ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಮತ್ತಷ್ಟು ಸುಲಭ, ಅಖಾಡಕ್ಕಿಳಿದ ಚಾರ್ಜರ್!

By Suvarna NewsFirst Published Dec 6, 2023, 8:14 PM IST
Highlights

ಎಲೆಕ್ಟ್ರಿಕ್ ವಾಹನ ಖರೀದಿಸಿದರೆ ಚಾರ್ಜಿಂಗ್ ಎಲ್ಲಿ? ಈ ಪ್ರಶ್ನೆಗೆ ಸವಾಲು ಹಲವರನ್ನು ಇವಿ ಬದಲು ಇಂಧನ ವಾಹನ ಖರೀದಿಸುವಂತೆ ಮಾಡುತ್ತಿದೆ. ಆದರೆ ಬೆಂಗಳೂರಿನಲ್ಲಿ ಇನ್ನು ಮುಂದೆ ಚಾರ್ಜಿಂಗ್ ಸಮಸ್ಯೆ ಎದುರಾಗುವುದಿಲ್ಲ. ಕಾರಣ ಇದೀಗ ಚಾರ್ಜರ್ ಅಖಾಡಕ್ಕಿಳಿದಿದೆ.

ಬೆಂಗಳೂರು(ಡಿ.06) ಎಲೆಕ್ಟ್ರಿಕ್ ವಾಹನ ನಿರ್ವಹಣೆ ಅತೀ ಕಡಿಮೆ. ಇದೀಗ ಕೈಗೆಟುಕುವ ದರದಲ್ಲಿ ಹಲವು ಇವಿ ಲಭ್ಯವಿದೆ. ಕಾರು, ಸ್ಕೂಟರ್, ಬೈಕ್, ಪಿಕ್‌ಅಪ್ ಸೇರಿದಂತೆ ಎಲ್ಲಾ ಮಾದರಿ ವಾಹನಗಳು ಎಲೆಕ್ಟ್ರಿಕ್ ರೂಪದಲ್ಲಿ ಲಭ್ಯವಿದೆ. ಆದರೆ ಹಲರಿಗೆ ಚಾರ್ಜಿಂಗ್ ಸಮಸ್ಯೆಗಳು ಎದುರಾಗಿರುವುದು ಸತ್ಯ. ಇದೀಗ ಈ ಸಮಸ್ಯೆಗೆ ಮುಕ್ತಿ ಹಾಡಲು ಚಾರ್ಜರ್ ಸಂಸ್ಥೆ ಬೆಂಗಳೂರಿನಲ್ಲಿ ಅಖಾಡಕ್ಕಿಳಿದಿದೆ.  ಬೆಂಗಳೂರಿನ ವರ್ಲ್ಡ್ ಟ್ರೇಡ್ ಸೆಂಟರ್​ನಲ್ಲಿ ಸ್ಮಾರ್ಟ್ ಇವಿ ಚಾರ್ಜಿಂಗ್ ಸ್ಟೇಷನ್​ಗಳನ್ನು ಸ್ಥಾಪಿಸಲಾಗಿದೆ.. ಮಲ್ಟಿ-ಲೆವೆಲ್ ಕಾರ್ ಪಾರ್ಕಿಂಗ್‌ನ ನೆಲ ಮಹಡಿಯಲ್ಲಿರುವ ಈ ಮೀಸಲು ಪ್ರದೇಶದಲ್ಲಿ ಕಾರುಗಳು ಮತ್ತು ದ್ವಿಚಕ್ರ ವಾಹನಗಳ ಬ್ಯಾಟರಿ ಚಾರ್ಚ್ ಮಾಡಬಹುದಾದ ನಾಲ್ಕು ಫಾಸ್ಟ್ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.  ಉದ್ಯೋಗಿಗಳು ಮತ್ತು ಅಲ್ಲಿಗೆ ಭೇಟಿ ನೀಡವವರು ಈ ಸೌಲಭ್ಯವನ್ನು ಸುಲಭವಾಗಿ ಬಳಸಿಕೊಳ್ಳಬಹುದಾಗಿದೆ. 

ಇವಿ ಮಾಲೀಕರು ಚಾರ್ಜರ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಅದರ ಮೂಲಕ ಚಾರ್ಜಿಂಗ್ ಕೇಂದ್ರಗಳನ್ನು ಬಳಸಿಕೊಳ್ಳಬಹುದು. ಇದು ಚಾರ್ಜಿಂಗ್ ಕೇಂದ್ರದ ಸೌಲಭ್ಯವನ್ನು ಸುಲಭವಾಗಿ ಪಡೆಯಲು ನೆರವಾಗುತ್ತದೆ.  ಡಬ್ಲ್ಯುಟಿಸಿಯ ಉದ್ಯೋಗಿಗಳು, ಒರಾಯನ್ ಮಾಲ್‌ಗೆ  ಶಾಪಿಂಗ್ ಮಾಡಲು ತೆರಳುವವರು, ಕ್ಯಾಂಪಸ್ ನೊಳಗಿನ ಹಲವಾರು ಔದ್ಯೋಗಿಕ ಸಂಸ್ಥೆಗಳಿಗೆ ಭೇಟಿ ನೀಡುವವರು  ಇವಿ ಚಾರ್ಜಿಂಗ್ ವಲಯದ ಸೌಲಭ್ಯ ಪಡೆಯಬಹುದು. ಎಲ್ಲಾ ಮಾದರಿಯ ಎಲೆಕ್ಟ್ರಿಕ್ ವಾಹನ ಮಾಲೀಕರು ಈ ವಲಯದ ಸೌಲಭ್ಯ ಪಡೆಯಬಹುದಾಗಿದೆ.

