Davanagere ಹೊರಗೆ ಮಲಗಿದ್ದವರನ್ನೇ ಟಾರ್ಗೆಟ್ ಮಾಡಿ ಹತ್ಯೆಗೈಯುತ್ತಿದ್ದ ಸೈಕೊಪಾತ್‌ಗಳು!

By Suvarna NewsFirst Published Apr 11, 2022, 8:10 PM IST
Highlights
  • ಹೊರಗೆ ಮಲಗಿದ್ದವರನ್ನೇ ಟಾರ್ಗೆಟ್ ಮಾಡುತ್ತಿದ್ದ ಸೈಕೊಪಾತ್ ಗಳು 
  • ಪೊಲೀಸರಿಗೆ ಸವಾಲು ಆಗಿದ್ದ ಕೊಲೆ ಪ್ರಕರಣ 
  • ಇಬ್ಬರು ಆರೋಪಿಗಳನ್ನು  ಬಂಧಿಸಿದ ದಾವಣಗೆರೆ ಪೋಲಿಸರು

ವರದಿ - ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್ 

ದಾವಣಗೆರೆ (ಏ.11): ಹರಿಹರ  ನಗರದ ಗಾಂಧಿ ಮೈದಾನದ ಕ್ರೀಡಾ  ಇಲಾಖೆ ವಾಣಿಜ್ಯ ಸಂಕೀರ್ಣದ ಮುಂಭಾಗ ಮಾರ್ಚ್ 16ರಂದು ಬೆಳಕಿಗೆ ಬಂದಿದ್ದ ಯುವಕನ ಸಾವು ರಾಜಕೀಯ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ದಾವಣಗೆರೆ ನಗರ ಠಾಣೆ  ಪೊಲೀಸರು ಬಂಧಿಸಿದ್ದಾರೆ. ನಗರದ ಎ ಕೆ ಕಾಲೋನಿ 1ನೇ ಕ್ರಾಸ್  ವಾಸಿಗಳಾದ ಮಂಜು (31) ಶಿವು(22) ಬಂಧಿತ ಆರೋಪಿಗಳು. ವಾಣಿಜ್ಯ ಸಂಕೀರ್ಣದ ಅಂಬೇಮಾ ಎಂಆರ್‌ಪಿ ವೈನ್ ಶಾಪ್ ಪಕ್ಕದಲ್ಲಿ ಮಾರ್ಚ್ 16ರಂದು ತಾಲೂಕಿನ ಗಂಗನರಸಿ ಗ್ರಾಮದ ಹನುಮಂತಪ್ಪ ಎಂಬುವರ ಪುತ್ರ  ಗಿರೀಶ್ (21) ಅನುಮಾನಾಸ್ಪದವಾಗಿ ಮೃತಪಟ್ಟಿದ್ದ.

ಕೊಲೆ ಪ್ರಕರಣ ಪತ್ತೆಹಚ್ಚುವುದು ಪೊಲೀಸರಿಗೆ ಸವಾಲ್ ಆಗಿತ್ತು : ಮೃತ ಯುವಕನ ತಲೆ ಪಕ್ಕದಲ್ಲಿ ಅಧ್ಯಕ್ಷ ಇದ್ದ ಸೈಜು ಕಲ್ಲು ಹಾಗೂ ಆ ಸ್ಥಳದಲ್ಲಿ  ಹರಿದಿದ್ದ ರಕ್ತವನ್ನು ನೋಡಿ ಕೊಲೆ ಪ್ರಕರಣ ಎಂಬ ಶಂಕೆ ಉಂಟಾಗಿತ್ತು.. ಆ ಕಲ್ಲನ್ನು ತಲೆ ಮೇಲೆ ಎತ್ತಿ ಹಾಕಿದ್ದರೆ  ತಲೆ, ಮುಖ ಜಜ್ಜಿ ಹೋಗಬೇಕಿತ್ತು ಆದ್ರೆ  ಹಾಗೇ ಆಗಿರಲಿಲ್ಲ. ಕೊಲೆ ಪ್ರಕರಣವೆಂದು ಗಿರೀಶ್ ಕುಟುಂಬದವರು ದೂರು ದಾಖಲಿಸಿದ್ದರು. ಇದು ಕೊಲೆಯೋ ಇಲ್ಲವೋ ಎಂಬ ಸಂಶಯವು ಪೊಲೀಸರಿಗಿತ್ತು. ಪ್ರಕರಣ ಜಾಡು ಹತ್ತಿದ ಪೊಲೀಸರಿಗೆ ಇದು ಕೊಲೆ ಎಂಬುದಾಗಿ ಧೃಡವಾಗಿ ಆರೋಪಿಗಳನ್ನು ಬಂಧಿಸಿದ್ದಾರೆ. 

