ಸುಟ್ಟು ಕರಕಲಾದ ಸ್ಥಿತಿಯಲ್ಲಿ ಬಿಜೆಪಿ ಮಾಜಿ ಕಾರ್ಪೋರೇಟರ್ ಶವ ಪತ್ತೆ, ಮಕ್ಕಳಿಂದ ದುಡುಕಿನ ನಿರ್ಧಾರ

Published : Jan 11, 2026, 10:12 AM ISTUpdated : Jan 11, 2026, 10:34 AM IST
Former BJP Corporator Chandrashekhar sankol

ಸಾರಾಂಶ

ಸುಟ್ಟು ಕರಕಲಾದ ಸ್ಥಿತಿಯಲ್ಲಿ ಬಿಜೆಪಿ ಮಾಜಿ ಕಾರ್ಪೋರೇಟರ್ ಶವ ಪತ್ತೆ, ದಾವಣಗೆರೆ ಹೊರವಲಯದಲ್ಲಿ ಕಾರಿನಲ್ಲಿ ಕಾರ್ಪೋರೇಟ್ ಶವ ಪತ್ತೆಯಾಗಿದ್ದರೆ, ಮಾಹಿತಿ ತಿಳಿದು ಇಬ್ಬರು ಮಕ್ಕಳು ದುಡುಕಿನ ನಿರ್ಧಾರಕ್ಕೆ ಯತ್ನಿಸಿದ್ದಾರೆ.

ದಾವಣೆಗೆರೆ (ಜ.11) ದಾವಣೆಗೆರೆಯ 43ನೇ ವಾರ್ಡ್‌ನ ಮಾಜಿ ಕಾರ್ಪೋರೇಟರ್ ಸಂಕೋಳ್ ಚಂದ್ರಶೇಖರ ಶವ ಕಾರಿನಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ದುರಂತ ಅಂದರೆ ಸಂಕೋಳ್ ಚಂದ್ರಶೇಖರ ದುರಂತ ಸಾವಿನ ಮಾಹಿತಿ ತಿಳಿಯುತ್ತಿದ್ದಂತೆ ಇಬ್ಬರು ಮಕ್ಕಳು ದುರಂತ ಅಂತ್ಯಕ್ಕೆ ಪ್ರಯತ್ನಿಸಿದ್ದಾರೆ. ಅಸ್ವಸ್ಥಗೊಂಡಿರುವ ಇಬ್ಬರು ಮಕ್ಕಳನ್ನು ಆಸ್ಪತ್ರೆ ದಾಖಲಿಸಲಾಗಿದೆ. ಸಾಲದ ವಿಚಾರದಲ್ಲಿ ಮನೆಯಲ್ಲಿ ನಡೆದ ಜಗಳೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ. ಮೂವರು ಸ್ವಯಂ ಬದುಕು ಅಂತ್ಯಗೊಳಿಸಿರುವುದಾಗಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಮಾಜಿ ಕಾರ್ಪೋರೇಟರ್ ದುರಂತ ಅಂತ್ಯಕ್ಕೆ ರಾಜ್ಯವೇ ಮರುಗಿದೆ.

