
ಧರ್ಮಸ್ಥಳ (ಆ.26) ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಆರೋಪ ಹಾಗೂ ಪ್ರಕರಣ ಇದೀಗ ಸಂಪೂರ್ಣ ಉಲ್ಟಾ ಆಗಿದೆ. ಗಂಭೀರ ಆರೋಪ ಮಾಡುತ್ತಾ ಬಂದ ದೂರುದಾರ ಚಿನ್ನಯ್ಯ ಅಲಿಯಾಸ್ ಮಾಸ್ಕ್ ಮ್ಯಾನ್ ಅರೆಸ್ಟ್ ಆಗಿ ವಿಚಾರಣೆ ಎದುರಿಸುತ್ತಿದ್ದಾರೆ. ಈ ವೇಳೆ ಹಲವು ಸ್ಫೋಟಕ ಮಾಹಿತಿ ನೀಡಿದ್ದಾರೆ. ಈಗಾಗಲೇ ಬುರುಡೆ ಗ್ಯಾಂಗ್ ಅಸ್ಥಿ ಹಿಡಿದು ದೆಹಲಿಗೆ ತೆರಳಿ ಕೆಲ ಪ್ರಭಾವಿಗಳ ಭೇಟಿಯಾಗಿರುವ ಮಾಹಿತಿ ಬಯಲಾಗಿದೆ. ಇದೀಗ ಇದೇ ಪ್ರಕರಣ ಸಂಬಂಧ ಈ ಬುರುಡೆ ಗ್ಯಾಂಗ್ ಸ್ವಾಮೀಜಿಯೊಬ್ಬರನ್ನು ಭೇಟಿ ಮಾಡಿತ್ತು ಅನ್ನೋ ಸ್ಫೋಟಕ ಮಾಹಿತಿಯನ್ನು ಚಿನ್ನಯ್ಯ ಬಾಯ್ಬಿಟ್ಟಿದ್ದಾನೆ ಎಂದು ವರದಿಯಾಗಿದೆ.
ಧರ್ಮಸ್ಥಳ ವಿರುದ್ದ ನಡೆಸಿದ ಷಡ್ಯಂತ್ರ ಸುದೀರ್ಘ ದಿನಗಳಿಂದ ನಡೆಸಿದ ಪ್ಲಾನ್ ಅನ್ನೋದು ಬಯಲಾಗಿದೆ. ಎಸ್ಐಟಿ ತನಿಖೆಯಲ್ಲಿ ಚಿನ್ನಯ್ಯ ಸ್ವಾಮೀಜಿಯೊಬ್ಬರ ಭೇಟಿ ಕುರಿತು ಮಾಹಿತಿ ನೀಡಿದ್ದಾನೆ. ಬುರುಡೆ ಹಿಡಿದು ಚಿನ್ನಯ್ಯ ದೂರುದಾರನಾಗಿ ಬರವು ಮೊದಲು ಈ ಗ್ಯಾಂಗ್ ಬುರಡೆ ಹಿಡಿದು ಸ್ವಾಮೀಜಿಯನ್ನು ಭೇಟಿ ಮಾಡಡಿತ್ತು. ಸೌಜನ್ಯ ಪ್ರಕರಣ ಮುಂದಿಟ್ಟುಕೊಂಡು ಸ್ವಾಮೀಜಿಯನ್ನು ಈ ಗ್ಯಾಂಗ್ ಭೇಟಿ ಮಾಡಿ ಇಡೀ ಪ್ರಕರಣವನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿತ್ತು. ಸೌಜನ್ಯ ಪ್ರಕರಣದ ರೀತಿಯಲ್ಲೇ ಶವಗಳನ್ನು ಹೂತಿರುವ ಕೇಸ್ ಇದು. ಧರ್ಮಸ್ಥಳದಲ್ಲಿ ನಿರಂತರವಾಗಿ ಈ ರೀತಿ ಪ್ರಕರಣಗಳು ನಡೆಯುತ್ತಿದೆ ಎಂದು ಸ್ವಾಮೀಜಿ ಮುಂದೆ ವಿವರಣೆ ನೀಡಿತ್ತು ಎಂದು ವರದಿಯಾಗಿದೆ.
