ಹೊನ್ನಾಳಿಯ ನೇರಲಗುಂಡಿ ಬಳಿ ಆಟೋ ಪಲ್ಟಿ : ಕಾರ್ಮಿಕರಿಗೆ ಗಂಭೀರ ಗಾಯ

By Sathish Kumar KH  |  First Published Nov 20, 2022, 12:57 PM IST

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ನೇರಲಗುಂಡಿ ಗ್ರಾಮದ ಬಳಿ ಅಡಿಕೆ ಸುಲಿಯಲು ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಆಟೋ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಇಂದು ಬೆಳಗ್ಗೆ ನಡೆದಿದೆ. ಆಟೋದಲ್ಲಿದ್ದ ಕಾರ್ಮಿಕರಿಗೆ ಗಂಭೀರ ಗಾಯಗಳಾಗಿದ್ದು, ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.



ದಾವಣಗೆರೆ (ನ.20) : ಜಿಲ್ಲೆಯ ಹೊನ್ನಾಳಿ ತಾಲೂಕಿನ ನೇರಲಗುಂಡಿ ಗ್ರಾಮದ ಬಳಿ ಅಡಿಕೆ ಸುಲಿಯಲು ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಆಟೋ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಇಂದು ಬೆಳಗ್ಗೆ ನಡೆದಿದೆ. ಆಟೋದಲ್ಲಿದ್ದ ಕಾರ್ಮಿಕರಿಗೆ ಗಂಭೀರ ಗಾಯಗಳಾಗಿದ್ದು, ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರತಿನಿತ್ಯ ಅಡಿಕೆ ಸುಲಿಯಲು ಕೆಲವು ಕಾರ್ಮಿಕರು ಆಟೋದಲ್ಲಿ ಹೋಗುತ್ತಿದ್ದರು. ಆದರೆ, ಭಾನುವಾರ (Sunday) ಸಾಮಾನ್ಯ ದಿನದಂತೆ ಆಟೋದಲ್ಲಿ ತೆರಳುವ ವೇಳೆ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾಗಿದೆ. ಈ ಘಟನೆಯಿಂದ ಅಡಿಕೆ ಸುಲಿಯಲು ಹೊರಟಿದ್ದ ಕಾರ್ಮಿಕರಿಗೆ (Labours) ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು (Injured) ಹೊನ್ನಾಳಿ ಸಾರ್ವಜನಿಕರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ರವಾನೆ: ಆಟೋ ಪಲ್ಟಿಯಾಗಿ ಕಾರ್ಮಿಕರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ವಿಷಯ ತಿಳಿದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ (Political Secretory) ಎಂ.ಪಿ. ರೇಣುಕಾಚಾರ್ಯ ಅವರು  ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಪರಿಸ್ಥಿತಿ ಪರಿಶೀಲಿಸಿದ್ದಾರೆ. ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅವರ ಆರೋಗ್ಯ (Health) ವಿಚಾರಿಸಿ ಉತ್ತಮ ಚಿಕಿತ್ಸೆ ಕೊಡಿಸುವ ಭರವಸೆ ನೀಡಿದ್ದಾರೆ. ಮತ್ತೊಂದೆಡೆ, ಗಂಭೀರವಾಗಿ ಗಾಯಗೊಂಡಿದ್ದ ಕಾರ್ಮಿಕರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ (Shivamogga Meggan Hospital) ದಾಖಲಿಸುವುದಕ್ಕೆ ಸ್ಥಳಾಂತರ ಮಾಡುವಂತೆ ರೇಣುಕಾಚಾರ್ಯ ಸೂಚನೆ ನೀಡಿದರು.

Tap to resize

Latest Videos

ಕೋಲಾರ: ಮುಳಬಾಗಿಲು ಬಳಿ ಖಾಸಗಿ ಬಸ್‌ ಪಲ್ಟಿ, ಇಬ್ಬರ ಸಾವು

ಚಿಂತಾಮಣಿ ಬಳಿ ಖಾಸಗಿ ಬಸ್‌ ಹಳ್ಳಕ್ಕುರುಳಿ 40 ಮಂದಿಗೆ ಗಾಯ: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಅಮಿಟಿಗಾನಹಳ್ಳಿ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಖಾಸಗಿ ಬಸ್ ಉರುಳಿದ ಘಟನೆ ನಿನ್ನೆ ತಡರಾತ್ರಿ ಸಂಭವಿಸಿದೆ. ಈ ಘಟನೆಯಿಂದಾಗಿ ಬಸ್‌ನಲ್ಲಿದ್ದ 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಎಲ್ಲರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.  ಹಿಂದೂಪುರ- ತಿರುಪತಿ (Hindupura-Thirupati) ಮಾರ್ಗದಲ್ಲಿ ಸಂಚಾರ ಮಾಡುತ್ತಿದ್ದ ಬಸ್ ತಡರಾತ್ರಿ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿತ್ತು. ಖಾಸಗಿ ಬಸ್ (Private Bus) ಅಪಘಾತದಿಂದ ಗಾಯಗೊಂಡಿದ್ದ ಎಲ್ಲ ಗಾಯಾಳುಗಳನ್ನು ಚಿಂತಾಮಣಿ (Chintamani) ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಚಿಂತಾಮಣಿ ಗ್ರಾಮಾಂತರ ಪೊಲೀಸರು (Police) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಘಟನೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದು, ಚಾಲಕನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸುವುದಾಗಿ ತಿಳಿಸಿದ್ದಾರೆ.

click me!