10 ವರ್ಷಗಳ ಕಠಿಣ ಶ್ರಮದಿಂದ SUV ಖರೀದಿಸಿದ ಯುವಕ, ಆನಂದ್‌ ಮಹೀಂದ್ರಾ ಮೆಚ್ಚುಗೆ!

By Santosh Naik  |  First Published Aug 2, 2022, 10:52 PM IST

ಟ್ವಿಟರ್‌ನಲ್ಲಿ ಇತ್ತೀಚೆಗೆ ಬಳಕೆದಾರನೊಬ್ಬ ತಾನು ಖರೀದಿ ಮಾಡಿದ ಮಹೀಂದ್ರಾ ಎಸ್‌ಯುವಿ ಚಿತ್ರದೊಂದಿಗೆ ಅದನ್ನು ಖರೀದಿಸಲು ಮಾಡಿದ ಶ್ರಮದ ಬಗ್ಗೆ ಬರೆದುಕೊಂಡಿದ್ದ. ಇದಕ್ಕೆ ಆನಂದ್ ಮಹೀಂದ್ರಾ ಅವರನ್ನು ಟ್ಯಾಗ್‌ ಮಾಡಿದ್ದ ಆತ, ನಿಮ್ಮ ಆಶೀರ್ವಾದವಿರಲಿ ಎಂದೂ ಕೇಳಿದ್ದ.
 


ಬೆಂಗಳೂರು (ಆ.2):  ಕಾರು ಖರೀದಿಸಬೇಕು ಎನ್ನುವುದು ಬಹುತೇಕ ಜೀವನದಲ್ಲಿ ಎಲ್ಲರಿಗೂ ಇರುವ ಕಾಮನ್‌ ಆಸೆ. ತಮ್ಮ ನೆಚ್ಚಿನ ಕಾರ್‌ಗಳನ್ನು ಖರೀದಿ ಮಾಡಲು ವರ್ಷಾನುಗಟ್ಟಲೆ ಹಣವನ್ನು ಕೂಡಿಡುವ ವ್ಯಕ್ತಿಗಳನ್ನು ಕಂಡಿದ್ದೇವೆ. ಅಂಥದ್ದೇ ಒಂದು ಕತೆ ಸಿ. ಅಶೋಕ್‌ ಕುಮಾರ್‌ ಅವರದ್ದು. ಇತ್ತೀಚೆಗೆ ಅವರು ತಮ್ಮ ನೆಚ್ಚಿನ ಮಹೀಂದ್ರಾ ಎಕ್ಸ್‌ಯುವಿ 700 ಕಾರ್‌ ಅನ್ನು ಖರೀದಿ ಮಾಡಿದ್ದಾರೆ. ತಮ್ಮ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಮಿ.ಅಶೋಕ್‌ಕುಮಾರ್‌ ಎನ್ನುವ ಹೆಸರನ್ನು ಹೊಂದಿರುವ ಈ ವ್ಯಕ್ತಿ ಇತ್ತೀಚೆಗೆ ನೆಚ್ಚಿನ ಮಹೀಂದ್ರಾ ಖಾರ್‌ ಅನ್ನು ಖರೀದಿ ಮಾಡಿದ್ದಲ್ಲದೆ, ಅದನ್ನು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದರು. ಪೋಸ್ಟ್‌ ಮಾಡುವ ವೇಳೆ ಮಹೀಂದ್ರಾ ಸಮೂಹದ ಚೇರ್ಮನ್‌ ಉದ್ಯಮಿ ಆನಂದ್‌ ಮಹೀಂದ್ರಾ ಅವರ ಆಶೀರ್ವಾದವನ್ನು ಕೋರಿದ್ದರು. ಆದರೆ, ಇವರು ಟ್ಯಾಗ್‌ ಮಾಡಿ ಪೋಸ್ಟ್‌ ಮಾಡಿದ್ದು ವ್ಯರ್ಥವಾಗಲಿಲ್ಲ. ಬ್ರ್ಯಾಂಡ್‌ ನ್ಯೂ ಬಿಳಿ ಬಣ್ಣದ ಮಹೀಂದ್ರಾ ಎಕ್ಸ್‌ಯುವಿ ಕಾರಿಗೆ ಹೂವಿನ ಹಾರ ಹಾಕಿ, ಅದರ ಪಕ್ಕದಲ್ಲಿಯೇ ನಿಂತುಕೊಂಡು ಅಶೋಕ್‌ ಕುಮಾರ್‌ ಫೋಟೋ ತೆಗೆಸಿಕೊಂಡಿದ್ದರು. ಇದೇ ಚಿತ್ರವನ್ನು ಪೋಸ್ಟ್‌ ಮಾಡಿದ್ದ ಅವರು, "10 ವರ್ಷಗಳ ಕಠಿಣ ಶ್ರಮದ ಬಳಿಕ, ನಾನು ಮಹೀಂದ್ರಾ ಎಕ್ಸ್‌ಯುವಿ 700 ಕಾರ್‌ಅನ್ನು ಖರೀದಿ ಮಾಡಿದ್ದೇನೆ. ನನಗೆ ನಿಮ್ಮ ಆಶೀರ್ವಾದ ಬೇಕು' ಎಂದು ಹೇಳಿ ಆನಂದ್‌ ಮಹೀಂದ್ರಾ ಅವರನ್ನು ಟ್ಯಾಗ್‌ ಮಾಡಿದ್ದರು.

ಅಂದಾಜು ಎರಡು ದಿನಗಳ ಬಳಿಕ, ಆನಂದ್‌ ಮಹೀಂದ್ರಾ ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ಇದು ಈಗ ಟ್ವಿಟರ್‌ನಲ್ಲಿ ವೈರಲ್‌ ಆಗಿದೆ. ತಮ್ಮ ಸ್ಪೂರ್ತಿದಾಯಕ ಪೋಸ್ಟ್‌ಗಳು ಹಾಗೂ ಚಾಣಾಕ್ಷ ಪ್ರತಿಕ್ರಿಯೆಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯರಾಗಿರುವ ಆನಂದ್‌ ಮಹೀಂದ್ರಾ, ಅಶೋಕ್‌ ಕುಮಾರ್‌ ಖರೀದಿ ಮಾಡಿದ ಹೊಸ ಕಾರಿಗೆ ತಮ್ಮ ಅಭಿನಂದನೆಯನ್ನೂ ತಿಳಿಸಿದ್ದಾರೆ. ಅದರೊಂದಿಗೆ ತಮ್ಮ ಕಂಪನಿ ಸಿದ್ಧ ಮಾಡಿರುವ ಕಾರ್‌ಅನ್ನು ಖರೀದಿ ಮಾಡಿದ್ದಕ್ಕೆ ಬಳಕೆದಾರನಿಗೆ ಥ್ಯಾಂಕ್ಸ್‌ ಕೂಡ ಹೇಳಿದ್ದಾರೆ.

Thank you, but it is YOU who have blessed us with your choice…Congratulatioms on your success that has come from hard work. Happy motoring. https://t.co/aZyuqOFIa8

— anand mahindra (@anandmahindra)

Tap to resize

Latest Videos

ನೀವೇ ಹರಸಿದ್ದೀರಿ: ಥ್ಯಾಂಕ್‌ ಯು. ಆದರೆ, ನಿಮ್ಮ ಆಯ್ಕೆಯ ಮೂಲಕ ನೀವು ನಮಗೆ ಆಶೀರ್ವಾದ ನೀಡಿದ್ದೀರಿ. ಕಠಿಣ ಪರಿಶ್ರಮದ ಮೂಲಕ ಬಂದ ನಿಮ್ಮ ಯಶಸ್ಸಿಗೆ ನಾನು ಧನ್ಯವಾದಗಳನ್ನು ಹೇಳುತ್ತೇನೆ. ಹ್ಯಾಪಿ ಮೋಟಾರಿಂಗ್‌' ಎಂದು ಆನಂದ್‌ ಮಹೀಂದ್ರಾ ಪ್ರತಿಕ್ರಿಯೆ ನೀಡಿದ್ದಾರೆ. ಆ ಬಳಿಕ ಸಿ.ಅಶೋಕ್‌ ಕುಮಾರ್‌ ಕೂಡ ಅವರಿಗೆ, ತುಂಬಾ ಧನ್ಯವಾದಗಳು ಸರ್‌ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