UDUPI FISHERMEN COMMUNITY ಮೀನುಗಾರ ಸಮುದಾಯಕ್ಕೆ ಭರ್ಜರಿ ಗಿಫ್ಟ್ ನೀಡಿದ ಸಿಎಂ ಬೊಮ್ಮಾಯಿ

 ಹೊರಗೆ ಮಲಗಿದ್ದ ನಾಲ್ವರ ಮೇಲೆ ಹಲ್ಲೆ - ಹೊರಗೆ ಮಲಗುವ ಮುನ್ನ ಎಚ್ಚರ: ಆರೋಪಿಗಳು ಕುಡಿತದ ದಾಸರಾಗಿದ್ದರು. ಇವರು ಅಂಗಡಿಮುಂಗಟ್ಟುಗಳ ಬಳಿ ಮಲಗುತ್ತಿದ್ದವರನ್ನು ಗುರಿಯಾಗಿಸಿಕೊಂಡು ಹಲ್ಲೆ ನಡೆಸಿ ಅವರಲ್ಲಿ ಸಿಗುತ್ತಿದ್ದ ಹಣ ಒಡವೆ ಮೊಬೈಲು ಕಿತ್ತು ಪರಾರಿಯಾಗುತ್ತಿದ್ದರು. ಹೀಗೆ ಅಂಗಡಿಗಳ ಮುಂದೆ ನಾಲ್ವರ ಮೇಲೆ ಹಲ್ಲೆ ನಡೆಸಿ ಮೊಬೈಲ್ ಹಣ ಕಿತ್ತುಕೊಂಡು ಹೋದ ಪ್ರಕರಣಗಳ ಬಗ್ಗೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಈ ಹಿಂದೆ ತಾಲೂಕ್ ಪಂಚಾಯತಿ ವಾಣಿಜ್ಯ ಮಳಿಗೆಗಳ ಮುಂದೆ ಕಟ್ಟೆ ಮೇಲೆ ಮಲಗಿದ್ದವನ ಬಳಿ ಹಲ್ಲೆ ನಡೆಸಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ. 

ನಮಗೆ ವಿಪಕ್ಷಗಳಿಂದ ಕಲಿಯಬೇಕಾದ್ದು ಏನು ಇಲ್ಲ CM Basavaraj Bommai

ವಿಕೃತ ವ್ಯಕ್ತಿಗಳು ಸೈಕೋಪಾತ್ ಗಳು: ಅರೋಪಿಗಳು ವಿಕೃತ ಮನೋಭಾವದವರಿದ್ದು, ಇಂತಹವರ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಪೊಲೀಸರು  ಸಾರ್ವಜನಿಕ ಪ್ರಕಟಣೆ ನೀಡಿದ್ದಾರೆ.   ಅಂಗಡಿಗಳ ಕಟ್ಟೆ, ಮೆಟ್ಟಿಲ ಮಲಗಬಾರದು, ಮಲಗುವ ಮುನ್ನ ಸುರಕ್ಷತಾ ಕ್ರಮಗಳ ಬಗ್ಗೆ ಎಚ್ಚರವಹಿಸಬೇಕೆಂದು  ದಾವಣಗೆರೆ  ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಎಚ್ಚರಿಕೆ ನೀಡಿದ್ದಾರೆ.  ಪ್ರಕರಣ ಭೇದಿಸಿದ  ಡಿವೈಎಸ್‌ಪಿ ಬಸವರಾಜ್ ಬಿ.ಎಸ್., ಸಿಪಿಐ ಸತೀಶ್ ಕುಮಾರ್ ಯು., ಪಿಎಸ್‌ಐ ಸುನೀಲ್ ಕುಮಾರ್ ತೇಲಿ, ನೇತೃತ್ವದಲ್ಲಿ ತಂಡಕ್ಕೆ ಅಭಿನಂದಿಸಿದ್ದಾರರೆ.  ಸಿಬ್ಬಂದಿಗಳಾದ ಸುಣಗಾರ ನಾಗರಾಜ್, ಶಾಂತಕುಮಾರ್, ಸೈಯದ್ ಗಫಾರ್, ತನಿಖಾ ರಾಜಶೇಖರ್‌, ಶಿವರಾಜ್‌, ನಾಗರಾಜ್, ಕಾರ್ಯಾವನ್ನು ಶ್ಲಾಘೀಸಿದ್ದಾರೆ.

click me!