ದಾವಣಗೆರೆಯಲ್ಲಿ KSRTC ಬಸ್ಸಿಗೆ ಭರ್ಜರಿ ದಂಡ ಹಾಕಿ ಬಸ್ಸನ್ನೇ ಸೀಜ್ ಮಾಡಲಾಗಿದೆ. ಆದ್ರೆ ಬಸ್ ಸೀಜ್ ಮಾಡಲು ಮುಖ್ಯ ಕಾರಣ ಇದೆ. ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಹರಿಹರ [ಅ.24]: ಎನ್.ಡಬ್ಲೂ.ಆರ್.ಟಿ.ಸಿ ರಾಣೆಬೆನ್ನೂರು ವಿಭಾಗದ ಬಸ್‌ನ್ನು ಜಪ್ತಿ ಮಾಡಿ ಕಕ್ಷೀದಾರ ಪಕ್ಕಿರಪ್ಪ ಸಿ. ಮಾಳಿ ಅವರಿಗೆ 4 ಲಕ್ಷ 78 ಸಾವಿರ 225 ರು. ಪರಿಹಾರ ನೀಡುವಂತೆ ಹರಿಹರದ ಹಿರಿಯ ಸಿವಿಲ್ ನ್ಯಾಯಾಲಯ ಆದೇಶ ಮಾಡಿದ ಹಿನ್ನಲೆ ಬುಧವಾರ ನಗರದ ಸಾರಿಗೆ ಬಸ್ ನಿಲ್ದಾಣದಲ್ಲಿ ಬಸ್‌ನ್ನು ಜಪ್ತಿ ಮಾಡಲಾಯಿತು.
ನಗರದ ನಿಯೋ ಮೆಡಿಕಲ್ಸ್ ಹತ್ತಿರ 2015 ರಂದು ನಡೆದ ಅಪಘಾತದಲ್ಲಿ ಕುಮಾರಪಟ್ಟಣಂ ನಿವಾಸಿ ಪಕ್ಕಿರಪ್ಪ ಎಂಬುವವರು ಅಪಘಾತಕ್ಕೆ ಒಳಗಾದ ಪರಿಣಾಮ ಪರಿಹಾರಕ್ಕಾಗಿ ಕೇಸು ದಾಖಲಿಸಿದ್ದರು. ವಿಚಾರಣೆ ನಡೆಸಿದ ಹರಿಹರ ಹಿರಿಯ ಸಿವಿಲ್ ನ್ಯಾಯಾಲಯ 27 ಮಾರ್ಚ್ 2018 ರಂದು ಆದೇಶ ಮಾಡಿ ಕಕ್ಷೀದಾರ ಪಕ್ಕಿರಪ್ಪ ಮಾಳಿಗೆ 3 ಲಕ್ಷ 87 ಸಾವಿರದ 500 ರೂ ನೀಡುವಂತೆ ಆದೇಶ ಮಾಡಿತ್ತು.
ಬೆಂಗಳೂರಿಗೆ ಈ ಮಾರ್ಗದಿಂದ ಸಂಚರಿಸಲಿವೆ ನೂತನ KSRTC ಬಸ್...
ಆದರೆ ಎನ್.ಡೂಬ್ಲೂ.ಆರ್.ಟಿ.ಸಿ ರಾಣೆಬೆನ್ನೂರು ವಿಭಾಗ ಪರಿಹಾರ ನೀಡಿರಲಿಲ್ಲ. ಈ ಹಿನ್ನಲೆ ನ್ಯಾಯಾಧೀಶರು ದಂಡದ ರೂಪದಲ್ಲಿ ಬಡ್ಡಿ ಸೇರಿ 4 ಲಕ್ಷ 78 ಸಾವಿರದ 225 ರೂ ನೀಡುವಂತೆ ಆಜ್ಞೆ ಹೊರಡಿಸಿ ಎನ್.ಡಬ್ಲೂ.ಆರ್‌ಟಿಸಿ ರಾಣೆಬೆನ್ನೂರು ವಿಭಾಗದ ಬಸ್ ಜಪ್ತಿ ಮಾಡಲು ಅ.17 ಆದೇಶಿಸಿತ್ತು ಅದರಂತೆ ಬುಧವಾರ ನ್ಯಾಯಾಲಯದ ಸಿಬ್ಬಂದಿ ಕೆಎ.27-ಎಪ್ 712 ಬಸ್‌ನ್ನು ಜಪ್ತಿ ಮಾಡಿದರು.