
ಧರ್ಮಸ್ಥಳ (ಆ.09) ಧರ್ಮಸ್ಥಳದಲ್ಲಿ ಕಳೆದ ಹಲವು ದಿನಗಳಿಂದ ಎಸ್ಐಟಿ ತನಿಖಾ ತಂಡ ತೀವ್ರ ವಿಚಾರಣೆ ನಡೆಸುತ್ತಿದೆ. ಮುಸುಕುದಾರಿ ದೂರುದಾರ ಆರೋಪಿಸಿದ ಬುರುಡೆ ರಹಸ್ಯ ಬಯಲು ಮಾಡಲು ಸತತ ಉತ್ಖನನ ಕಾರ್ಯಗಳು ನಡೆಯುತ್ತಿದೆ. ಇಂದು ರತ್ನಗಿರಿ ಬೆಟ್ಟದಲ್ಲಿ ತನಿಖಾ ತಂಡ ಮುಸುಕುದಾರಿ ದೂರುದಾರನ ಜೊತೆ ಉತ್ಖನನ ಕಾರ್ಯ ಆರಂಭಿಸಿತು. ರತ್ನಗಿರಿ ಬೆಟ್ಟದಲ್ಲಿ ಎರಡು ಸ್ಥಳಗಳನ್ನು ದೂರುದಾರ ಗುರುತಿಸಿದ್ದ. ಇವುಗಳಿಗೆ ಪಾಯಿಂಟ್ 16 ಹಾಗೂ ಪಾಯಿಂಟ್ 16 ಎ ಎಂದು ಅಧಿಕಾರಿಗಳು ಹೆಸರಿಟ್ಟ ಉತ್ಖನನ ಆರಂಭಿಸಿದ್ದರು. ಭಾರಿ ಮಳೆ ನಡುವೆ ಕಾರ್ಯಾಚರಣೆ ಮಾಡಲಾಗಿತ್ತು. ದೂರುದಾರ, ವಕೀರಲು ಸೂಚಿಸದಂತೆ 10 ಅಡಿ ಆಳ ಅಗೆದರೂ ಯಾವುದೇ ಕಳೇಬರ ಪತ್ತೆಯಾಗಿಲ್ಲ. ರತ್ನಗಿರಿ ಬೆಟ್ಟದ ಎರಡೂ ಸ್ಥಳದಲ್ಲಿ ಯಾವುದೇ ಕಳೇಬರ ಪತ್ತೆಯಾಗಿಲ್ಲ.
ಮುಸುಕುದಾರಿ ದೂರುದಾರ ನಿನ್ನೆ ಕಲ್ಲೇರಿ, ಬೊಳಿಯಾರ್ ಸಮೀಪದ ಅರಣ್ಯದಲ್ಲಿ ಗುರುತಿಸಿದ್ದ ಸ್ಥಳಗಳನ್ನು ಉತ್ಖನನ ಮಾಡಲಾಗಿತ್ತು. ಈ ವೇಳೆ ಯಾವುದೇ ಅಸ್ಥಿಪಂಜರ ಪತ್ತೆಯಾಗಿರಲಿಲ್ಲ. ಇಂದು ಲೋಕೇಶನ್ ರತ್ನಗಿರಿ ಬೆಟ್ಟಕ್ಕೆ ಶಿಫ್ಟ್ ಆಗಿತ್ತು. ಧರ್ಮಸ್ಥಳ ಮುಖ್ಯದ್ವಾರದ ಪಕ್ಕದಲ್ಲಿರುವ ರತ್ನಗಿರಿ ಬೆಟ್ಟದಲ್ಲಿ 2 ಸ್ಥಳಗಳನ್ನು ಗುರುತಿಸಿದ್ದ. ಎಸ್ಐಟಿ ಅಧಿಕಾರಿಗಳು, ಕಾರ್ಮಿಕರು ಸೇರಿದಂತೆ ತಂಡ ರತ್ನಗಿರಿ ಬೆಟ್ಟದಲ್ಲಿ ಉತ್ಖನನ ನಡೆಸಿತ್ತು. ಎರಡೂ ಕಡೆ ಯಾವುದೇ ಕಳೇಬರ ಪತ್ತೆಯಾಗಿಲ್ಲ.