ಸಾಲ ಮಾಡಿಕೊಂಡಿದ್ದ ಮಾಜಿ ಕಾರ್ಪೋರೇಟರ್ ತಂದಗೆ ಮಕ್ಕಳ ಕ್ಲಾಸ್

ಮಾಜಿ ಕಾರ್ಪೋರೇಟರ್ ಆಗಿರುವ ಸಂಕೋಳ್ ಚಂದ್ರಶೇಖರ ಸಾಲ ಮಾಡಿಕೊಂಡಿದ್ದರು. ಸಾಲ ಹೊರೆ ಹೆಚ್ಚಾಗುುತ್ತಿದ್ದ ಕಾರಣ ಮನೆಗೆ ಸಾಲಗಾರರು ಆಗಮಿಸಲು ಆರಂಭಿಸಿದ್ದರು. ಇದರಿಂದ ಸಂಕೋಳ್ ಚಂದ್ರಶೇಖರ ಅವರ ಇಬ್ಬರು ಮಕ್ಕಳಾದ 20 ವರ್ಷದ ನರೇಶ ಹಾಗೂ 23 ವರ್ಷದ ಪವಿತ್ರಾಗೆ ತೀವ್ರ ಕಿರಿಕಿರಿಯಾಗುತ್ತಿತ್ತು. ಎಲ್ಲೇ ಹೋದರೂ ಸಾಲದ ವಿಚಾರವಾಗಿ ಜನರು ಪ್ರಶ್ನೆ ಮಾಡುತ್ತಿದ್ದರು. ಹೀಗಾಗಿ ಆಕ್ರೋಶಗೊಂಡಿದ್ದ ಮಕ್ಕಳು ನಿನ್ನೆ (ಜ.10) ಸಂಕೋಳ್ ಚಂದ್ರಶೇಖರ ಮನೆಗೆ ಆಗಮಿಸುತ್ತಿದ್ದಂತೆ ಕ್ಲಾಸ್ ತೆಗೆದುಕೊಂಡಿದ್ದರು. ಇದು ಮುಂದವರಿದರೆ ನಾವು ಸಾಯಬೇಕಾಗುತ್ತದೆ ಎಂದು ಮಕ್ಕಳು ಎಚ್ಚರಿಕೆ ನೀಡಿದ್ದರು. ಈ ಮಾತು ಸಂಕೋಳ್ ಚಂದ್ರಶೇಖರ ಅವರ ತೀವ್ರ ಘಾಸಿಗೊಳಿಸಿತ್ತು ಎನ್ನಲಾಗಿದೆ.

ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ನಾಯಕ

ಸಂಕೋಳ್ ಚಂದ್ರಶೇಖರ ಮನೆಯಲ್ಲಿ ಜಗಳವಾಡಿ ಕಾರಿನ ಮೂಲಕ ದಾವಣಗೆರೆ ಹೊರವಲಯ ನಾಗನೂರು ರಸ್ತೆಯ ಬಳಿ ಇರುವ ಅಡಿಕೆ ತೋಟಕ್ಕೆ ತೆರಳಿದ್ದಾರೆ. ಕಾರು ನಿಲ್ಲಿಸಿ ಇಡೀ ಕಾರಿಗೆ ಪೆಟ್ರೋಲ್ ಸುರಿದಿದ್ದಾರೆ. ಬಳಿಕ ಕಾರಿನ ಒಳಗೆ ಡೋರ್ ಲಾಕ್ ಮಾಡಿಕೊಂಡು ಬೆಂಕಿ ಹಚ್ಚಿದ್ದಾರೆ. ಒಂದೇ ಸಮನೆ ಬೆಕ್ಕಿ ಜ್ವಾಲೆಯಾಗಿ ಸಂಕೋಳ್ ಚಂದ್ರಶೇಖರ ಸುಟ್ಟು ಬೂದಿಯಾಗಿದ್ದಾರೆ. ಇತ್ತ ತಂದೆ ಮನೆಗೆ ಬರಲಿಲ್ಲ, ಫೋನ್ ಕೂಡ ರಿಸೀವ್ ಮಾಡಿಲ್ಲ. ಇಬ್ಬರು ಮಕ್ಕಳು ಆಘಾತಗೊಂಡಿದ್ದಾರೆ.

