ಮಂಗಳೂರು ಮಹಾನಗರ ಪಾಲಿಕೆ ಮತದಾನದಲ್ಲಿ ಮಂಗಳಮುಖಿಯರು ಅತ್ಯಂತ ಉತ್ಸಾಹದಲ್ಲಿ ಮತದಾನ ಮಾಡಿದ್ದು, ನಗರವಾಸಿಗಳು ಹಾಗೂ ಯುವ ಜನ ಮತದಾನದಲ್ಲಿ ಹಿಂದುಳಿದಿದ್ದಾರೆ. ಉದ್ಯಮಿ ಸುಧೀರ್ ಘಾಟೆ ತಮ್ಮ ಅನಾರೋಗ್ಯವನ್ನೂ ಲೆಕ್ಕಿಸದೆ ಆಕ್ಸಿಜನ್ ಪೈಪ್ ಹಿಡಿದುಕೊಂಡೇ ಬಂದು ಮತ ಚಲಾಯಿಸಿದರು.
ಮಂಗಳೂರು(ನ.11): ಮಂಗಳಮುಖಿಯರ ಮತದಾನ ಉತ್ಸಾಹ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು ೬೩ ಮಂದಿ ಮಂಗಳಮುಖಿ ಮತದಾರರು ಇದ್ದು, ವಿವಿಧ ಮತಗಟ್ಟೆಗಳಲ್ಲಿ ಮತ ಚಲಾಯಿಸಿದರು. ನಗರದ ಮಿಲಾಗ್ರಿಸ್ ಶಾಲೆಯ ೪೦ನೇ ಬೂತ್‌ನಲ್ಲಿ ೨೦ಕ್ಕೂ ಅಧಿಕ ಮಂಗಳಮುಖಿಯರು ಮತದಾನ ಮಾಡಿ ಸಂಭ್ರಮ ವ್ಯಕ್ತಪಡಿಸಿದ್ದು ಅನೂಹ್ಯವಾಗಿತ್ತು. ಈ ಹಿಂದಿನ ಚುನಾವಣೆಯ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯ ಮಂಗಳಮುಖಿಯರನ್ನು ಮತದಾರರ ಪಟ್ಟಿಗೆ ಸೇರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಆಕ್ಸಿಜನ್ ಪೈಪ್ ಹಿಡಿದೇ ಬಂದರು!
undefined
ಉದ್ಯಮಿ ಸುಧೀರ್ ಘಾಟೆ ತಮ್ಮ ಅನಾರೋಗ್ಯವನ್ನೂ ಲೆಕ್ಕಿಸದೆ ಮತದಾನ ಮಾಡುವ ಉತ್ಸಾಹ ತೋರಿಸಿದರು. ದೇಹಕ್ಕೆ ಅಳವಡಿಸಿರುವ ಆಕ್ಸಿಜನ್ ಪೈಪ್ ಸಮೇತವಾಗಿ ಗಾಲಿ ಕುರ್ಚಿಯಲ್ಲಿ ಆಗಮಿಸಿದ ಅವರು ಕೊಡಿಯಾಲ್‌ಬೈಲ್‌ನ ಜಿಲ್ಲಾ ಶಿಕ್ಷಕ ತರಬೇತಿ ಕೇಂದ್ರದ ಮತಗಟ್ಟೆಯಲ್ಲಿ ಮತದಾನ ಮಾಡಿ ಎಲ್ಲರಿಗೂ ಮಾದರಿಯಾದರು.
17 ಶಾಸಕರ ಅನರ್ಹತೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್
ಶಾಂತಿಯುತ ಮತದಾನ:
ಡಿಸಿ ಕೃತಜ್ಞತೆ ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಗೆ ಯಾವುದೇ ಗೊಂದಲಗಳಿಲ್ಲದೆ, ಶಾಂತಿಯುತವಾಗಿ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಚುನಾವಣೆ ನಡೆಯಲು ಸಹಕರಿಸಿದ ಮತದಾರರಿಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಸಿಂಧು ಬಿ. ರೂಪೇಶ್ ಕೃತಜ್ಞತೆ ಸಲ್ಲಿಸಿದ್ದಾರೆ. ಚುನಾವಣಾ ಸಿದ್ಧತೆಗಳಿಗೆ ಕಾಲಾವಕಾಶ ಕಡಿಮೆ ಇದ್ದರೂ, ಯಾವುದೇ ಲೋಪಗಳಿಲ್ಲದೆ ಚುನಾವಣೆ ನಡೆದಿದೆ. ಇದಕ್ಕಾಗಿ ತೊಡಗಿಸಿಕೊಂಡ ಎಲ್ಲ ಅಧಿಕಾರಿ, ಸಿಬ್ಬಂದಿ, ಪೊಲೀಸರಿಗೆ ಧನ್ಯವಾದ ಸಲ್ಲಿಸಿರುವ ಅವರು, ಚುನಾವಣೆ ಸುಗಮವಾಗಲು ಸಹಕರಿಸಿದ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳಿಗೂ ಕೃತಜ್ಞತೆ ತಿಳಿಸಿದ್ದಾರೆ.
ನಗರವಾಸಿಗಳ ಉದಾಸೀನ!
ಕಳೆದ ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಸಾರ್ವಕಾಲಿಕ ದಾಖಲೆಯ (ಲೋಕಸಭೆ ಚುನಾವಣೆಗಳಲ್ಲಿ) ಶೇ.77.90 ಮತದಾನವಾಗಿದ್ದರೆ, ೨೦೧೮ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಸರಾಸರಿ ಶೇ. 77.63 ಮತದಾನವಾಗಿತ್ತು. ಈ ಚುನಾವಣೆಯಲ್ಲಿ ಇತರ ಕ್ಷೇತ್ರಗಳಿಗಿಂತ ಅತಿ ಕಡಿಮೆ ಮತದಾನ ಮಂಗಳೂರಿನಲ್ಲಿ ಆಗಿತ್ತು. ವಿಧಾನಸಭೆ ಚುನಾವಣೆಯಲ್ಲಿದ್ದ ಮತದಾರರ ಉತ್ಸಾಹ ಪಾಲಿಕೆ ಚುನಾವಣೆಯಲ್ಲಿ ಕಂಡುಬಂದಿಲ್ಲ. ನಗರವಾಸಿಗಳು ರಜೆಯ ಮೂಡ್‌ನಲ್ಲಿದ್ದರೇ ವಿನಾ ಮತಗಟ್ಟೆಯತ್ತ ತೆರಳಲು ಆಸಕ್ತಿ ವಹಿಸಲಿಲ್ಲ.
ಮಂಗಳೂರು: ಪಾಲಿಕೆ ಚುನಾವಣೆಗೆ ನೀರಸ ಪ್ರತಿಕ್ರಿಯೆ, ಕೈಕೊಟ್ಟ ಯುವಜನ