ಶನಿವಾರ ಸುರತ್ಕಲ್‌ನ ರಾಷ್ಟ್ರೀಯ ತಂತ್ರಸ್ಥಾನ ಸಂಸ್ಥೆ(ಎನ್‌ಐಟಿಕೆ)ಯಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ನೆರವೇರಿಸಲು ಬಂದಿದ್ದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಕರಾವಳಿಯ ಸೀಫುಡ್‌ಗೆ ಫಿದಾ ಆಗಿದ್ದಾರೆ. ವಿಮಾನದಲ್ಲೇ ಮಂಗಳೂರಿನ ವಿಶೇಷ ಮೀನು, ಸಿಗಡಿ ಖಾದ್ಯವನ್ನು ಸವಿದಿದ್ದಾರೆ.
ಮಂಗಳೂರು(ನ.03): ಶನಿವಾರ ಸುರತ್ಕಲ್‌ನ ರಾಷ್ಟ್ರೀಯ ತಂತ್ರಸ್ಥಾನ ಸಂಸ್ಥೆ(ಎನ್‌ಐಟಿಕೆ)ಯಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ನೆರವೇರಿಸಲು ಬಂದಿದ್ದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಕರಾವಳಿಯ ಸೀಫುಡ್‌ಗೆ ಫಿದಾ ಆಗಿದ್ದಾರೆ.
ಅವರು ಶನಿವಾರ ಸುರತ್ಕಲ್‌ನ ರಾಷ್ಟ್ರೀಯ ತಂತ್ರಸ್ಥಾನ ಸಂಸ್ಥೆ(ಎನ್‌ಐಟಿಕೆ)ಯಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ನೆರವೇರಿಸಿ ಮಧ್ಯಾಹ್ನ ವಿಶೇಷ ವಿಮಾನದಲ್ಲಿಯೇ ಭೋಜನ ಸ್ವೀಕರಿಸಿದ್ದಾರೆ.
ಶನಿವಾರ ಬೆಳಗ್ಗೆ 10.15ಕ್ಕೆ ವಾಯುಪಡೆಯ ವಿಶೇಷ ವಿಮಾನದಲ್ಲಿ ಗುವಾಹಟಿಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾಧಿಕಾರಿ ಸಿಂಧು ರೂಪೇಶ್ ಸ್ವಾಗತಿಸಿದರು. ನಗರ ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷ, ಜಿಲ್ಲಾ ಎಸ್ಪಿ ಲಕ್ಷ್ಮೇಪ್ರಸಾದ್ ಇದ್ದರು.
ಮಧ್ಯಾಹ್ನ 1 ಗಂಟೆಗೆ ವಿಶೇಷ ವಿಮಾನದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಮೈಸೂರಿಗೆ ತೆರಳಿದರು. ಎನ್‌ಐಟಿಕೆಯಲ್ಲಿ ಉಪರಾಷ್ಟ್ರಪತಿಗಳಿಗೆ ಭೋಜನ ವ್ಯವಸ್ಥೆ ಮಾಡಿದ್ದರೂ ಅವರು ನಿರ್ಗಮನ ವೇಳೆ ವಿಮಾನದಲ್ಲೇ ಭೋಜನ ಸ್ವೀಕರಿಸಿದರು ಎಂದು ಹೇಳಲಾಗಿದೆ. ನಗರದ ಓಷನ್ ಪಲ್‌ರ್ ಹೊಟೇಲ್‌ನಿಂದ ಪ್ರತ್ಯೇಕ ಮೆನು ಸಿದ್ಧಪಡಿಸಲಾಗಿತ್ತು. ಇದರಲ್ಲಿ ಕರಾವಳಿಯ ಮೀನು ಸಿಗಡಿ, ಬಟರ್ ಚಿಕನ್ ಮಸಾಲ ವಿಶೇಷ ಖಾದ್ಯಗಳನ್ನೂ ಸೇರಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಕರಾವಳಿಯ ಪ್ರಕೃತಿಗೆ ಮಾರು!
ವಿಮಾನ ಇಳಿಯುತ್ತಿರಬೇಕಾದರೆ ಕರಾವಳಿಯ ಪ್ರಕೃತಿಗೆ ಮಾರು ಹೋದೆ. ಆಗಸದಿಂದಲೇ ಪ್ರಕೃತಿಯ ಸೊಬಗನ್ನು ಆಸ್ವಾದಿಸಿದ್ದೇನೆ. ಇಂತಹ ಪ್ರಕೃತಿಯನ್ನು ಬೇರೆಲ್ಲೂ ಕಾಣಲು ಸಿಗದು. ಇಲ್ಲಿ ಎಲ್ಲವೂ ಹಸಿರುಮಯವಾಗಿದ್ದು, ಇದನ್ನು ರಕ್ಷಿಸಿ, ಬೇರೆಯವರಿಗೆ ಮಾದರಿಯಾಗಿ ತೋರಿಸಿಕೊಡಬೇಕು ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ.