ದಾವಣಗೆರೆಯ ನಿಟ್ಟುವಳ್ಳಿಯ ಬಳಿ ಕಳೆದ 32 ವರ್ಷಗಳಿಂದ ಇದ್ದ ಸಮಾಧಿಯನ್ನು ಏಕಾಏಕಿ ಒಡೆದು ಭೂಮಿ ವಶಕ್ಕೆ ಪಡೆಯಲು ಬಂದವರ ವಿರುದ್ಧ ಕ್ರಮ ಕೂಗೊಳ್ಳುವಂತೆ ಆಗ್ರಹಿಸಿ ನ.24 ರಂದು ಪ್ರತಿಭಟನೆ ಮಾಡುವುದಕ್ಕೆ ಸಂತ್ರಸ್ತ ಕುಟುಂಬ ಸದಸ್ಯರು ತೀರ್ಮಾನಿಸಿದ್ದಾರೆ.
ದಾವಣಗೆರೆ (ನ.22) : ದಾವಣಗೆರೆ ನಗರದ ನಿಟ್ಟುವಳ್ಳಿಯ ಬಳಿ ಕಳೆದ 32 ವರ್ಷಗಳಿಂದ ಇದ್ದ ಸಮಾಧಿಯನ್ನು ಏಕಾಏಕಿ ಒಡೆದು ಭೂಮಿ ವಶಕ್ಕೆ ಪಡೆಯಲು ಬಂದವರ ವಿರುದ್ಧ ಕ್ರಮ ಕೂಗೊಳ್ಳುವಂತೆ ಆಗ್ರಹಿಸಿ ನ.24 ರಂದು ಪ್ರತಿಭಟನೆ ಮಾಡುವುದಕ್ಕೆ ಸಂತ್ರಸ್ತ ಕುಟುಂಬ ಸದಸ್ಯರು ತೀರ್ಮಾನಿಸಿದ್ದಾರೆ.
ಈ ಕುರಿತು ಮಂಗಳವಾರ ಸುದ್ಡಾದಿಗೋಷ್ಟಿಯಲ್ಲಿ ಮಾತನಾಡಿದ ಸಂತ್ರಸ್ತೆ ಬಿ.ಟಿ. ಜಾಹ್ನವಿ ಅವರು, ತಮ್ಮ ಸದಸ್ಯರ ಸಮಾಧಿಗಳನ್ನು ಧ್ವಂಸ (Tomb wreck) ಮಾಡಿದ್ದಲ್ಲದೆ ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅಗ್ರಹಿಸಿದ್ದಾರೆ.
1978ರಲ್ಲಿ ಡಾ.ಬಿ.ಎಂ.ತಿಪ್ಪೇಸ್ವಾಮಿ ಅವರ ಹಿರಿಯ ಮಗ ಬಿ.ಟಿ. ಮಲ್ಲಿಕಾರ್ಜುನ ಇವರಿಗೆ ಸರ್ಕಾರದಿಂದ ಸ್ವ-ಉದ್ಯೋಗಕ್ಕಾಗಿ ದಾವಣಗೆರೆ ನಿಟ್ಟುವಳ್ಳಿಯ (Davanagere Nittuvalli) ವಿದ್ಯುತ್ ನಗರದ ಬಳಿ 2 ಎಕರೆ 11 ಗುಂಟೆ ಭೂಮಿ ಮಂಜೂರಾಗಿತ್ತು. ಈ ಸ್ಥಳವನ್ನು ಡೈರಿ (Dairy) ಹಾಗೂ ಇತರೆ ಸ್ವಯಂ ಉದ್ಯೋಗಕ್ಕೆ ಉಪಯೋಗಿಸಲಾಗುತ್ತಿತ್ತು. ಡಾ.ಬಿ.ಎಂ.ತಿಪ್ಪೇಸ್ವಾಮಿ 1990ರಲ್ಲಿ ಮೃತಪಟ್ಟಿದ್ದು ಮಂಜೂರಾದ ಈ ಜಮೀನಿನ ಒಂದು ಭಾಗದಲ್ಲಿ ಅಂತ್ಯಕ್ರಿಯೆ ಮಾಡಿ ಸಮಾಧಿ Burial) ನಿರ್ಮಾಣ ಮಾಡಲಾಗಿತ್ತು, ನಂತರ 1990 ರಲ್ಲಿ ತಿಪ್ಪೇಸ್ವಾಮಿಯವರ 2ನೇ ಮಗನಾದ ಬಿ.