ಮಂಗಳೂರಿಗೆ 2 ವಾಣಿಜ್ಯ ನ್ಯಾಯಾಲಯ

By Kannadaprabha NewsFirst Published Oct 31, 2019, 12:36 PM IST
Highlights

ವ್ಯಾಪಾರಿಗಳ ಅಥವಾ ಉದ್ಯಮಿಗಳ ನಡುವಿನ ಆರ್ಥಿಕ ವಿವಾದವನ್ನು ಇತ್ಯರ್ಥಪಡಿಸುವ ಉದ್ದೇಶದಿಂದ ವಾಣಿಜ್ಯ ನ್ಯಾಯಾಲಯಗಳ ಕಾರ್ಯವ್ಯಾಪ್ತಿಯನ್ನು ಜಿಲ್ಲಾ ಮಟ್ಟಕ್ಕೆ ನಿಗದಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ದ.ಕ. ಜಿಲ್ಲೆಗೆ ಅನ್ವಯಿಸುವಂತೆ 2 ವಾಣಿಜ್ಯ ನ್ಯಾಯಾಲಯಗಳನ್ನು ನಿಗದಿ ಮಾಡಲಾಗಿದ್ದು, ಅವುಗಳಿಗೆ 1ನೇ ಮತ್ತು 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರನ್ನು ಅಧ್ಯಕ್ಷಾಧಿಕಾರಿಗಳಾಗಿ ನೇಮಕ ಮಾಡಲಾಗಿದೆ.

ಮಂಗಳೂರು(ಅ.31): ವ್ಯಾಪಾರಿಗಳ ಅಥವಾ ಉದ್ಯಮಿಗಳ ನಡುವಿನ ಆರ್ಥಿಕ ವಿವಾದವನ್ನು ಇತ್ಯರ್ಥಪಡಿಸುವ ಉದ್ದೇಶದಿಂದ ವಾಣಿಜ್ಯ ನ್ಯಾಯಾಲಯಗಳ ಕಾರ್ಯವ್ಯಾಪ್ತಿಯನ್ನು ಜಿಲ್ಲಾ ಮಟ್ಟಕ್ಕೆ ನಿಗದಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ದ.ಕ. ಜಿಲ್ಲೆಗೆ ಅನ್ವಯಿಸುವಂತೆ 2 ವಾಣಿಜ್ಯ ನ್ಯಾಯಾಲಯಗಳನ್ನು ನಿಗದಿ ಮಾಡಲಾಗಿದ್ದು, ಅವುಗಳಿಗೆ 1ನೇ ಮತ್ತು 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರನ್ನು ಅಧ್ಯಕ್ಷಾಧಿಕಾರಿಗಳಾಗಿ ನೇಮಕ ಮಾಡಲಾಗಿದೆ.

ಇದುವರೆಗೆ ರಾಜ್ಯದ ಮೂರೇ ಕಡೆ ಅಂದರೆ ಬೆಂಗಳೂರಿನಲ್ಲಿ 2 ಹಾಗೂ ಬಳ್ಳಾರಿಯಲ್ಲಿ ಒಂದು ಕೋರ್ಟ್‌ ಕಾರ್ಯ ನಿರ್ವಹಿಸುತ್ತಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ವಾಣಿಜ್ಯ ಪ್ರಕರಣಗಳ ಇತ್ಯರ್ಥಕ್ಕೆ ದೂರದೂರುಗಳಿಗೆ ಅಲೆಯಬೇಕಾಗಿತ್ತು. ಜಿಲ್ಲಾ ಮಟ್ಟದ ವಾಣಿಜ್ಯ ನ್ಯಾಯಾಲಯದ ಬೇಡಿಕೆಯನ್ನು ಕೆಸಿಸಿಐ ಹಲವು ಸಮಯಗಳಿಂದ ಮುಂದಿರಿಸಿತ್ತು. ಇದೀಗ ಆ ಬೇಡಿಕೆ ಈಡೇರಿದೆ.

ಟಿಕೆಟ್‌ಗಾಗಿ ಮಾಜಿ ಮೇಯರ್ ಮಗನ ಜೊತೆ ಮೊಯ್ದೀನ್ ಬಾವಾ ತಳ್ಳಾಟ

ನೂತನ ಆದೇಶದಿಂದಾಗಿ ಈಗಾಗಲೇ ರಾಜ್ಯದ ವಿವಿಧ ಜಿಲ್ಲಾ ನ್ಯಾಯಾಲಯಗಳಿಂದ ಬೆಂಗಳೂರು ಮತ್ತು ಬಳ್ಳಾರಿಗೆ ಕಳುಹಿಸಿದ, ವಿಚಾರಣೆಗೆ ಬಾಕಿ ಇರುವ ಎಲ್ಲ ಕಡತಗಳನ್ನು ಆಯಾ ಜಿಲ್ಲಾ ನ್ಯಾಯಾಲಯಗಳಿಗೆ ಮರಳಿ ಕಳುಹಿಸಬೇಕಾಗಿದೆ ಮತ್ತು ಜಿಲ್ಲಾ ಮಟ್ಟದಲ್ಲೇ ಅವುಗಳ ಇತ್ಯರ್ಥವಾಗಲಿದೆ.

