ಮಂಗಳೂರಿಗೆ ಬಂದ ಎರಡನೇ ಪ್ರವಾಸಿ ನೌಕೆ, ಕರಾವಳಿಯ ಸೊಬಗು ಸವಿದ ವಿದೇಶಿಗರು

By Kannadaprabha NewsFirst Published Nov 13, 2019, 11:15 AM IST
Highlights

ಬಂದರಿಗೆ ಈ ಋತುಮಾನದ 2ನೇ ಐಷಾರಾಮಿ ಪ್ರವಾಸಿ ಹಡಗು ಮಂಗಳವಾರ ಆಗಮಿಸಿದ್ದು, ನೂರಾರು ವಿದೇಶಿ ಪ್ರವಾಸಿಗರು ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಇಟಲಿಯ ಕೋಸ್ಟಾ ವಿಕ್ಟೋರಿಯಾ ಹೆಸರಿನ ಹಡಗಿನಲ್ಲಿ ಒಟ್ಟು 1928ಮಂದಿ ವಿದೇಶಿ ಪ್ರವಾಸಿಗರು ಹಾಗೂ 766 ಮಂದಿ ಸಿಬ್ಬಂದಿಗಳು ಆಗಮಿಸಿದ್ದರು.

ಮಂಗಳೂರು(ನ.13): ಬಂದರಿಗೆ ಈ ಋತುಮಾನದ 2ನೇ ಐಷಾರಾಮಿ ಪ್ರವಾಸಿ ಹಡಗು ಮಂಗಳವಾರ ಆಗಮಿಸಿದ್ದು, ನೂರಾರು ವಿದೇಶಿ ಪ್ರವಾಸಿಗರು ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ.

ಇಟಲಿಯ ಕೋಸ್ಟಾ ವಿಕ್ಟೋರಿಯಾ ಹೆಸರಿನ ಹಡಗಿನಲ್ಲಿ ಒಟ್ಟು 1928ಮಂದಿ ವಿದೇಶಿ ಪ್ರವಾಸಿಗರು ಹಾಗೂ 766 ಮಂದಿ ಸಿಬ್ಬಂದಿಗಳು ಆಗಮಿಸಿದ್ದರು. ಇವರಿಗಾಗಿ ಎನ್‌ಎಂಪಿಟಿ ವತಿಯಿಂದ ನಗರ ಸಂಚಾರಕ್ಕೆ ರಿಕ್ಷಾ, ಟ್ಯಾಕ್ಸಿ, ಮಿನಿ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. ನಗರದ ವಿವಿಧ ಪ್ರದೇಶಗಳಿಗೆ ಪ್ರವಾಸಿಗರು ಸುತ್ತಾಡಿ ಇಲ್ಲಿನ ಸಾಂಸ್ಕೃತಿಕ, ಸಾಮಾಜಿಕ ಪರಿಸ್ಥಿತಿಗಳನ್ನು ಅವಲೋಕಿಸಿದರು.

ಹೆಲಿಕಾಪ್ಟರ್ ಬಂದಿಲ್ಲ:

ಎನ್‌ಎಂಪಿಟಿ ವತಿಯಿಂದ ಪ್ರಥಮ ಬಾರಿಗೆ ಹೆಲಿ ಟೂರಿಸಂಗೆ ಇತ್ತೀಚೆಗೆ ಚಾಲನೆ ನೀಡಲಾಗಿತ್ತು. ಮಂಗಳವಾರ ಆಗಮಿಸಿದ ಪ್ರವಾಸಿಗರಲ್ಲಿ 12 ಮಂದಿ ಕೇರಳಕ್ಕೆ ತೆರಳಲು ಹೆಲಿಕಾಪ್ಟರ್ ಬುಕ್ ಮಾಡಿದ್ದರು. ಆದರೆ ಕೊನೆ ಹಂತದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಹೆಲಿಕಾಪ್ಟರ್ ಆಗಮಿಸಲಿಲ್ಲ ಎಂದು ಎನ್ ಎಂಪಿಟಿ ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳೂರು ಪಾಲಿಕೆ ಚುನಾವಣೆ: ಆಕ್ಸಿಜನ್ ಪೈಪ್ ಹಿಡ್ಕೊಂಡೇ ಓಟ್ ಮಾಡಿದ್ರು..!

click me!