ಆನಂದ್ ಮಹೀಂದ್ರ ಇತ್ತೀಚೆಗೆ ಹೊಚ್ಚ ಹೊಸ ಸ್ಕಾರ್ಪಿಯೋN ಕಾರು ಡೆಲಿವರಿ ಪಡೆದಿದ್ದಾರೆ. ಹೊಸ ಅವಾತರಾದಲ್ಲಿ ಬಿಡುಗಡೆಯಾದ ಈ ಕಾರು ಪಡೆದ ಚೇರ್ಮೆನ್ ಆನಂದ್ ಮಹೀಂದ್ರ ಹೊಸ ಹೆಸರು ಸೂಚಿಸುವಂತೆ ಕೇಳಿಕೊಂಡಿದ್ದರು. ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ಹಲವು ಹೆಸರುಗಳ ಪೈಕಿ 2 ಹೆಸರು ಅಂತಿಮಗೊಳಿಸಿದ್ದಾರೆ. ಇದೀಗ ಇವರರಡಲ್ಲಿ ಉತ್ತಮ ಯಾವುದು ಎಂದು ಮತ್ತೆ ಜನರಲ್ಲಿ ಮನವಿ ಮಾಡಿದ್ದಾರೆ.
ಮುಂಬೈ(ಅ.10): ಮಹೀಂದ್ರ ಕಂಪನಿ ಚೇರ್ಮೆನ್ ಆನಂದ್ ಮಹೀಂದ್ರ ಹೊಚ್ಚ ಹೊಸ ಸ್ಕಾರ್ಪಿಯೋN ಹೆಸರು ಅಂತಿಮಗೊಂಡಿದೆ. ಮಹೀಂದ್ರ ಹೊಸ ರೂಪ, ಹೊಸ ವಿನ್ಯಾಸ ಹಾಗೂ ಹಲವು ಮಹತ್ತರ ಬದಲಾವಣೆಗಳೊಂದಿಗೆ ಸ್ಕಾರ್ಪಿಯೋN ಕಾರನ್ನು ಬಿಡುಗಡೆ ಮಾಡಿತ್ತು. ಹೊಸ ಸ್ಕಾರ್ಪಿಯೋ ಕಾರನ್ನು ಆನಂದ್ ಮಹೀಂದ್ರ ಪಡೆದುಕೊಂಡಿದ್ದರು.. ನೂತನ ಸ್ಕಾರ್ಪಿಯೋ ಡೆಲಿವರಿ ಪಡೆದ ಆನಂದ್ ಮಹೀಂದ್ರ, ಹೊಸ ಕಾರಿಗೆ ಉತ್ತಮ ಹೆಸರು ಸೂಚಿಸಲು ಟ್ವಿಟರ್ ಮೂಕ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಹೆಸರುಗಳ ಸುರಿಮಳೆಯಾಗಿತ್ತು. ಇದರಲ್ಲಿ ಆನಂದ್ ಮಹೀಂದ್ರ 2 ಹೆಸರನ್ನು ಅಂತಿಮಗೊಳಿಸಿದ್ದಾರೆ. ಇದೀಗ ಮತ್ತೆ ಜನತೆಯಲ್ಲಿ ಮನವಿಯೊಂದನ್ನು ಮಾಡಿದ್ದಾರೆ. ಈ ಎರಡು ಹೆಸರಲ್ಲಿ ಯಾವ ಹೆಸರು ಫೈನಲ್ ಮಾಡಬೇಕು ಅನ್ನೋದು ಸೂಚಿಸಿ ಎಂದು ಆನಂದ್ ಮಹೀಂದ್ರ ಮತ್ತೆ ಟ್ವೀಟ್ ಮಾಡಿದ್ದಾರೆ.
ಆನಂದ್ ಮಹೀಂದ್ರ ಮನವಿ ಬೆನ್ನಲ್ಲೇ ಹಲವರು ಹೆಸರು ಸೂಚಿಸಿದ್ದಾರೆ. ಈ ಹೆಸರುಗಳ ಪೈಕಿ ಆನಂದ್ ಮಹೀಂದ್ರ ಭೀಮ್ ಹಾಗೂ ಬಿಚ್ಚು ಹೆಸರನ್ನು ಅಂತಿಮಗೊಳಿಸಿದ್ದಾರೆ. ಈ ಎರಡು ಹೆಸರಲ್ಲಿ ಯಾವುದು ಫೈನಲ್ ಗೊಳಿಸಬೇಕು. ಈ ಕುರಿತು ನಿಮ್ಮ ತೀರ್ಪಿಗೆ ಕಾಯುತ್ತಿದ್ದೇನೆ ಎಂದು ಆನಂದ್ ಮಹೀಂದ್ರ ಟ್ವೀಟ್ ಮಾಡಿದ್ದಾರೆ.
undefined
ಮಹೀಂದ್ರ ಚೇರ್ಮೆನ್ ಆನಂದ್ ಮಹೀಂದ್ರಾಗೆ ಹೊಚ್ಚ ಹೊಸ ಸ್ಕಾರ್ಪಿಯೋN ಡೆಲಿವರಿ!
