ಮಂಗಳೂರು ಮೇಯರ್ ಟಿಕೆಟ್: ಕೈ ಮುಖಂಡರ ಗುದ್ದಾಟ

By Kannadaprabha News  |  First Published Oct 31, 2019, 12:25 PM IST

ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮೇಯರ್‌ ಮಗ ಹಾಗೂ ಮಾಜಿ ಶಾಸಕ ಮೊಯಿದ್ದೀನ್‌ ಬಾವಾ ನಡುವೆ ಬುಧವಾರ ತಳ್ಳಾಟ ನಡೆದಿದೆ. ಮಾಜಿ ಮೇಯರ್‌ ಗುಲ್ಜಾರ್‌ ಬಾನು ಅವರಿಗೆ ಈ ಬಾರಿ ಕಾಂಗ್ರೆಸ್‌ ಟಿಕೆಟ್‌ ನಿರಾಕರಿಸಲಾಗಿದ್ದು, ಅದನ್ನು ಪ್ರಶ್ನಿಸಲು ಅವರು ಮಗನೊಂದಿಗೆ ಆಗಮಿಸಿದ್ದರು.


ಮಂಗಳೂರು(ಅ.31): ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮೇಯರ್‌ ಮಗ ಹಾಗೂ ಮಾಜಿ ಶಾಸಕ ಮೊಯಿದ್ದೀನ್‌ ಬಾವಾ ನಡುವೆ ಬುಧವಾರ ತಳ್ಳಾಟ ನಡೆದಿದೆ.

ಬುಧವಾರ ನಗರದ ಹೊಟೇಲ್‌ ಒಂದರಲ್ಲಿ ಕಾಂಗ್ರೆಸ್‌ ವತಿಯಿಂದ ಸುದ್ದಿಗೋಷ್ಠಿ ಕರೆಯಲಾಗಿತ್ತು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌, ಮಾಜಿ ಸಚಿವ ರಮಾನಾಥ ರೈ ಹಾಗೂ ಶಾಸಕ ಯು.ಟಿ. ಖಾದರ್‌ ಮಾತನಾಡುತ್ತಿದ್ದರು. ಈ ಸಂದರ್ಭ ಹೊರಗಡೆ ಮಾಜಿ ಮೇಯರ್‌ ಗುಲ್ಜಾರ್‌ ಬಾನು ಮಗ ಅಜೀಂ ಹಾಗೂ ಕಾಂಗ್ರೆಸ್‌ ಮುಖಂಡರೊಬ್ಬರ ನಡುವೆ ಟಿಕೆಟ್‌ ವಿಚಾರಕ್ಕೆ ಸಂಬಂಧಿಸಿದಂತೆ ಜೋರು ವಾಗ್ವಾದ ಹಾಗೂ ತಳ್ಳಾಟ ಆರಂಭವಾಗಿತ್ತು.

Latest Videos

undefined

ಬಾಂಗ್ಲಾ ವಲಸಿಗರ ತಡೆಗೆ ಅಗ್ರಹ: ಕೆ. ಆರ್. ಪೇಟೆ ಬಂದ್‌ಗೆ ವ್ಯಾಪಕ ಬೆಂಬಲ

ಆಗ, ಕಾಂಗ್ರೆಸ್‌ ಮುಖಂಡರು ಮಾಜಿ ಶಾಸಕ ಮೊಯಿದ್ದೀನ್‌ ಬಾವಾ ಅವರನ್ನು ಹೊರಗಡೆ ಜನರನ್ನು ಸಮಾಧಾನಪಡಿಸಲು ಕಳುಹಿಸಿದ್ದರು. ಈ ಸಂದರ್ಭ ಮೊಯಿದ್ದೀನ್‌ ಬಾವ ತಳ್ಳಾಟದ ನಡುವೆ ಸಿಲುಕಿಕೊಂಡು ಅವರಿಗೂ ಒಂದೆರಡು ಏಟು ಬಿದ್ದಿದೆ ಎಂದು ತಿಳಿದುಬಂದಿದೆ.

ಮಾಜಿ ಮೇಯರ್‌ ಗುಲ್ಜಾರ್‌ ಬಾನು ಅವರಿಗೆ ಈ ಬಾರಿ ಕಾಂಗ್ರೆಸ್‌ ಟಿಕೆಟ್‌ ನಿರಾಕರಿಸಲಾಗಿದ್ದು, ಅದನ್ನು ಪ್ರಶ್ನಿಸಲು ಅವರು ಮಗನೊಂದಿಗೆ ಆಗಮಿಸಿದ್ದರು. ಈ ಸಂದರ್ಭ ಎದುರು ಸಿಕ್ಕಿದ ಕಾಂಗ್ರೆಸ್‌ ಮುಖಂಡರ ನಡುವೆ ವಾಗ್ವಾದ ಆರಂಭವಾಗಿತ್ತು. ನಂತರ ಹಿರಿಯ ಕಾಂಗ್ರೆಸ್‌ ಮುಖಂಡರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

ಮೋದಿ ಯಾರೆಂದೇ ಗೊತ್ತಿಲ್ಲ ಎಂದ ಗುಜರಾತ್ ಶಾಸಕ..!

click me!