ರಸ್ತೇಲಿ ಬಿದ್ದು ಹೋಗಿದ್ದ ನಟ ಕೋಮಲ್ ಮೊಬೈಲನ್ನು ಕೆಲ ತಾಸಲ್ಲೆ ಪತ್ತೆ ಹಚ್ಚಿದ ಪೊಲೀಸರು!

Published : Jun 15, 2025, 05:17 AM IST
Actor Komal

ಸಾರಾಂಶ

ರಸ್ತೆಯಲ್ಲಿ ಬೀಳಿಸಿಕೊಂಡು ಹೋಗಿದ್ದ ನಟ ಕೋಮಲ್ ಅವರ ಮೊಬೈಲ್ ಅನ್ನು ಕೆಲವೇ ತಾಸಿನೊಳಗೆ ಪತ್ತೆ ಹಚ್ಚಿ ಮಲ್ಲೇಶ್ವರ ಠಾಣೆ ಪೊಲೀಸರು ಮರಳಿ ಕೊಟ್ಟಿದ್ದಾರೆ.

 ಬೆಂಗಳೂರು :  ರಸ್ತೆಯಲ್ಲಿ ಬೀಳಿಸಿಕೊಂಡು ಹೋಗಿದ್ದ ನಟ ಕೋಮಲ್ ಅವರ ಮೊಬೈಲ್ ಅನ್ನು ಕೆಲವೇ ತಾಸಿನೊಳಗೆ ಪತ್ತೆ ಹಚ್ಚಿ ಮಲ್ಲೇಶ್ವರ ಠಾಣೆ ಪೊಲೀಸರು ಮರಳಿ ಕೊಟ್ಟಿದ್ದಾರೆ.

ಶುಕ್ರವಾರ ಬೆಳಗ್ಗೆ ಮನೆ ಹತ್ತಿರದ ದೇವಾಲಯಕ್ಕೆ ಬೈಕ್‌ನಲ್ಲಿ ಕೋಮಲ್ ತೆರಳುತ್ತಿದ್ದ ವೇಳೆ ಶ್ರೀರಾಮಪುರ ಸೇತುವೆ ಬಳಿ ಪ್ಯಾಂಟ್‌ ಜೇಬಿನಿಂದ ಅ‍ವರ ಐ ಫೋನ್‌ ಕೆಳಗೆ ಬಿದ್ದಿದೆ. ಇದನ್ನು ಗಮನಿಸದೆ ಅವರು ಮನೆಗೆ ಮರಳಿದ್ದರು, ರಸ್ತೆಯಲ್ಲಿ ಬಿದ್ದಿದ್ದ ಮೊಬೈಲ್ ಅನ್ನು ಶ್ರೀರಾಮಪುರದ ಅಜಯ್ ಎಂಬಾತ ತೆಗೆದುಕೊಂಡು ಹೋಗಿದ್ದ. 

ಇತ್ತ ಮನೆಗೆ ಬಂದಾಗ ಜೇಬಿನಲ್ಲಿ ಮೊಬೈಲ್ ಕಾಣದೆ ಹೋದಾಗ ಕೋಮಲ್ ಕಕ್ಕಾಬಿಕ್ಕಿಯಾಗಿದ್ದಾರೆ. ಕೂಡಲೇ ಮೊಬೈಲ್‌ಗೆ ಕುಟುಂಬದವರ ಮೊಬೈಲ್‌ನಿಂದ ಕರೆ ಮಾಡಿದಾಗ ರಿಂಗಣಿಸಿದೆ. ಆದರೆ ಯಾರೊಬ್ಬರು ಪ್ರತಿಕ್ರಿಯಿಸಿಲ್ಲ. 

