ನನಗೆ ಬಿಜೆಪಿ ವೆರಿ ಬ್ಯಾಡ್ ಅಂತ ಹೇಳಿಕೊಟ್ಟದ್ದೇ ಪೂಜಾರಿ ಎಂದಿದ್ದಾರೆ. ಚಿಕ್ಕಂದಿನಿಂದ ಪೂಜಾರಿಯವರೇ ನನಗೆ ರಾಜಕೀಯ ಗುರುಗಳಾಗಿದ್ದವರು. ಪೂಜಾರಿಯವರನ್ನು ಬಿಜೆಪಿಯವರು ಹೇಗೆ ಅವಾಚ್ಯವಾಗಿ ಬೈಯುತ್ತಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದಿದ್ಧಾರೆ.
ಮಂಗಳೂರು(ನ.10): ನನಗೆ ಬಿಜೆಪಿ ವೆರಿ ಬ್ಯಾಡ್ ಅಂತ ಹೇಳಿಕೊಟ್ಟದ್ದೇ ಪೂಜಾರಿ ಎಂದು ಶಾಸಕ ಯು.ಟಿ. ಖಾದರ್ ಆರೋಪಿಸಿದ್ದಾರೆ. ಮಾಜಿ ಸಚಿವ ಜನಾರ್ದನ ಪೂಜಾರಿ ಹೇಳಿಕೆಗೆ ಪ್ರತಿಕ್ರಿಯಿಸಿದ ಯು.ಟಿ. ಖಾದರ್, ಚಿಕ್ಕಂದಿನಿಂದ ಪೂಜಾರಿಯವರೇ ನನಗೆ ರಾಜಕೀಯ ಗುರುಗಳಾಗಿದ್ದವರು. ಪೂಜಾರಿಯವರನ್ನು ಬಿಜೆಪಿಯವರು ಹೇಗೆ ಅವಾಚ್ಯವಾಗಿ ಬೈಯುತ್ತಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದಿದ್ದಾರೆ.
ಬಿಜೆಪಿ ಒಂದೇ ಒಂದು ಅನುದಾನ ತಂದಿಲ್ಲ:
ಬಿಜೆಪಿ ಶಾಸಕರು ಅಧಿಕಾರಕ್ಕೆ ಬಂದ ನಂತರ ಮಂಗಳೂರು ನಗರದ ಅಭಿವೃದ್ಧಿಗೆ ಒಂದೇ ಒಂದು ಅನುದಾನ ತಂದಿಲ್ಲ ಎಂದು ಶಾಸಕ ಯು.ಟಿ. ಖಾದರ್ ಆರೋಪಿಸಿದ್ದಾರೆ. ಮಾಜಿ ಶಾಸಕರಾದ ಜೆ.ಆರ್. ಲೋಬೊ ಮತ್ತು ಮೊಹಿಯುದ್ದೀನ್ ಬಾವ ಅಧಿಕಾರದಲ್ಲಿದ್ದಾಗ ತಂದ ಕಾಮಗಾರಿಗಳು ಮಾತ್ರ ಈಗ ನಡೆಯುತ್ತಿವೆ. ಬಿಜೆಪಿ ಶಾಸಕರು ಅಧಿಕಾರಕ್ಕೆ ಬಂದ ಕೂಡಲೆ 2-3 ತಿಂಗಳು ಹಿಂದಿನ ಕಾಂಗ್ರೆಸ್ ಸರ್ಕಾರದ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಿದರು. ಈಗ ಶಂಕುಸ್ಥಾಪನೆಗಳೇ ನಡೆಯುತ್ತಿಲ್ಲ. ಬಿಜೆಪಿ ಶಾಸಕರು ಬಂದ ಮೇಲೆ ಯಾವುದೇ ಅನುದಾನ ತರಲು ಸಾಧ್ಯವಾಗಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ರಾಮ ಮಂದಿರ ಸಂಕಲ್ಪದ ಮಹಾಯಜ್ಞ: ವರ್ಷ ಕಳೆದು ಅದೇ ದಿನ ಪ್ರಕಟವಾಯ್ತು ತೀರ್ಪು
ಕೋರ್ಟ್ ನೋಟಿಸ್ ಹುನ್ನಾರ:
ಬಿಪಿಎಲ್ ಕಾಡ್ ಗರ್ಳನ್ನು ಕಡಿತಗೊಳಿಸುವ ಮೂಲಕ ತಿಂದ ಅನ್ನಕ್ಕೂ ದಂಡ ಕಟ್ಟುವಂತೆ ಮಾಡಿದ್ದಾರೆ. ಈ ಮೂಲಕ ಜನರಲ್ಲಿ ಭಯದ ವಾತಾವರಣ ನಿರ್ಮಿಸಿದ್ದಾರೆ. ಮುಂದಿನ ದಿನಗಳಲ್ಲಿ ನೇರವಾಗಿ ಬಿಪಿಎಲ್ ಕಾರ್ಡ್‌ದಾರರಿಗೆ ಕೋರ್ಟ್ ನೋಟಿಸ್ ಕೊಡುವ ಹುನ್ನಾರವನ್ನೂ ನಡೆಸಿದ್ದಾರೆ. ನೋಟಿಸ್ ನೀಡಿದರೆ ಕಾಂಗ್ರೆಸ್ ಉಗ್ರ ಹೋರಾಟ ಹಮ್ಮಿಕೊಳ್ಳಲಿದೆ ಎಂದು ಎಚ್ಚರಿಸಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮುಖಂಡರಾದ ಭರತ್ ಮುಂಡೋಡಿ, ಸೂರಜ್ ಹೆಗ್ಡೆ, ಮಹಮ್ಮದ್ ಮೋನು, ನಝೀರ್ ಬಜಾಲ್ ಮತ್ತಿತರರಿದ್ದರು.
ಅಯೋಧ್ಯೆ ತೀರ್ಪು: ನೊಂದ ಕುಟುಂಬಕ್ಕೆ ಸಂತಸದ ಜೊತೆ ಸಾಂತ್ವನ