ರತ್ನಗಿರಿ ಬೆಟ್ಟದಲ್ಲಿ ಗುರುತಿಸಿದ 16ನೇ ಪಾಯಿಂಟ್‌ನಲ್ಲಿ ಮಣ್ಣು ಸುರಿದ ಸಾಕ್ಷಿ ನಾಶದ ಸಂಚು ಮಾಡಲಾಗಿದೆ ಅನ್ನೋ ಆರೋಪವನ್ನು ಸುಜಾತ ಭಟ್ ಪರ ವಕೀಲ ಮಂಜನಾಥ್ ಮಾಡಿದ್ದರು. ಮುಸುಕುದಾರಿ ದೂರುದಾರ ಹೂತಿಟ್ಟ ಶವದ ಸ್ಥಳದ ಮೇಲೆ ಮಣ್ಣು ಸುರಿಯಲಾಗಿದೆ, ತ್ಯಾಜ್ಯ ಎಸೆಯಲಾಗಿದೆ. ಈ ಮೂಲಕ ಸಾಕ್ಷಿಯನ್ನು ನಾಶಪಡಿಸಲು ಉದ್ದೇಶಪೂರ್ವಕವಾಗಿ ಪ್ರಯತ್ನಿಸಲಾಗಿದೆ. ಹೀಗಾಗಿ 7 ಅಡಿ ಅಗದರೆ ಸಾಲದು ಎಂದು ಮಂಜುನಾಥ್ ಆರೋಪಿಸಿದ್ದರು. ಇದರಂತೆ ಎಸ್ಐಟಿ ಅಧಿಕಾರಿಗಳು ಹಿಟಾಚಿ ಬಳಿ 10 ಅಡಿ ಆಳದವರಗೆ ಅಗೆಯಲಾಗಿದೆ. ಆದರೆ ಯಾವುದೇ ಕಳೇಬರ ಪತ್ತೆಯಾಗಿಲ್ಲ
ರತ್ನಗಿರಿ ಬೆಟ್ಟದಲ್ಲಿ ಗುರುತಿಸಿದ 2ನೇ ಪಾಯಿಂಟ್ 16ಎನಲ್ಲೂ ಉತ್ಖನನ ಮಾಡಲಾಗಿತ್ತು. ಹಾರೆ, ಪಿಕ್ಕಾಸು ಬಳಸಿ ಕಾರ್ಮಿಕರು ಉತ್ಖನನ ಕಾರ್ಯ ನಡೆಸಿದ್ದರು. ಆದರೆ ಯಾವುದೇ ಕಳೇಬರ ಪತ್ತೆಯಾಗಿಲ್ಲ. ಹೀಗಾಗಿ ಶೋಧ ಕಾರ್ಯ ಅಂತ್ಯಗೊಳಿಸಿದ ಎಸ್ಐಟಿ ಫೋಟೋ ದಾಖಲೆ ಮಾಡಿದ್ದಾರೆ. ಇನ್ನು ಎರಡೂ ಕಡೆ ಅಗೆದ ಗುಂಡಿಗಳನ್ನು ಹಿಟಾಚಿ ಮೂಲಕ ಮುಚ್ಚಿದ್ದಾರೆ.
ರತ್ನಗಿರಿ ಬೆಟ್ಟದಲ್ಲಿ ಉತ್ಖನನ ಕಾರ್ಯಕ್ಕೆ ಭಾರಿ ಮಳೆ ಅಡ್ಡಿಯಾಗಿತ್ತು. ಆದರೆ ಸಮಯದ ಅಭಾವದಿಂದ ಉತ್ಖನನ ಕಾರ್ಯ ನಿರಂತರವಾಗಿ ಸಾಗಿತ್ತು. ಮಿಂಚು ಗುಡುಗು ಸಹಿತ ಮಳೆಯಲ್ಲಿ ಶೋಧ ಕಾರ್ಯ ನಡೆಸಲಾಗಿತ್ತು ಇತ್ತ ಅಧಿಕಾರಿಗಳು ಟರ್ಪಾಲ್, ಛತ್ರಿಗಳನ್ನು ಬಳಸಿ ಶೋಧ ಕಾರ್ಯದ ಉಸ್ತುವಾರಿ ನೋಡಿಕೊಂಡಿದ್ದರು. ಧರ್ಮಸ್ಥಳ ಬುರುಡೆ ಪ್ರಕರಣದ ತನಿಖೆ ತೀವ್ರಗೊಂಡಿದ. ದೂರುದಾರ ತೋರಿಸಿದ ಜಾಗ ಗುರುತಿಸಿ ಅಗೆಯಲಾಗತ್ತಿದೆ. ಸೋಮವಾರದಿಂದ ಮತ್ತೆ ಹೊಸ ಸ್ಥಳ ಗುರುತಿಸಿ ಅಗೆಯುವ ಕಾರ್ಯ ನಡೆಯಲಿದೆ. ಇತ್ತ ದೂರುದಾರ ಗುರುತಿಸಿದ 13ನೇ ಪಾಯಿಂಟ್ ಉತ್ಖನನ ಕಾರ್ಯ ಇನ್ನು ನಡೆದಿಲ್ಲ. ಇಧರ ನಡುವೆ ಯೂಟ್ಯೂಬರ್ಸ್ ಮೇಲೆ ಹಲ್ಲೆ ಸೇರಿದಂತೆ ಹಲವು ಉದ್ವಿಘ್ನ ಘಟನೆಗಳು ನಡೆದಿತ್ತು.