ಈ ಬಗ್ಗೆ ತಮ್ಮ ಸೋದರ, ನಟ ಜಗ್ಗೇಶ್ ಅವರಿಗೆ ಕೋಮಲ್ ತಿಳಿಸಿದರು. ಕೂಡಲೇ ಮಲ್ಲೇಶ್ವರ ಠಾಣೆ ಪೊಲೀಸರಿಗೆ ಜಗ್ಗೇಶ್ ಕರೆ ಮಾಡಿ ನೆರವು ಕೋರಿದ್ದಾರೆ. ಆಗ ಟವರ್ ಲೋಕೇಷನ್‌ ಪತ್ತೆ ಹಚ್ಚಿದಾಗ ಶ್ರೀರಾಮಪುರ ತೋರಿಸಿದೆ. 

ಈ ಮಾಹಿತಿ ಮೇರೆಗೆ ಅಜಯ್ ನನ್ನು ಪೊಲೀಸರು ಪತ್ತೆ ಹಚ್ಚಿ ವಿಚಾರಿಸಿದ್ದಾರೆ. ರಸ್ತೆ ಬದಿ ಬಿದ್ದಿದ್ದ ಮೊಬೈಲ್ ತೆಗೆದುಕೊಂಡು ಬಂದಿದ್ದಾಗಿ ಆತ ಹೇಳಿದ್ದಾನೆ. ಕೊನೆಗೆ ಸಂಜೆ ಹೊತ್ತಿಗೆ ಕೋಮಲ್ ಅವರ ಕೈಗೆ ಮೊಬೈಲ್ ಸೇರಿದೆ. ಪೊಲೀಸರ ಸಹಾಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಜಗ್ಗೇಶ್ ಧನ್ಯವಾದ ತಿಳಿಸಿದ್ದಾರೆ.

  • ರಸ್ತೇಲಿ ಬಿದ್ದು ಹೋಗಿದ್ದ ನಟ ಕೋಮಲ್ ಮೊಬೈಲನ್ನು ಕೆಲ ತಾಸಲ್ಲೆ ಪತ್ತೆ ಹಚ್ಚಿದ ಪೊಲೀಸರು!
  • ಪತ್ತೆ ಹಚ್ಚಿ ಮಲ್ಲೇಶ್ವರ ಠಾಣೆ ಪೊಲೀಸರು ಮರಳಿ ಕೊಟ್ಟ ಪೊಲೀಸರು!
  • -ಕೋಮಲ್‌ ಬೈಕಲ್ಲಿ ಹೋಗುತ್ತಿದ್ದಾಗ ಶ್ರೀರಾಮಪುರ ಸೇತುವೆ ಬಳಿ ಪ್ಯಾಂಟಿಂದ ಬಿದ್ದಿದೆ
  • -ಮನೆಗೆ ಹೋದಾಗ ಮೊಬೈಲ್‌ ಇಲ್ಲದ್ದು ಕಂಡು ಕಕ್ಕಾಬಿಕ್ಕಿ, ಸೋದರ ಜಗ್ಗೇಶ್‌ಗೆ ಮೊರೆ
  • ಮಲ್ಲೇಶ್ವರ ಪೊಲೀಸರಿಂದ ಟವರ್ ಲೋಕೇಷನ್‌ ಪತ್ತೆ, ಸಂಜೆ ವೇಳೆಗೆ ಮೊಬೈಲ್‌ ವಾಪಸ್‌
  • ಪೊಲೀಸರ ಸಹಾಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಜಗ್ಗೇಶ್ ಧನ್ಯವಾದ

PREV
Read more Articles on
click me!

Recommended Stories

ಜಾತಿ ವ್ಯವಸ್ಥೆಗೆ ಪರಿಹಾರ ರೂಪದ ವಿದ್ಯೆ ಅಗತ್ಯ: ಸಿಎಂ ಸಿದ್ದರಾಮಯ್ಯ
ಮಂಗಳೂರು: 'ಡಿಕೆಶಿ ಮುಂದಿನ ಸಿಎಂ’ ಘೋಷಣೆ ಕೂಗಿದ ಐವನ್, ಮಿಥುನ್‌ಗೆ ನೋಟಿಸ್?