ಮೊದಲ ಎಲೆಕ್ಟ್ರಿಕ್ ಕಾರು ಖರೀದಿಸಿದ ಶಾರುಖ್ ಖಾನ್, ಇದು ಹ್ಯುಂಡೈನ ದುಬಾರಿ ಕಾರು!

ನಮ್ಮ ನಿವಾಸಿಗಳಿಂದ ಹೆಚ್ಚುತ್ತಿರುವ ಬೇಡಿಕೆಗಳು ಮತ್ತು ನಮ್ಮ ಇಎಸ್​​ಜಿ  ಬದ್ಧತೆಗಳ ಭಾಗವಾಗಿ ನಾವು 2 ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಂಭಾವ್ಯ ಆಪರೇಟರ್​ಗಳ ಅನ್ವೇಷಣೆ ಮಾಡಿದೆವು. ತಮ್ಮ ಬ್ಯುಸಿನೆಸ್​ ಮಾಡೆಲ್‌ನಲ್ಲಿ ಹೆಚ್ಚು ಸರಳವಾಗಿರುವವರು ಹಾಗೂ ಹೆಗಲಿಗೆ ಹೆಗಲುಕೊಡುವಂಥ ನೈಜ ಪಾಲುದಾರರೇ ನಮ್ಮ ನಿರೀಕ್ಷೆಯಾಗಿದ್ದವು.   'ಚಾರ್ಜರ್' ತಂಡವು ವಾಸ್ತವತೆಯನ್ನು ಅರಿತುಕೊಂಡಿರುವ ಜತೆಗೆ ಪ್ರಸ್ತುತ ನಮ್ಮ ಸುತ್ತಲಿರುವ ಇವಿ ವಾಹನಗಳು ಈ ಕ್ಷೇತ್ರದ ಬೆಳವಣಿಗೆ ಹಾಗೂ ಹತ್ತಿರದ ಇವಿ ಚಾರ್ಜಿಂಗ್ ಸೌಲಭ್ಯದ ಅಗತ್ಯತೆಯನ್ನು ಅರ್ಥಮಾಡಿಕೊಳ್ಳುವಲ್ಲಿ ಹೆಚ್ಚುಆಸಕ್ತಿ ವಹಿಸಿತ್ತು ಎಂದು ಫೆಸಿಲಿಟಿ ಮ್ಯಾನೇಜ್ಮೆಂಟ್ ಉಪಾಧ್ಯಕ್ಷ ಸಿತಾಂಶು ಎಸ್ ಹೇಳಿದ್ದಾರೆ. 

ಧೋನಿಯ ಹೊಚ್ಚ ಹೊಸ ಐಷಾರಾಮಿ ಮರ್ಸಿಡಿಸ್ ಜಿಕ್ಲಾಸ್ ಕಾರಿಗಿದೆ ಜೇಮ್ಸ್ ಬಾಂಡ್ ನಂಟು!

ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಕಡೆಗಿನ ಜನರ ಆಸಕ್ತಿ  ಹೆಚ್ಚುತ್ತಿರುವುದರಿಂದ, ವಾಣಿಜ್ಯ ಕೇಂದ್ರಗಳಲ್ಲಿ ಇವಿ ಚಾರ್ಜಿಂಗ್​ ವಲಯವನ್ನು ಸ್ಥಾಪಿಸುವುದು ಅನಿವಾರ್ಯವಾಗಿದೆ.  ಇವಿ ಚಾರ್ಜಿಂಗ್ ಕೇಂದ್ರಗಳ ಅಳವಡಿಕೆಯನ್ನು ವೇಗಗೊಳಿಸುವ ನಮ್ಮ ಧ್ಯೇಯಕ್ಕೆ ನಾವು ಬದ್ಧರಾಗಿದ್ದೇವೆ ಮತ್ತು ಸೌಲಭ್ಯವನ್ನು ಬಯಸುವ ಯಾವುದೇ ವಾಣಿಜ್ಯ ಕೇಂದ್ರಗಳಲ್ಲಿ ಶೂನ್ಯ ವೆಚ್ಚದಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ಅಳವಡಿಸಲು ಸಿದ್ದರಿದ್ದೇವೆ ಎಂದು  ಚಾರ್ಜರ್ ಸಿಇಒ ಮತ್ತು ಸಹ-ಸಂಸ್ಥಾಪಕ ಸಮೀರ್ ರಂಜನ್ ಜೈಸ್ವಾಲ್ ಹೇಳಿದ್ದರೆ.  

click me!