ಹಿಂದೂ ವಿರೋಧಿ ಹೋರಾಟ ಎಂದು ಗುರುತಿಸಿಕೊಳ್ಳಬಾರದು ಅನ್ನೋ ಕಾರಣಕ್ಕೆ ಸ್ವಾಮೀಜಿ ಭೇಟಿ ಮಾಡಿದ ತಂಡ ಸರ್ಕಾರಕ್ಕೆ ಒತ್ತಡ ಹೇರಲು ಮುಂದಾಗಿತ್ತು. ಸ್ವಾಮೀಜಿ ಮೂಲಕ ಧರ್ಮಸ್ಥಳ ಪ್ರಕರಣದ ತನಿಖೆ ತಮ್ಮ ಪ್ಲಾನ್ ಪ್ರಕಾರವೇ ಮುಂದೆ ಸಾಗಲು ಪ್ಲಾನ್ ಮಾಡಿತ್ತು. ಸ್ವಾಮೀಜಿ ಮೂಲಕ ಸರ್ಕಾರಕ್ಕೆ ಒತ್ತಡ ಹಾಕುವುದು, ಈ ಹೋರಾಟದಲ್ಲಿ ಇಡೀ ಹಿಂದೂ ಸಮುದಾಯ ತಮ್ಮ ಜೊತೆ ಇದೆ ಎಂದು ಬಿಂಬಿಸಲು ಪ್ಲಾನ್ ಮಾಡಲಾಗಿತ್ತು ಅನ್ನೋ ಮಾಹಿತಿಯನ್ನು ಚಿನ್ನಯ್ಯ ಬಯಲು ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.
ಉತ್ತರ ಭಾರತ ವಕೀಲರ ಮೂಲಕ ಸುಪ್ರೀಂ ಕೋರ್ಟ್ ಕದ ತಟ್ಟಲು ಎಲ್ಲಾ ಪ್ಲಾನ್ ಆಗಿತ್ತು. ದೆಹಲಿಯಲ್ಲಿ ಕೆಲ ಪ್ರಮುಖರನ್ನು ಭೇಟಿಯಾಗಿದ್ದ ಈ ಬುರುಡೆ ಗ್ಯಾಂಗ್ ,ಬಳಿಕ ವಕೀಲರನ್ನು ಭೇಟಿಯಾಗಿ ಚರ್ಚೆ ನಡೆಸಿತ್ತು. ಈ ಮೂಲಕ ಸುಪ್ರೀಂ ಕೋರ್ಟ್ ಮುಂದೆ ಹೋರಾಟಕ್ಕೂ ಪ್ಲಾನ್ ಮಾಡಿತ್ತು. ಸುಪ್ರೀಂ ಕೋರ್ಟ್‌ನಲ್ಲಿ ಈ ಪ್ರಕರಣವನ್ನು ಮುಂದಿಟ್ಟು ಧರ್ಮಸ್ಥಳ ವಿರುದ್ಧ ಗಂಭೀರ ಆರೋಪ ಮಾಡುತ್ತಾ ಹೋರಾಟ ಮುಂದುವರಿಸಲು ಪ್ಲಾನ್ ಮಾಡಲಾಗಿತ್ತು. ಈ ಮೂಲಕ ಸರ್ಕಾರ, ಕೋರ್ಟ್, ಜಾನಾಂದೋಲಗಳ ಮೂಲಕ ಈ ಪ್ರಕರಣವನ್ನೇ ದೇಶಾದ್ಯಂತ ನಡೆಸಲು ಗ್ಯಾಂಗ್ ಎಲ್ಲಾ ಪ್ಲಾನ್ ಮಾಡಿತ್ತು ಅನ್ನೋ ಮಾಹಿತಿಗಳು ಬಯಲಾಗಿದೆ.
ಸೌಜನ್ಯ ಪ್ರಕರಣ, ಬುರುಡೆ ಪ್ರಕರಣ, ಸುಜಾತಾ ಭಟ್ ಪ್ರಕರಣ ಮೂಲಕ ಧರ್ಮಸ್ಥಳ ದೇವಸ್ಥಾನವನ್ನು ಸರ್ಕಾರ ಸುಪರ್ದಿಗೆ ವಹಿಸಬೇಕು ಎಂಬ ಹೋರಾಟ ಮಾಡಲು ಪ್ಲಾನ್ ಮಾಡಿತ್ತು. ಜೈನ ಆಡಳಿತದಲ್ಲಿ ಹಿಂದೂ ದೇಗುಲ ಕ್ಷೇತ್ರದಲ್ಲಿ ಅನಾಚರಗಳು ನಡೆಯುತ್ತಿದೆ. ಹೀಗಾಗಿ ಸರ್ಕಾರ ಮಧ್ಯ ಪ್ರವೇಶಿಸಿ ದೇವಸ್ಥಾನ ವಶಕ್ಕೆ ಪಡೆಯಲು ಒತ್ತಡ ತರಲು ಪ್ಲಾನ್ ಮಾಡಲಾಗಿತ್ತು ಅನ್ನೋ ಸ್ಫೋಟಕ ಮಾಹಿತಿಗಳು ಬಯಲಾಗಿದೆ. ಈ ಎಲ್ಲಾ ಷಡ್ಯಂತ್ರಗಳು ಇದೀಗ ಹೊರಬರುತ್ತಿದೆ.