ಮಂಗಳೂರು: ಪಾಲಿಕೆ ಚುನಾವಣೆ ಕರ್ತವ್ಯಕ್ಕೆ ಬಸ್ ನಿಯೋಜನೆ

By Kannadaprabha News  |  First Published Nov 11, 2019, 11:23 AM IST

ನ.12ರಂದು ಪಾಲಿಕೆ ಚುನಾವಣೆ ನಡೆಯಲಿದ್ದು, ಈ ನಿಟ್ಟಿನಲ್ಲಿ ಚುನಾವಣಾ ಕರ್ತವ್ಯಕ್ಕೆ ಬಸ್‌ಗಳನ್ನು ನಿಯೋಜಿಸಲಾಗಿದೆ. ಸಾರ್ವಜನಿಕ ಪ್ರಯಾಣಿಕರಿಗೆ ತೊಂದರೆಯಾಗದಂತೆ ಸಾರಿಗೆ ಕಾರ್ಯಾಚರಣೆಗೊಳಿಸಲು ಮುತುವರ್ಜಿ ವಹಿಸಲಾಗಿದೆ.


ಮಂಗಳೂರು(ನ.11): ನ.12ರಂದು ಪಾಲಿಕೆ ಚುನಾವಣೆ ನಡೆಯಲಿದ್ದು, ಈ ನಿಟ್ಟಿನಲ್ಲಿ ಚುನಾವಣಾ ಕರ್ತವ್ಯಕ್ಕೆ ಬಸ್‌ಗಳನ್ನು ನಿಯೋಜಿಸಲಾಗಿದೆ. ಸಾರ್ವಜನಿಕ ಪ್ರಯಾಣಿಕರಿಗೆ ತೊಂದರೆಯಾಗದಂತೆ ಸಾರಿಗೆ ಕಾರ್ಯಾಚರಣೆಗೊಳಿಸಲು ಮುತುವರ್ಜಿ ವಹಿಸಲಾಗಿದೆ.

ನ.12ರಂದು ನಡೆಯಲಿರುವ ಮಹಾನಗರ ಪಾಲಿಕೆ ಚುನಾವಣೆ ಕಾರ್ಯಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಒಪ್ಪಂದದ ಮೇರೆಗೆ ವಾಹನಗಳನ್ನು ನೀಡಲಾಗುವ ಹಿನ್ನಲೆಯಲ್ಲಿ ಧರ್ಮಸ್ಥಳ, ಉಪ್ಪಿನಂಗಡಿ, ಸುಬ್ರಹ್ಮಣ್ಯ, ಕಾಸರಗೋಡು ವಲಯಗಳಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ತೊಂದರೆಯಾಗದಂತೆ ಸಾರಿಗೆ ಕಾರ್ಯಾಚರಣೆಗೊಳಿಸಲು ಮುತುವರ್ಜಿ ವಹಿಸಲಾಗಿದೆ.

Tap to resize

Latest Videos

ಈ ಮಾರ್ಗಗಳಲ್ಲಿ ನ.11 ಮತ್ತು 12ರಂದು ವಾಹನಗಳ/ಸಾರಿಗೆಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗುವ ಸಂಭವವಿದ್ದು, ಸಾರ್ವಜನಿಕ ಪ್ರಯಾಣಿಕರು ನಿಗಮದೊಂದಿಗೆ ಸಹಕರಿಸುವಂತೆ ವಿಭಾಗೀಯ ನಿಯಂತ್ರಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

click me!