SUV ಬಿಗ್ ಡ್ಯಾಡಿ ಮಹೀಂದ್ರಾ ಸ್ಕಾರ್ಪಿಯೋ ಎನ್ ಲುಕ್ ಬಹಿರಂಗಪಡಿಸಿದ ಆನಂದ್‌ ಮಹೀಂದ್ರಾ

ಆನಂದ್‌ ಮಹೀಂದ್ರಾ ನೀಡಿರುವ ಪ್ರತಿಕ್ರಿಯೆ, ಕೇವಲ ಅಶೋಕ್‌ಕುಮಾರ್‌ಗೆ ಮಾತ್ರವಲ್ಲ ಟ್ವಿಟರ್‌ನ ಕೆಲ ಬಳಕೆದಾರರ ಖುಷಿಗೂ ಕಾರಣವಾಯಿತು. "ಅದ್ಭುತ ಮೆಚ್ಚುಗೆ ಸರ್. ಕೃತಜ್ಞತೆ ನಿಜವಾಗಿಯೂ ಬಹಳ ದೂರ ಹೋಗುತ್ತದೆ. ನಿಮಗೆ ವಿಶೇಷವಾದ ಭಾವನೆಯನ್ನು ನೀಡುತ್ತದೆ. ಸಿ ಅಶೋಕ್‌ಕುಮಾರ್ ಅವರಿಗೆ ಅಭಿನಂದನೆಗಳು. ಕಠಿಣ ಪರಿಶ್ರಮವು ಫಲ ನೀಡುತ್ತದೆ" ಎಂದು ಒಂದು ಕಾಮೆಂಟ್‌ ಬರೆದಿದ್ದಾರೆ.ಇನ್ನೊಬ್ಬ ವ್ಯಕ್ತಿ ಕೂಡ ಇದ್ದಕ್ಕೆ ಪ್ರತಿಕ್ರಿಯೆ ನೀಡಿದ್ದು, ನಿಮ್ಮ ಟ್ವೀಟ್‌ ನೋಡಿದ ಬಳಿಕ ನನ್ನ ಕಣ್ಣುಗಳು ಭಾವುಕವಾದವು' ಎಂದು ಬರೆದಿದ್ದಾರೆ.

ಒಂದೇ ಸೈಕಲ್ ಅನ್ನು ಒಟ್ಟಿಗೆ ತುಳಿಯುವ ಬಾಲಕರು : ವಿಡಿಯೋ ವೈರಲ್

 94 ಲಕ್ಷ ಫಾಲೋವರ್ಸ್‌: ಮಹೀಂದ್ರಾ ಮತ್ತು ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷರು ಟ್ವಿಟರ್‌ನಲ್ಲಿ ಸಕ್ರಿಯರಾಗಿದ್ದಾರೆ ಮತ್ತು ಪ್ರತಿದಿನ ತಮ್ಮ ಪೋಸ್ಟ್‌ಗಳು ಮತ್ತು ಚಿತ್ರಗಳ ಬಗ್ಗೆ ಬಳಕೆದಾರರ ಅಭಿಪ್ರಾಯವನ್ನು ತೆಗೆದುಕೊಳ್ಳುತ್ತಲೇ ಇರುತ್ತಾರೆ. ಅವರು ಟ್ವಿಟರ್‌ನಲ್ಲಿ 94 ಲಕ್ಷ ಹಿಂಬಾಲಕರನ್ನು ಹೊಂದಿದ್ದಾರೆ ಮತ್ತು ಅವರ ಪೋಸ್ಟ್ ಹೆಚ್ಚು ವೈರಲ್ ಆಗುತ್ತಿದೆ ಎಂಬುದು ಗಮನಿಸಬೇಕಾದ ಸಂಗತಿ. ಆನಂದ್ ಮಹೀಂದ್ರಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರೇರಣಾದಾಯಿ ವಿಷಯವನ್ನು ಪೋಸ್ಟ್ ಮಾಡಲು ಹೆಸರುವಾಸಿಯಾಗಿದ್ದಾರೆ.

click me!