ಪ್ರಚೋದನಕಾರಿ ಭಾಷಣ, ವಿಚಾರಣೆಗೆ ಹಾಜರಾಗಲು ಕಲ್ಕಡ್ಕ ಪ್ರಭಾಕರ ಭಟ್‌ಗೆ ನೋಟೀಸ್ ಜಾರಿ

Published : Oct 26, 2025, 10:41 PM IST
kalladka prabhakar bhat

ಸಾರಾಂಶ

ಪ್ರಚೋದನಕಾರಿ ಭಾಷಣ, ವಿಚಾರಣೆಗೆ ಹಾಜರಾಗಲು ಕಲ್ಕಡ್ಕ ಪ್ರಭಾಕರ ಭಟ್‌ಗೆ ನೋಟೀಸ್ ಜಾರಿ ಮಾಡಲಾಗಿದೆ. ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಭಾಕರ್ ಭಟ್ ವಿರುದ್ಧ ದೂರು ದಾಖಲಾಗಿತ್ತು.  ಇದೀಗ ಪೊಲೀಸರು 31ಕ್ಕೆ ವಿಚಾರಣೆ ಹಾಜರಾಗಲು ಸೂಚಿಸಿದ್ದಾರೆ.

ಪುತ್ತೂರು (ಅ.26) ಹಿಂದೂ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ನೋಟಿಸ್ ಜಾರಿಯಾಗಿದೆ. ಪ್ರಚೋದನ ಕಾರಿ ಭಾಷಣ, ಮಹಿಳೆಯ ಘನತೆಗೆ ಧಕ್ಕೆಯುಂಟು ಮಾಡುವ ಭಾಷಣ ಮಾಡಿದ್ದ ಆರೋಪದಡಿ ದಾಖಲಾಗಿದ್ದ ದೂರಿನ ಅನ್ವಯ, ಕಲ್ಲಡ್ಕ ಪ್ರಭಾಕರ ಭಟ್‌ಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ಜಾರಿ ಮಾಡಲಾಗಿದೆ. ಪುತ್ತೂರು ಗ್ರಾಮಾಂತರ ಪೊಲೀಸು, ಕಲ್ಕಡ್ಕ ಭಟ್ ಮನೆಗೆ ನೋಟಿಸ್ ಜಾರಿ ಮಾಡಿದ್ದಾರೆ.

ಅಕ್ಟೋಬರ್ 31ಕ್ಕೆ ವಿಚಾರಣೆಗೆ ಹಾಜರಾಗಲು ನೋಟಿಸ್

ಧಾರ್ಮಿಕ ದ್ವೇಷ ಪ್ರಚೋದಿಸುವ, ಮಹಿಳೆಯರ ಘನತೆಗೆ ಧಕ್ಕೆ ಉಂಟುಮಾಡುವ ಹೇಳಿಕೆ ಆರೋಪದಡಿ ಪುತ್ತೂರು ಗ್ರಾಮಂತರ ಠಾಣೆಯಲ್ಲಿ ದಾಖಲಾಗಿದ್ದ ದೂರಿನ ಹಿನ್ನಲೆಯಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಮನೆಗೆ ನೋಟಿಸ್ ಜಾರಿ ಮಾಡಲಾಗಿದೆ. ಅಕ್ಟೋಬರ್ 31ರಂದು ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ.

ಉಪ್ಪಳಿಗೆ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಷಣ

ಅ.20ರಂದು ಪುತ್ತೂರು ಉಪ್ಪಳಿಗೆಯಲ್ಲಿ ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಭಾಷಣ ಮಾಡಿದ್ದರು.ಭಾಷಣ ಬಳಿಕ ಈಶ್ವರಿ ಪದ್ಮುಂಜ ಎಂಬವರು ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ದ ದೂರು ನೀಡಿದ್ದರು. ಧಾರ್ಮಿಕ ದ್ವೇಷ ಪ್ರಚೋದಿಸುವ, ಮಹಿಳೆಯರ ಘನತೆಗೆ ಧಕ್ಕೆ ಉಂಟುಮಾಡುವ ಹೇಳಿಕೆ ನೀಡಿದ್ದಾರೆ. ಹೀಗಾಗಿ ಪ್ರಭಾಕರ್ ಭಟ್ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಿದ್ದರು. BNS 79, 196, 299, 302 ಹಾಗೂ 3(5) ಕಲಂಗಳ ಅಡಿಯಲ್ಲಿ ಪ್ರಭಾಕರ ಭಟ್ ಮತ್ತು ಕಾರ್ಯಕ್ರಮ ಆಯೋಜಕರ ವಿರುದ್ಧ ಎಫ್ಐಆರ್ ದಾಖಲಾಗಿತ್ತು.

ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಪ್ರಿಯಾಂಕ ಖರ್ಗೆ ಗರಂ

ಆರ್‌ಎಸ್‌ಎಸ್ ಪಥಸಂಚನಲನಕ್ಕೆ ತಡೆಯೊಡ್ಡಿದ ಕುರಿತು ಮಾತನಾಡಿದ್ದ ಕಲ್ಲಡ್ಕ ಪ್ರಭಾಕರ್, ಯಾರು ಅಡ್ಡ ಬಂದರೂ ಪಥಸಂಚಲನ ಮಾಡೇ ಮಾಡುತ್ತೇವೆ ಎಂದು ಸವಾಲು ಹಾಕಿದ್ದರು. ಆರ್‌ಎಸ್ಎಸ್ ದೇಶದೆಲ್ಲೆಡೆ ಪಥಸಂಚಲನ ಮಾಡುತ್ತಿದೆ. ಶಾಂತಿಯುತವಾಗಿ ಎಲ್ಲಾ ಕಡೆ ಪಥಸಂಚಲನ ನಡೆಯುತ್ತಿದೆ. ಇದನ್ನು ತಡೆಯಲು ಸಾಧ್ಯವಿಲ್ಲ, ತಡೆದರೂ ನಾವು ಮಾಡೇ ಮಾಡುತ್ತೇವೆ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿದ ಪ್ರಿಯಾಂಕ ಖರ್ಗೆ, ಕಲ್ಲಡ್ಕ ಪ್ರಭಾಕರ್ ಭಟ್ ಆಗಲಿ, ಅವರ ಅಪ್ಪ ಆಗಲಿ ಕಾನೂನು ಎಲ್ಲರಿಗೂ ಒಂದೆ. ಕೋರ್ಟ್ ಅನುಮತಿ ಕೊಡದೆ ಹೇಗೆ ಮಾಡುತ್ತಾರೆ. ಮಾಡಿದರೆ ಸರ್ಕಾರ ನೋಡುತ್ತಾ ಕುಳಿತಿರುತ್ತಾ ಎಂದು ಪ್ರಿಯಾಂಕ ಖರ್ಗೆ ಪ್ರಶ್ನಿಸಿದ್ದಾರೆ.

 

PREV
Read more Articles on
click me!

Recommended Stories

ಆ.11ರಿಂದ ಬೆಂಗಳೂರು-ಮಂಗಳೂರು ವಂದೇ ಭಾರತ್ ಟ್ರಯಲ್, 57 ಸುರಂಗ, 226 ಸೇತುವೆ 108 ವಕ್ರಾಕೃತಿ ತಿರುವು ದಾಟಲಿದೆ ರೈಲು!
ಬಹುನಿರೀಕ್ಷಿತ ಬಿಕರ್ನಕಟ್ಟೆ-ಸಾಣೂರು ಹೆದ್ದಾರಿ-169 ಅಭಿವೃದ್ಧಿ: ಹಲವೆಡೆ ಭೂಕುಸಿತ!