ಟಿ ಮೋಹನ್ ಅವರನ್ನು, ನಂತರ 2003ರಲ್ಲಿ ಅವರ ಪತ್ನಿಯಾದ ಯಲ್ಲಮ್ಮ ಅವರನ್ನು ಸದರಿ ಸ್ಥಳದಲ್ಲಿ ಅಂತ್ಯಕ್ರಿಯೆ ಮಾಡಲಾಗಿತ್ತು. ಆನಂತರ 2016 ರಲ್ಲಿ ಅವರ ಹಿರಿಯ ಮಗ ಮಲ್ಲಿಕಾರ್ಜುನರವರನ್ನೂ (Mallikarjuna) ಸಹ ಅಲ್ಲಿಯೇ ಅಂತ್ಯಕ್ರಿಯೆ ಮಾಡಿ ನಾಲ್ಕು ಸಮಾಧಿಗಳನ್ನು ನಿರ್ಮಿಸಲಾಗಿತ್ತು. ಜೊತೆಗೆ ಆ ಭೂಮಿಯಲ್ಲಿ ನಮ್ಮ ಕುಟುಂಬದ ನಾಲ್ವರ ಸಮಾಧಿ ಇದ್ದ ಕಾರಣ ಆಗಿನಂದಲೂ ಅದನ್ನು ಪೂಜ್ಯಸ್ಥಾನವಾಗಿ ಭಾವಿಸಿ ಪೂಜೆ ಮಾಡಿಕೊಂಡು ಬರಲಾಗುತ್ತಿತ್ತು.
ಜಮೀನು ವಿವಾದ ಇತ್ಯರ್ಥಕ್ಕಾಗಿ ಸ್ಮಶಾನದ ದಾರಿ ಮುಚ್ಚಿದ ಕುಟುಂಬ
ಆದರೆ, ಏಕಾಏಕಿ ನಮಗೆ ಆಗದ ಕುಟುಂಬವೊಂದು ಆ ಜಾಗದಲ್ಲಿದ್ದ ಸಮಾಧಿಗಳನ್ನು ಜೆಸಿಬಿ (JCB)ಯಿಂದ ಒಡೆದು ಹಾಕಿ ವಶಕ್ಕೆ ಪಡೆಯುಲು ಮುಂದಾಗಿದ್ದಾರೆ. ನಮ್ಮ ಕುಟುಂಬದಿಂದ ಆ ಜಾಗವನ್ನು ವೈಯಕ್ತಿಕ (Individual) ಉದ್ದೇಶಕ್ಕೆ ಬಳಸದೇ ನಮಗೆ ಅನುಕೂಲವಾದ ಕಾಲಕ್ಕೆ ಡಾ.ತಿಪ್ಪೇಸ್ವಾಮಿಯವರ ಸ್ಮಾರಕವನ್ನು ಸ್ಥಾಪಿಸುವ ಯೋಚನೆಯಲ್ಲಿದ್ದೆವು. ಜೊತೆಗೆ ಅಲ್ಲಿ ನಮ್ಮ ಸಮಾಜದ ಏಳಿಗೆ (Social Improvement) ಮತ್ತು ಕಲ್ಯಾಣಕ್ಕಾಗಿ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಉದ್ದೇಶವಿತ್ತು. ಕಾನೂನಿನ ಪ್ರಕಾರ ಈಗ ತಿಪ್ಪೇಸ್ವಾಮಿ ಅವರ ಹಿರಿಯ ಮಗ ಮಲ್ಲಿಕಾರ್ಜುನ ಅವರ ಮರಣದ ನಂತರ ಅವರ ಪತ್ನಿ ಪುಷ್ಪಲತಾ ಹಾಗೂ ಮಕ್ಕಳಾದ ರಾಹುಲ್, ನಕುಲ್ ಅವರಿಗೆ ಅದು ವರ್ಗಾವಣೆಯಾಗಿರುತ್ತದೆ.