ಬ್ಯಾಂಕ್‌ಗಳ ವಿಚಾರ ಏನು:

ಕಮರ್ಷಿಯಲ್‌ ಕೋರ್ಟ್‌ ವ್ಯಾಪ್ತಿಗೆ ಒಳಪಡುವ ಪ್ರಕರಣಗಳು ಯಾವುವು ಎಂಬ ಬಗ್ಗೆ ಗೊಂದಲವಿದೆ. ಸಮರ್ಪಕವಾದ ಮಾಹಿತಿ ವಕೀಲರಿಗಾಗಲಿ, ನ್ಯಾಯಾಲಯದ ಸಿಬ್ಬಂದಿಗೆ ಇಲ್ಲ. ಮೂರು ಲಕ್ಷ ರು.ಗಿಂತ ಹೆಚ್ಚಿನ ಮೌಲ್ಯದ ಬ್ಯಾಂಕ್‌ ದಾವೆಗಳು ಕಮರ್ಷಿಯಲ್‌ ಕೋರ್ಟ್‌ ವ್ಯಾಪ್ತಿಗೆ ಒಳಪಡುತ್ತದೆ ಎಂಬ ಅಭಿಪ್ರಾಯವನ್ನು ಕೆಲವರು ವ್ಯಕ್ತಪಡಿಸುತ್ತಿದ್ದಾರೆ. ಬ್ಯಾಂಕ್‌ ವಾಣಿಜ್ಯ ವ್ಯವಹಾರವನ್ನು ನಿರ್ವಹಿಸುತ್ತಿದ್ದರೂ ಅದು ಸರ್ವ ಜನೋಪಕಾರ ಸಂಸ್ಥೆ ಎಂಬುದಾಗಿ ಸರ್ವೋಚ್ಚ ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ಈ ನಿಟ್ಟಿನಲ್ಲಿ ಬ್ಯಾಂಕ್‌ ನೀಡಿದ ಯಾವುದೇ ವ್ಯಾಪಾರೇತರ ವೈಯಕ್ತಿಕ ಸಾಲ, ಶೈಕ್ಷಣಿಕ ಸಾಲ, ಕೃಷಿ ಸಾಲ ಇತ್ಯಾದಿಗಳು ಕಮರ್ಷಿಯಲ್‌ ಕೋರ್ಟಿನ ಕಾರ್ಯ ವ್ಯಾಪ್ತಿಯೊಳಗೆ ಬರುತ್ತವೆಯೋ ಎಂಬ ಬಗ್ಗೆ ಜಿಜ್ಞಾಸೆ ಇದೆ ಎಂದು ಮಂಗಳೂರಿನ ನ್ಯಾಯಿಕ ಸೇವಾ ಕೇಂದ್ರದ ಶಿರಸ್ತೇದಾರ್‌ ಪ್ರಕಾಶ್‌ ನಾಯಕ್‌ ಹೇಳುತ್ತಾರೆ.

ಡಿಕೆಶಿ ಜೆಡಿಎಸ್ ಪಕ್ಷದ ಧ್ವಜ ಹಿಡಿದಿದ್ರಲ್ಲಿ ತಪ್ಪೇನಿದೆ ಎಂದ ಕಾಂಗ್ರೆಸ್ ಶಾಸಕ

ವಾಣಿಜ್ಯ ನ್ಯಾಯಾಲಯಗಳಿಗೆ ಮೂರು ಲಕ್ಷಕ್ಕಿಂತಲೂ ಜಾಸ್ತಿ ಮೌಲ್ಯದ ವಾಣಿಜ್ಯ ದಾವೆಗಳನ್ನು ಇತ್ಯರ್ಥಪಡಿಸುವ ವಿತ್ತೀಯ ಅಧಿಕಾರ ವ್ಯಾಪ್ತಿಯನ್ನು ನೀಡಲಾಗಿದೆ. ಮೊದಲು ಈ ವಿತ್ತೀಯ ಅಧಿಕಾರ ವ್ಯಾಪ್ತಿ ಒಂದು ಕೋಟಿ ರು.ಗಿಂತಲೂ ಹೆಚ್ಚಿನದಾಗಿತ್ತು. ಪ್ರಸ್ತುತ ಒಂದು ಕೋಟಿಗಿಂತ ಹೆಚ್ಚಿನ ಮೌಲ್ಯವುಳ್ಳ ವಾಣಿಜ್ಯ ವಿವಾದಗಳನ್ನು ಹೈಕೋರ್ಟಿನ ಕಮರ್ಷಿಯಲ್‌ ಡಿವಿಜನ್‌ ನ್ಯಾಯಾಲಯವು ಇತ್ಯರ್ಥಪಡಿಸುತ್ತಿದೆ ಎಂಬುದಾಗಿ ಅವರು ತಿಳಿಸಿದ್ದಾರೆ.

click me!