇ ಈ ಮಾರುತಿ ಹೆಲಿಕಾಪ್ಟರ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಉತ್ತರ ಪ್ರದೇಶದ ಸಹೋದರರಿಬ್ಬರ ಈ ಹೆಲಿಕಾಪ್ಟರ್ ಇದೀಗ ಪೊಲೀಸರ್ ಠಾಣೆಲ್ಲಿದೆ.
ಅಂಬೇಡ್ಕರ್ ನಗರದ ಸಹೋದರರು ಹಳೇ ಮಾರುತಿ ವ್ಯಾಗನ್ಆರ್ ಕಾರನ್ನು ಹೆಲಿಕಾಪ್ಟರ್ ಆಗಿ ಪರಿವರ್ತಿಸಿದ್ದಾರೆ. ಲಭ್ಯವಿರುವ ಸಲಕರಣೆ, ಮೆಟಲ್ ಶೀಟ್, ಇತರ ಮೆಟಲ್ ರಾಡ್‌ಗಳ ಬಳಸಿ ಮಾರುತಿ ವ್ಯಾಗನ್ಆರ್ ಕಾರನ್ನು ಹೆಲಿಕಾಪ್ಟರ್ ರೀತಿ ಬದಲಾಯಿಸಿದ್ದರೆ. ಕಾರಿನ ಮೇಲೆ ಹೆಲಿಕಾಪ್ಟರ್ ರೆಕ್ಕೆಗಳನ್ನು ಅಳವಡಿಸಲಾಗಿದೆ. ರಸ್ತೆಯಲ್ಲಿ ತೆರಳಬೇಕಾದ ಕಾರಣ ರೆಕ್ಕೆಯ ಉದ್ದವನ್ನು ಕಡಿತಗೊಳಿಸಲಾಗಿದೆ. ಮೈದಾನದಲ್ಲಿ ಚಲಾಯಿಸುವುದಾದರೆ ದೊಡ್ಡ ರೆಕ್ಕೆಗಳನ್ನು ಅಳಡಿಸಲು ಎಲ್ಲಾ ವ್ಯವಸ್ಥೆ ಮಾಡಿಕೊಂಡಿದ್ದಾರೆ.
45 ಸಾವಿರ ರೂಗೆ ಮಾರುತಿ 800ನ್ನು ರೋಲ್ಸ್ ರಾಯ್ಸ್ ಕಾರಾಗಿ ಪರಿವರ್ತಿಸಿದ ಪಿಯುಸಿ ವಿದ್ಯಾರ್ಥಿ
ಇನ್ನು ಕಾರಿನ ಹಿಂಭಾಗದ ಡಿಕ್ಕಿ ಡೋರ್ ತೆಗೆದು ಹೆಲಿಕಾಪ್ಟರ್ ರೀತಿ ಟೈಲ್ ಅಳವಡಿಸಿದ್ದಾರೆ. ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡಿದ್ದಾರೆ. ಈ ವೇಳೆ ಕಾರಿನ ಬ್ಯಾಲೆನ್ಸ್ ತಪ್ಪದಂತೆ ನೋಡಿಕೊಂಡಿದ್ದಾರೆ. ಹೆಚ್ಚುವರಿಯಾಗಿ ಸೇರಿಸಲಾಗಿರುವ ಹೆಲಿಕಾಪ್ಟರ್ ರೆಕ್ಕೆ ಹಾಗೂ ಬಾಲದಿಂದ ತೂಕದಲ್ಲೂ ಹೆಚ್ಚು ಕಡಿಮೆಯಾಗದಂತೆ ಸಮತೋಲನ ಕಾಪಾಡಿಕೊಳ್ಳಲಾಗಿದೆ.
ಎಲ್ಲಾ ಕೆಲಸ ಮುಗಿಸಿದ ಸಹೋದರರು, ಅಂಬೇಡ್ಕರ್‌ನಗರದಿಂದ ಅಕ್ಬರಪುರಕ್ಕೆ ಈ ಮಾಡಿಫೈಡ್ ಹೆಲಿಕಾಪ್ಟರನ್ನು ರಸ್ತೆ ಮೂಲಕ ಚಲಾಯಿಸಿಕೊಂಡು ಹೋಗಿದ್ದಾರೆ. ಅಕ್ಬರಪುರದಲ್ಲಿ ಕಾರಿಗೆ ಸಂಪೂರ್ಣ ಪೈಟಿಂಗ್ ಮಾಡಲು ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಆದರೆ ಅಕ್ಬರಪುರಕ್ಕೆ ತೆರಳುತ್ತಿದ್ದ ಮಾರ್ಗಮಧ್ಯೆ ಕೊತ್ವಾಲಿ ವಲಯದಲ್ಲಿ ಪೊಲೀಸರು ವಿಚಿತ್ರ ವಾಹನವನ್ನು ತಡೆದಿದ್ದಾರೆ.
ಕಿಚನ್, ಬಾಥ್‌ರೂಂ, ಟಾಯ್ಲೆಟ್; ಈ ಇನೋವಾ ಕಾರಿನಲ್ಲಿ ಎಲ್ಲವೂ ಇದೆ!
ಪೊಲೀಸರು ಅಡ್ಡಗಟ್ಟಿ ಈ ಹೆಲಿಕಾಪ್ಟರ್ ಸೀಜ್ ಮಾಡಿದ್ದಾರೆ. ಕಾರಣ ಭಾರತದಲ್ಲಿ ವಾಹನ ಮಾಡಿಫಿಕೇಶನ್‌ಗೆ ಅವಕಾಶವಿಲ್ಲ. ಇದು ಮೋಟಾರು ಕಾಯ್ದೆಯ ಉಲ್ಲಂಘನೆಯಾಗಿದೆ. ಹೀಗಾಗಿ ಸಹೋದರರ ಹೆಲಿಕಾಪ್ಟರ್ ಇದೀಗ ಪೊಲೀಸರ ವಶದಲ್ಲಿದೆ.
यूपी के अंबेडकर नगर में दो भाईयों ने जुगाड़ से कार को हेलीकॉप्टर बना दिया. डेंट- पेंट कराने जा रहे थे तभी पुलिस ने पकड़ लिया. और गाड़ी(हेलीकॉप्टर) सीज कर दी. pic.twitter.com/wK9QLaFZ1k
— Priya singh (@priyarajputlive)