ಈ ಭೂಮಿಯ ವಿಚಾರವಾಗಿ ಕೆಲವರು ನ್ಯಾಯಾಲಯಕ್ಕೆ ಹೋಗಿದ್ದು, 2002 ರಲ್ಲಿ ಮಲ್ಲಿಕಾರ್ಜುನ ಅವರಿಗೆ ಮಂಜೂರಾದ ನ್ಯಾಯ ಸಮ್ಮತವಾಗಿದೆ ಎಂದು ಉಚ್ಚನ್ಯಾಯಾಲಯವು (High court) ಆದೇಶ ನೀಡಿದೆ. ಆದರೆ, ಕಳೆದ ನ. 20 ರಂದು ರಜೆ ದಿನವಾದ ಭಾನುವಾರ ಗಣೇಶ ಹುಲ್ಲುಮನೆ (Ganesh Hullumane) ಮತ್ತು ಇತರರು ಯಾವುದೇ ಮುನ್ಸೂಚನೆ ಇಲ್ಲದೆ ಜೆಸಿಬಿಯಿಂದ ಸಮಾಧಿಗಳನ್ನು ಧ್ವಂಸ (Wreck) ಮಾಡುತ್ತಿದ್ದರು. ಈ ವಿಚಾರ ತಿಳಿದು ಕುಟುಂದ ಸದಸ್ಯರು ಸ್ಥಳಕ್ಕೆ ತೆರಳಿ, ಸಮಾಧಿ ಧ್ವಂಸ ತಡೆಯಲು ಮುಂದಾದಾಗ ಈ ಜಾಗ ನಮ್ಮದು ಎಂದು ನಮ್ಮನ್ನು ದೂಡಿದ್ದಾರೆ. ಜೊತೆಗೆ ಇಲ್ಲಿರುವ ಸಮಾಧಿ ಯಾರದೋ ನಮಗೆ ತಿಳಿದಿಲ್ಲ. ಅದು ಯಾರದ್ದೇ ಆಗಿರಲಿ, ಆ ಸಮಾಧಿಯನ್ನ ನಾವು ಒಡೆದು ಹಾಕಿದ್ದೇವೆ ಎಂದು ಗಣೇಶ್ ದೌರ್ಜನ್ಯದಿಂದ ವರ್ತಿಸಿದ್ದಾರೆ ಎಂದು ಆರೋಪಿಸಿದರು.
ಸುದ್ದಿ ಗೋಷ್ಠಿಯಲ್ಲಿ ಎಲ್.ಡಿ.ಗೋಣೆಪ್ಪ, ರವಿ ನಾರಾಯಣ, ಬಿ.ಎಂ.ಪುಷ್ಪಲತಾ, ಸುವರ್ಣಮ್ಮ, ಗಾಯತ್ರಿ, ಆಲೂರು ನಿಂಗರಾಜ, ಹುಚ್ಚಂಗೆಪ್ಪ, ರಾಹುಲ್, ಗೋದಾವರಿ, ಎಂ.ಹಾಲೇಶ್, ಕುಂದವಾಡ ಮಂಜುನಾಥ್, ಹೆಚ್.ಮಲ್ಲೇಶ್ ಇತರರು ಇದ್ದರು.