ಮಂಗಳೂರಿನಲ್ಲಿ ಪಾಲಿಕೆ ಚುನಾವಣೆ ಸಮೀಪಿಸುತ್ತಿರುವಂತೆ ಟಿಕೆಟ್ ವಿಚಾರದಲ್ಲಿ ಸಮಾಧಾನ ಭುಗಿಲೆದ್ದಿದೆ. ಸಾಲು ಸಾಲು ಕಾಂಗ್ರೆಸ್ ಮುಖಂಡರು ರಾಜೀನಾಮೆ ನೀಡುತ್ತಿದ್ದು, ಮಾಜಿ ಮೇಯರ್ ಪುರಂದರ ದಾಸ್ ಕೂಳೂರು ಅವರೂ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ.
ಮಂಗಳೂರು(ನ.07): ಮಂಗಳೂರಿನಲ್ಲಿ ಪಾಲಿಕೆ ಚುನಾವಣೆ ಸಮೀಪಿಸುತ್ತಿರುವಂತೆ ಟಿಕೆಟ್ ವಿಚಾರದಲ್ಲಿ ಸಮಾಧಾನ ಭುಗಿಲೆದ್ದಿದೆ. ಸಾಲು ಸಾಲು ಕಾಂಗ್ರೆಸ್ ಮುಖಂಡರು ರಾಜೀನಾಮೆ ನೀಡುತ್ತಿದ್ದು, ಮಾಜಿ ಮೇಯರ್ ಪುರಂದರ ದಾಸ್ ಕೂಳೂರು ಅವರೂ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಪುರಂದರ ದಾಸ್ ಕೂಳೂರು ಅವರು ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಟಿಕೆಟ್ ದೊರೆಯದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ.
ಕಾಂಗ್ರೆಸ್‌ಗೆ ಭಾರಿ ಆಘಾತ: ಬಿಜೆಪಿ ಸೇರಿದ 62 ‘ಕೈ’ ಮುಖಂಡರು
ಚುನಾವಣೆಗೆ ಸ್ಪರ್ಧಿಸಲು ಅ.31ರಂದು ಬಿ ಫಾಮ್‌ರ್ ನೀಡುವುದಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ನನ್ನನ್ನು ಮತ್ತು ಕಳ್ಳಿಗೆ ತಾರಾನಾಥ ಶೆಟ್ಟಿಅವರನ್ನು ಕಚೇರಿಗೆ ಬರಹೇಳಿದ್ದರು. ನಾನು ನಾಮಪತ್ರದ ತಯಾರಿಯನ್ನು ಕಚೇರಿಯಲ್ಲೇ ನಡೆಸುತ್ತಿದ್ದೆ. ಆದರೆ ಕೊನೆ ಗಳಿಗೆಯಲ್ಲಿ ಟಿಕೆಟ್ ನೀಡಲು ನಿರಾಕರಣೆ ಮಾಡಿದ್ದಾರೆ. ಸುದೀರ್ಘ ಕಾಲ ಪಕ್ಷದಲ್ಲಿ ದುಡಿದ ನನ್ನ ಸೇವೆಗೆ ಅವಮಾನ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದಾಗಿ ಪುರಂದರದಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಕ್ಷದ ನಿರ್ಲಕ್ಷ್ಯ: ಕಾಂಗ್ರೆಸ್ ಮುಖಂಡ ರಾಜೀನಾಮೆ