
ಧರ್ಮಸ್ಥಳ (ಸೆ.19): ಬಂಗ್ಲೆಗುಡ್ಡದಲ್ಲಿ ವಿಶೇಷ ತನಿಖಾ ದಳ (SIT)ದ ಎರಡನೇ ದಿನ ಕಾರ್ಯಾಚರಣೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಕಾರ್ಯಾಚರಣೆಯ ವೇಳೆ ಒಟ್ಟು ಏಳು ಮಾನವ ತಲೆಬುರುಡೆ ಹಾಗೂ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿವೆ. ಅವುಗಳಲ್ಲಿ ಒಂದು ಬುರುಡೆ ಮತ್ತು ಅಸ್ಥಿಪಂಜರವು ಮಡಿಕೇರಿ ಮೂಲದ ಯು.ಬಿ. ಅಯ್ಯಪ್ಪ ಎಂಬುವರಿಗೆ ಸೇರಿರಬಹುದು ಎಂದು ಶಂಕಿಸಲಾಗಿದೆ.
ಬಂಗ್ಲೆಗುಡ್ಡೆಯ 7 ಸ್ಥಳಗಳಲ್ಲಿ 7 ತಲೆ ಬುರುಡೆ ಹಾಗು ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿವೆ. ಪತ್ತೆಯಾಗಿರುವ ಎಲ್ಲಾ ಬುರುಡೆ ಹಾಗು ಮೂಳೆಗಳು ಪುರುಷರದ್ದು, ತಜ್ಞ ವೈದ್ಯರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೇಲ್ನೋಟಕ್ಕೆ ಇದು ಪುರುಷರ ಬುರುಡೆ ಎಂದು ವೈದ್ಯರು ಹೇಳಿದ್ದಾರೆ. ಮಹಜರು ಸಂದರ್ಭದಲ್ಲಿಯೇ ಎಸ್‌ಐಟಿ ತಂಡದಲ್ಲಿದ್ದ ವೈದ್ಯರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗುರುವಾರ ಸಿಕ್ಕ ಒಂದು ಬುರುಡೆ ಮತ್ತು ಅಸ್ಥಿಪಂಜರ ಯು.ಬಿ.ಅಯ್ಯಪ್ಪ ಅವರದ್ದು. ಅಯ್ಯಪ್ಪ ಅವರ ಅಸ್ಥಿಪಂಜರ ಅನ್ನೊದು ಬಹುತೇಕ ಖಚಿತವಾಗಿದ. FLS ವರದಿಯಲ್ಲಿ ಇನ್ನಿತರ ಮಾಹಿತಿಗಳು ಬಯಲಾಗಬೇಕಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಹೆಚ್ಚಿನ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿವೆ. ತಲೆ ಬುರುಡೆ ಹಾಗೂ ಅವಶೇಷಗಳು ಪತ್ತೆಯಾದಲ್ಲಿ ಹಗ್ಗ, ಬಟ್ಟೆ ಮರಕ್ಕೆ ಕಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗದೆ.
ಪೊನ್ನಂಪೇಟೆ ತಾಲ್ಲೂಕಿನ ಟಿ.ಶೆಟ್ಟಿಗೇರಿ ಗ್ರಾಮದ ನಿವಾಸಿ ಯು.ಬಿ. ಅಯ್ಯಪ್ಪ, ಏಳು ವರ್ಷಗಳ ಹಿಂದೆ ಮೈಸೂರಿಗೆ ಚಿಕಿತ್ಸೆಗೆಂದು ಹೋಗಿ ನಾಪತ್ತೆಯಾಗಿದ್ದರು. ಕುಟುಂಬಸ್ಥರು ಕುಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ವಶಪಡಿಸಿಕೊಂಡ ಅವಶೇಷಗಳು ಮತ್ತು ವಸ್ತುಗಳನ್ನು ಪ್ಲಾಸ್ಟಿಕ್ ಡಬ್ಬ ಹಾಗೂ ಪೈಪ್‌ಗಳಲ್ಲಿ ತುಂಬಿಸಿ FLS (Forensic Lab Services) ವರದಿಗಾಗಿ ಕಳುಹಿಸಲಾಗಿದೆ. ಈ ವರದಿಯ ನಂತರವೇ ಇನ್ನಿತರ ಮಾಹಿತಿ ಬಹಿರಂಗವಾಗಲಿದೆ.