ಹಲವರು ಭೀಮ್ ಹೆಸರು ಸೂಕ್ತ. ಮಹಾಭಾರತದಲ್ಲಿರುವ ಹೆಸರು, ಸಿಂಬಲ್ ಆಫ್ ಕಿಂಗ್, ಸ್ಕಾರ್ಪಿಯೋN ಶಕ್ತಿಯುತ ವಾಹನಕ್ಕೆ ಅಷ್ಟೇ ಶಕ್ತಿಯುತ ಹೆಸರಿನ ಅವಶ್ಯಕತೆ ಇದೆ. ಹೀಗಾಗಿ ಭೀಮ್ ಹೆಸರು ಇರಲಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಸುಮಾರು 25,000ಕ್ಕೂ ಹಚ್ಚು ಮಂದಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೂ ಕೆಲವರು ಆಧುನಿಕ ಸ್ಕಾರ್ಪಿಯೋ ಕಾರಿಗೆ ಆಧುನಿಕವಾಗಿ, ಸ್ಟೈಲೀಶ್ ಹೆಸರು ಇರಲಿ. ಹೀಗಾಗಿ ಬಿಚ್ಚು ಸೂಕ್ತ ಎಂದಿದ್ದಾರೆ.
Thank you all for the flood of suggestions for the nickname of my new Scorpio-N. I’ve shortlisted two. Here’s the final shoot-out between them. Need your verdict.
— anand mahindra (@anandmahindra)
ಕಾರು ಡೆಲಿವರಿ ಪಡೆದ ಬೆನ್ನಲ್ಲೇ ಹೆಸರು ಸೂಚಿಸಲು ಮನವಿ ಮಾಡಿದ್ದ ಆನಂದ್
ನೂತನ ಕಾರು ಡೆಲಿವರಿ ಪಡೆದ ಸಂತಸದಲ್ಲಿ ಆನಂದ್ ಮಹೀಂದ್ರ ಟ್ವೀಟ್ ಮಾಡಿದ್ದರು. ಇದೇ ವೇಳೆ ಕಾರಿಗೆ ಹೊಸ ಹೆಸರು ಸೂಚಿಸುವಂತೆ ಮನವಿ ಮಾಡಿದ್ದರು. ಆನಂದ್ ಮಹೀಂದ್ರ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚನಲ ಸೃಷ್ಟಿಸಿದ್ದಾರೆ. ಹೀಗಾಗಿ ಆನಂದ್ ಮಹೀಂದ್ರ ಅವರ ಪ್ರತಿ ಟ್ವೀಟ್‌ಗೆ ಅಷ್ಟೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತೆ. ಹೆಸರು ಸೂಚಿಸಲು ಹೇಳಿದ ಬೆನ್ನಲ್ಲೇ ಸಾವಿರಾರು ಭಿನ್ನ ಹೆಸರುಗಳನ್ನು ಜನರು ಸೂಚಿಸಿದ್ದರು. ಇದರಲ್ಲಿ ಎರಡು ಹೆಸರು ಫೈನಲ್ ಮಾಡಿ, ಇದರಲ್ಲಿ ಯಾವುದು ಸೂಕ್ತ ಅನ್ನೋದನ್ನು ಮತ್ತೆ ಜನರಲ್ಲಿ ಕೇಳಿದ್ದಾರೆ.
ಎಸ್‌ಯುವಿಗಳ ಬಿಗ್ ಡ್ಯಾಡಿ’ ಅನ್ನೋ ಟ್ಯಾಗ್‌ಲೈನ್ ಮೂಲಕ ಫೇಮಸ್ ಆಗ್ತಿರುವ ಎಸ್‌ಯುವಿ ಮಹೀಂದ್ರಾ ಸ್ಕಾರ್ಪಿಯೋ ಎನ್ ಜೂನ್ 27ಕ್ಕೆ ಬಿಡುಗಡೆಯಾಗಿದೆ. 4*4 ಆಗಿರೋ ಕಾರಣ ಆಫ್ ರೋಡ್ ಡ್ರೈವ್ ಸಲೀಸು. ಅಡ್ವೆಂಚರ್ ರೈಡ್‌ಗೂ ಬೆಸ್ಟ್ ಎನ್ನಬಹುದು. ಡ್ಯುಯೆಲ್ ಎಲ್‌ಇಡಿ ಪ್ರೊಜೆಕ್ಟರ್ ಯೂನಿಟ್ಸ್ ಇರುವ ಕಾರಣ ಸ್ಪೋರ್ಟಿ ಹಾಗೂ ಸ್ಟೈಲಿಶ್ ಲುಕ್‌ನದೆ. ಬೋಲ್ಡ್ ಡಿಸೈನ್, ಅತ್ಯಾಧುನಿಕ ಫೀಚರ್‌ಗಳು, ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಇತ್ಯಾದಿ ಫೀಚರ್‌ಗಳುಳ್ಳ ಈ ಕಾರು ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.