ಕರಾವಳಿಯಲ್ಲಿ ಕಳೆದೊಂದು ವಾರದಿಂದ ಮಳೆ ಸುರಿಯುತ್ತಿದ್ದು, ವಾರಾಂತ್ಯದಲ್ಲಿ ಮಳೆ ದೂರ ಸರಿದಿದೆ. ಶನಿವಾರ ಮಳೆ ಕಡಿಮೆಯಾಗಿದ್ದು, ಬಿಸಿಲಿನ ವಾತಾವರಣವಿತ್ತು.
ಮಂಗಳೂರು(ಅ.20): ಕಳೆದ ಎರಡು ದಿನಗಳಿಂದ ಹಿಂಗಾರು ಮಳೆ ಕಾಣುತ್ತಿದ್ದ ಶನಿವಾರ ಮಳೆಯ ಸುಳಿವು ಇರಲಿಲ್ಲ. ಹವಾಮಾನ ಇಲಾಖೆ ಕರಾವಳಿಯಲ್ಲಿ ಶನಿವಾರ ಭಾರಿ ಮಳೆಯ ಮುನ್ಸೂಚನೆ ನೀಡಿತ್ತು.
ಶುಕ್ರವಾರ ರಾತ್ರಿಯೂ ಶುಭ್ರ ಆಗಸ ಇದ್ದು, ಶನಿವಾರ ಮಧ್ಯಾಹ್ನ ವರೆಗೆ ಬಿಸಿಲಿನ ವಾತಾವರಣ ಇತ್ತು. ಸಂಜೆ ತುಸು ಮೋಡ ಕವಿದಿರುವುದನ್ನು ಬಿಟ್ಟರೆ, ಮಳೆ ಬಂದಿಲ್ಲ. ಕಳೆದ ಎರಡು ದಿನಗಳಿಂದ ಗುಡುಗು, ಮಿಂಚಿನ ಮಳೆಯಲ್ಲಿ ಮಿಂದೆದ್ದ ಜಿಲ್ಲೆಯಲ್ಲಿ ವಾರಾಂತ್ಯದಲ್ಲಿ ಮಳೆಯ ಬಿಡುವು ಸಿಕ್ಕಿದೆ.
ಜಾಲತಾಣದಲ್ಲಿ ಪೂಜಾರಿ ಸಾವಿನ ವದಂತಿ: ದೂರು
ಶನಿವಾರ ಬೆಳಗ್ಗಿನ ವರೆಗೆ ಮಂಗಳೂರಿನಲ್ಲಿ ಗರಿಷ್ಠ 29.9 ಮಿಲಿ ಮೀಟರ್ ಗರಿಷ್ಠ ಮಳೆ ದಾಖಲಾಗಿದೆ. ಬಂಟ್ವಾಳ 15 ಮಿ.ಮೀ, ಬೆಳ್ತಂಗಡಿ 5.2 ಮಿ.ಮೀ, ಪುತ್ತೂರು 9.5 ಮಿ.ಮೀ, ಸುಳ್ಯ 29.4 ಮಿ.ಮೀ. ಮಳೆ ದಾಖಲಾಗಿದೆ. ದಿನದ ಒಟ್ಟು ಮಳೆ 17.8 ಮಿ.ಮೀ. ಆಗಿದ್ದು, ಕಳೆದ ಬಾರಿ 5.8 ಮಿ.ಮೀ, ಮಳೆ ಸುರಿದಿತ್ತು. ಅಕ್ಟೋಬರ್‌ನಲ್ಲಿ ಈವರೆಗೆ ಒಟ್ಟು 214.5 ಮಿ.ಮೀ. ಮಳೆಯಾಗಿದ್ದು, ಕಳೆದ ವರ್ಷ 284.4 ಮಿ.ಮೀ. ಅಧಿಕ ಮಳೆಯಾಗಿತ್ತು. ಜನವರಿಯಿಂದ ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 3,792.1 ಮಿ.ಮೀ. ಮಳೆಯಾಗಿದ್ದು, ಕಳೆದ ಅವಧಿಯಲ್ಲಿ 4,561 ಮಿ.ಮೀ. ಮಳೆ ವರದಿಯಾಗಿತ್ತು.
ಉಪ್ಪಿನಂಗಡಿ ನೇತ್ರಾವತಿ ನದಿ 12 ಮೀಟರ್, ಕುಮಾರಧಾರ ನದಿ 11 ಮೀಟರ್ ಹಾಗೂ ಬಂಟ್ವಾಳದಲ್ಲಿ ನೇತ್ರಾವತಿ ನದಿ ನೀರಿನ ಮಟ್ಟ5 ಮೀಟರ್ ಇದೆ.
ವಿದ್ಯಾರ್ಥಿಗಳ ಮಾರಾಮಾರಿ, ರಣ ರಣ ಬಿಸಿಲಲ್ಲೇ ಹೊಡಿ ಬಡಿ..!