ಮಾಹಿತಿ ಸಿಗುತ್ತಿದ್ದಂತೆ ಬದುಕು ಅಂತ್ಯಗೊಳಿಸಲು ಯತ್ನಿಸಿದ ಮಕ್ಕಳು

ತಂದೆ ದುರಂತ ಅಂತ್ಯಕಂಡಿದ್ದಾರೆ ಅನ್ನೋ ಮಾಹಿತಿ ಸಿಗುತ್ತಿದ್ದಂತೆ ಇಬ್ಬರು ಮಕ್ಕಳು ಮನೆಯಲ್ಲಿ ಬದುಕು ಅಂತ್ಯಗೊಳಿಲು ಯತ್ನಿಸಿದ್ದಾರೆ. ತೀವ್ರ ಅಸ್ವಸ್ಥಗೊಂಡಿರುವ ಇಬ್ಬರು ಮಕ್ಕಳನ್ನು ದಾವಣೆಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರು ಆರೋಗ್ಯ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಕೌಟುಂಬಿಕ ಕಲಹ ಹಿನ್ನೆಲೆ ಬಿಜೆಪಿ ಮಾಜಿ ಕಾರ್ಪೊರೇಟರ್ ದುಡುಕಿನ ನಿರ್ಧಾರ

ಬಿಜೆಪಿ ಮಾಜಿ ಕಾರ್ಪೊರೇಟರ್ ಚಂದ್ರಶೇಖರ್ ಸಂಕೋಳ್ ಇಬ್ಬರು ಮಕ್ಕಳು ವಿಷ ಸೇವಿಸಿ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದರು. ತೀವ್ರ ಅಸ್ವಸ್ಥಗೊಂಡಿದ್ದ ಇಬ್ಬರು ಮಕ್ಕಳು ದಾವಣೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೌಟುಂಬಿಕ ಕಲಹ, ಇಬ್ಬರು ಮಕ್ಕಳು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವಿನ ಹೋರಾಟದಿಂದ ಮನನೊಂದ ಚಂದ್ರಶೇಖರ್ ಸಂಕೋಳ್ ನಾಗನೂರು ಬಳಿಯ ಅಡಿಕೆ ತೋಟಕ್ಕೆ ಬಂದು ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಬದುಕು ಅಂತ್ಯಗೊಳಿಸಿದ್ದಾರೆ. ಅಲ್ಟೋ ಕಾರಿನ ಹಿಂಬದಿ ಸೀಟ್‌ನಲ್ಲಿ ಸಂಪೂರ್ಣ ಸುಟ್ಟು ಕರಕಲಾಗಿರುವ ಮೃತದೇಹ ಪತ್ತೆಯಾಗಿದೆ. ಗುರುತೇ ಸಿಗದಷ್ಟು ಮೃತದೇಹ ಸುಟ್ಟು ಕರಕಲಾಗಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ದಾವಣಗೆರೆ ಉತ್ತರ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದ ಚಂದ್ರಶೇಖರ ಸಂಕೋಳ್, ಜನಪರ ಕಾರ್ಯಗಳ ಮೂಲಕ ಜನಮನ್ನಣೆ ಗಳಿಸಿದ್ದರು. ಚಂದ್ರಶೇಖರ ಸಂಕೋಳ್ ಸಾವನ್ನಪ್ಪಿದ ಸುದ್ದಿ ಕೇಳಿ ತಂಡೋಪತಂಡವಾಗಿ ಜನರು, ಬೆಂಬಲಿಗರು ಆಗಮಿಸುತ್ತಿದ್ದಾರೆ. ಜನರ ನಿಯಂತ್ರಿಸಲು ಪೊಲೀಸರ ಹರಸಾಹಸ ಪಡುತ್ತಿದ್ದಾರೆ.

 

PREV
Read more Articles on
click me!

Recommended Stories

ಮೈಸೂರು ಬೆಳಗಾವಿ ಎಕ್ಸ್‌ಪ್ರೆಸ್‌ ರೈಲು ಹರಿಹರ ನಿಲ್ದಾಣದಲ್ಲಿ ದುರಂತ, ಯಶಸ್ವಿ ಅಣಕು ಪ್ರದರ್ಶನ
Karnataka Hijab controversy: ಭುಗಿಲೆದ್ದ ರಾಜಕೀಯ, 'ಕೇಸರಿ ಅಲೆ'ಗೆ ದಾರಿಯಾಗಲಿದೆಯಾ? ಈಶ್ವರಪ್ಪ ಸ್ಫೋಟಕ ಹೇಳಿಕೆ!