
ಬೆಂಗಳೂರು (ಆ.07) ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣದ ಎಸ್ಐಟಿ ತನಿಖೆ ತೀವ್ರಗೊಂಡಿದೆ. ಇದರ ನಡುವೆ ಧರ್ಮಸ್ಥಳದ ಕುರಿತು ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಯೂಟ್ಯೂಬರ್ಸ್ ಹಾಗೂ ಭಕ್ತರ ನಡುವೆ ಘರ್ಷಣೆ ನಡೆದಿತ್ತು.ಈ ಘರ್ಷಣೆಯಲ್ಲಿ ಯೂಟ್ಯೂಬರ್ಸ್ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ. ಇದೀಗ ಗಾಯಗೊಂಡ ಯೂಟ್ಯೂಬರ್ಸ್‌ನನ್ನು ಎಸ್‌ಡಿಪಿಐ ಮುಖಂಡರು ಭೇಟಿಯಾಗಿದ್ದಾರೆ ಅನ್ನೋ ಮಾಹಿತಿಗಳು ಹೊರಬಿದ್ದಿದೆ. ಇದರ ಬೆನ್ನಲ್ಲೇ ಬಿಜೆಪಿ ನಾಯಕ ಸುನಿಲ್ ಕುಮಾರ್ ಕೆಲ ಪ್ರಶ್ನೆಗಳನ್ನು ಎತ್ತಿದ್ದಾರೆ. ಧರ್ಮಸ್ಥಳ ಹೋರಾಟಗಾರರಿಗೂ SDPI ಏನು ಸಂಬಂಧ? ಏನಿದರಮರ್ಮ? ಎಂದು ಪ್ರಶ್ನಿಸಿದ್ದಾರೆ.
ಈ ಭೇಟಿ ಹಾಗೂ ಘಟನೆ ಕುರಿತು ಸುನಿಲ್ ಕುಮಾರ್ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ. ಧರ್ಮಸ್ಥಳದಲ್ಲಿ ಎರಡು ಗುಂಪುಗಳ ಮಧ್ಯೆ ನಡೆದ ಘರ್ಷಣೆಯಲ್ಲಿ ಗಾಯಗೊಂಡ ಯುಟ್ಯೂಬರ್ ಗಳನ್ನು SDPI ಕಾರ್ಯಕರ್ತರು ಭೇಟಿ ಮಾಡಿದ್ದಾರೆ. ಧರ್ಮಸ್ಥಳ ಹೋರಾಟಗಾರರಿಗೂ SDPI ಏನು ಸಂಬಂಧ? ಏನಿದರಮರ್ಮ? ಈ ಹೋರಾಟದಲ್ಲಿರುವವರನ್ನು ಸೂಕ್ಷ್ಮವಾಗಿ ಗಮನಿಸಿ,ಎಡಪಂಥೀಯರು,ನಗರ ನಕ್ಸಲರು,SDPI,ಜಿಹಾದಿಗ್ಯಾಂಗ್,ಕಾನೂನು ಕೈಗೆತ್ತಿಕೊಳ್ಳುವವರೇ ತುಂಬಿದ್ದಾರೆ. ಇವರೆಲ್ಲ ಒಟ್ಟಿಗೆ ಸೇರಿ ಹಿಂದುತ್ವ, ಹಿಂದು ಧಾರ್ಮಿಕ ನಂಬಿಕೆಗಳ ವಿರುದ್ಧ ನಡೆಸುತ್ತಿದ್ದ ಟೂಲ್ ಕಿಟ್ ಹೋರಾಟದ ಮುಂದುವರಿದ ಭಾಗವೇ "ಟಾರ್ಗೆಟ್ ಧರ್ಮಸ್ಥಳ". ಕಾಡಿನಲ್ಲಿದ್ದ ನಕ್ಸಲರನ್ನು ಸಿಎಂ ಸಿದ್ದರಾಮಯ್ಯನವರು ನಾಡಿಗೆ ತಂದು ಬಿಟ್ಟಿದ್ದರ ಫಲ ಇದು ಎಂದು ಸುನಿಲ್ ಕುಮಾರ್ ಹೇಳಿದ್ದಾರೆ.
ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್ಐಟಿ ತನಿಖೆಯನ್ನು ಹಲವು ಮಾಧ್ಯಮಗಳು ವರದಿ ಮಾಡುತ್ತಿದೆ. ಈ ಪೈಕಿ ಯೂಟ್ಯೂಬರ್ಸ್ ಕೂಡ ಸ್ಥಳದಲ್ಲಿದ್ದಾರೆ. ಯೂಟ್ಯೂಬರ್ಸ್ ಧರ್ಮಸ್ಥಳ ಹಾಗೂ ಪ್ರಕರಣ ಸಂಬಂಧ ಸುಳ್ಳು ಸುದ್ದಿ ನೀಡುತ್ತಿದ್ದಾರೆ ಹಾಗೂ ಯ್ಯೂಟ್ಯಬೂರ್ಸ್ ನಡೆ ವಿರುದ್ದ ಧರ್ಮಸ್ಥಳ ಭಕ್ತರು ತೀವ್ರ ಅಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೇಳೆ ಎರಡು ಗುಂಪುಗಳ ನಡುವೆ ತೀವ್ರ ಘರ್ಷಣೆ ಸಂಭವಿಸಿದೆ. ಈ ಘರ್ಷಣೆಯಲ್ಲಿ ಯೂಟ್ಯೂಬರ್ಸ್ ಮೇಲೆ ಹಲ್ಲೆ ನಡೆದಿದೆ ಎಂದು ವರದಿಯಾಗಿದೆ. ಗಾಯಗೊಂಡ ಯ್ಯೂಟಬರ್ಸ್‌ನನ್ನು ಇದೀಗ ಎಸ್‌ಡಿಪಿಐ ಮುಖಂಡರು, ಕಾರ್ಯಕರ್ತರು ಭೇಟಿಯಾಗಿದ್ದಾರೆ. ಇದು ಹಲವರ ಅನುಮಾನಕ್ಕೆ ಕಾರಣವಾಗಿದೆ. ಟಾರ್ಗೆಟ್ ಧರ್ಮಸ್ಥಳ ಅನ್ನೋ ಆರೋಪಕ್ಕೆ ಈ ಭೇಟಿ ಪುಷ್ಠಿ ನೀಡುತ್ತಿದೆ ಎಂದು ಸುನಿಲ್ ಕುಮಾರ್ ಹೇಳಿದ್ದಾರೆ.
ಯೂಟ್ಯೂಬರ್ಸ್ ಮೇಲಿನ ಹಲ್ಲೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಘಟನೆ ಉದ್ವಿಘ್ನ ಪರಿಸ್ಥಿತಿ ಸೃಷ್ಟಿಸಿದೆ. ಇದರ ನಡುವೆ ಸುದ್ದಿ ವರದಿ ಮಾಡುತ್ತಿದ್ದ ಮಾಧ್ಯಮದ ಮೇಲೂ ಹಲ್ಲೆಯಾಗಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಧರ್ಮಸ್ಥಳದಲ್ಲಿ ಗುಂಪುಗಳ ನಡುವೆ ಘರ್ಷಣೆ ನಡೆದ ಕಾರಣ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಪ್ರತ್ಯೇಕ ದೂರುಗಳು ದಾಖಲಾಗಿದೆ. ಹಲ್ಲೆ ಸಂಬಂಧ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇತ್ತ ಬಿಗುವಿನ ವಾತಾರಣ ಕಾರಣ ಇಂದು ಯಾವುದೇ ಉತ್ಖನನ ಕಾರ್ಯ ನಡೆದಿಲ್ಲ. ದೂರುದಾರ ಗುರುತಿಸಿದ 13ನೇ ಸ್ಥಳದ ಉತ್ಖನನ ಕಾರ್ಯ ಬಾಕಿ ಇದೆ. ನಾಳೆ ಈ ಉತ್ಖನನ ಆರಂಭಗೊಳ್ಳುವ ಸಾಧ್ಯತೆ ಇದೆ.