ಬುಧವಾರ ಗಣೇಶನಿಗೆ ಪ್ರಿಯ; ಈ ಕಾರ್ಯಗಳಿಂದ ಅದೃಷ್ಟ ಬರಲಿದೆ..!

By Sushma Hegde  |  First Published Jul 12, 2023, 10:18 AM IST

ಗಣೇಶನನ್ನು ಪೂಜಿಸುವುದರಿಂದ ಎಲ್ಲಾ ತೊಂದರೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ಬುಧವಾರ ಈ ಕೆಲ ಪವಾಡ ಪರಿಹಾರಗಳು, ನಿಮ್ಮ ಅದೃಷ್ಟವನ್ನು ಬದಲಾಯಿಸಬಹುದು.


ಬುಧವಾರವು ಗಣೇಶನಿಗೆ  ಸಮರ್ಪಿತವಾಗಿದೆ. ಈ ದಿನ ಗಣೇಶನ ಪೂಜೆಗೆ ವಿಶೇಷ ಮಹತ್ವವಿದೆ. ಹಿಂದೂ ಧರ್ಮದಲ್ಲಿ, ಯಾವುದೇ ಶುಭ ಕಾರ್ಯವನ್ನು ಪ್ರಾರಂಭಿಸುವ ಮೊದಲು ಗಣೇಶನನ್ನು ಪೂಜಿಸಲಾಗುತ್ತದೆ. ಗಣೇಶನನ್ನು ವಿಘ್ನ ನಿವಾರಕ ಎಂದು ಕರೆಯಲಾಗುತ್ತದೆ. ಮತ್ತು ಗಣೇಶ (Ganesha) ನನ್ನು ಪೂಜಿಸುವುದರಿಂದ ಎಲ್ಲಾ ತೊಂದರೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ಬುಧವಾರ ಈ ಕೆಲ ಪವಾಡ ಪರಿಹಾರಗಳು, ನಿಮ್ಮ ಅದೃಷ್ಟವನ್ನು ಬದಲಾಯಿಸಬಹುದು.

ಬುಧವಾರ (wednesday) ದಂದು ಗಣೇಶನನ್ನು ಪೂಜಿಸುವುದರಿಂದ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಗಣಪತಿ ಬಪ್ಪನನ್ನು ಮೆಚ್ಚಿಸಲು ಜ್ಯೋತಿಷ್ಯ ಶಾಸ್ತ್ರದಲ್ಲಿ ಹಲವು ಮಾರ್ಗಗಳಿವೆ.  ಜ್ಯೋತಿಷ್ಯಶಾಸ್ತ್ರದ ಪ್ರಕಾರ ನೀವು ಬುಧವಾರದಂದು ಈ ಪರಿಹಾರವನ್ನು ಮಾಡಿದರೆ, ನೀವು ಗಣೇಶನ ವಿಶೇಷ ಅನುಗ್ರಹವನ್ನು ಪಡೆಯುತ್ತೀರಿ ಮತ್ತು ನಿಮ್ಮ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತೀರಿ.

Latest Videos

undefined

ಗಣೇಶನಿಗೆ ಸಿಂಧೂರ ಅರ್ಪಿಸಿ

ಬುಧವಾರದಂದು ಭಗವಾನ್ ಗಣೇಶ ದೇವಸ್ಥಾನಕ್ಕೆ ಹೋಗಿ ಬಪ್ಪನಿಗೆ ಸಿಂಧೂರ, ಹೂವುಗಳನ್ನು ಅರ್ಪಿಸಿ. ಬುಧವಾರ ಯಾವುದಾದರು ಕೆಲಸಕ್ಕಾಗಿ ಹೊರಗೆ ಹೋಗುತ್ತಿದ್ದರೆ ಹಣೆಗೆ ಕೆಂಪು ಸಿಂಧೂರ  (Vermilion) ಹಚ್ಚಿಕೊಂಡು ಹೊರಗೆ ಹೋಗಿ. ಹೀಗೆ ಮಾಡುವುದರಿಂದ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಬುಧವಾರದಂದು ಗಣೇಶನಿಗೆ ಮೋದಕ ಅಥವಾ ಲಾಡುವನ್ನು ಅರ್ಪಿಸಿ. ಹೀಗೆ ಮಾಡುವುದರಿಂದ ಗಣಪತಿಯು ಪ್ರಸನ್ನನಾಗುತ್ತಾನೆ ಮತ್ತು ನಿಮ್ಮ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ.

ಹಸಿರು ಬಣ್ಣದ ಬಟ್ಟೆ ಧರಿಸಿ

ಬುಧವಾರ ಹಸಿರು ಬಣ್ಣವನ್ನು ಧರಿಸುವುದು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಈ ದಿನ ಹಸಿರು ಬಟ್ಟೆಗಳನ್ನು ಧರಿಸಲು ಪ್ರಯತ್ನಿಸಿ ಅಥವಾ ನಿಮ್ಮ ಜೇಬಿನಲ್ಲಿ ಹಸಿರು ಕರವಸ್ತ್ರವನ್ನು ಇಟ್ಟುಕೊಳ್ಳಿ. ನೀವು ಬುಧವಾರದಂದು ಯಾವುದಾದರೂ ಪ್ರಮುಖ ಕೆಲಸಕ್ಕೆ ಹೋಗುತ್ತಿದ್ದರೆ, ಮನೆಯಿಂದ ಹೊರಡುವಾಗ ಶುಂಠಿ ತಿಂದ ನಂತರ ಹೊರಗೆ ಹೋಗಿ. ಹೀಗೆ ಮಾಡುವುದರಿಂದ ಕೆಲಸದಲ್ಲಿ ಯಶಸ್ಸು (success೦) ಸಿಗುತ್ತದೆ.

Daily Horoscope: ಇಂದು ಸ್ನೇಹಿತನೇ ಶತ್ರು ಆಗಲಿದ್ದಾನೆ; ಈ ರಾಶಿಯವರು ಜಾಗೃತೆಯಿಂದ ಇರಿ..!

 

ಗೋಶಾಲೆಗೆ ಮೇವು ದಾನ ಮಾಡಿ

ಮನೆಯಲ್ಲಿ ಹಣವಿಲ್ಲದಿದ್ದರೆ ಅಥವಾ ಆರ್ಥಿಕ ನಷ್ಟ (Financial loss)  ಉಂಟಾದರೆ ಬುಧವಾರ ಹಸಿಬೇಳೆಯನ್ನು ನೀರಿನಲ್ಲಿ ಕುದಿಸಿ ಅದಕ್ಕೆ ಸಕ್ಕರೆ ಮತ್ತು ತುಪ್ಪ ಬೆರೆಸಿ ಹಸುವಿಗೆ ತಿನ್ನಿಸಿ. ಹೀಗೆ ಮಾಡುವುದರಿಂದ ಹಣಕಾಸಿನ ಅಡೆತಡೆಗಳು ನಿವಾರಣೆಯಾಗಿ ಹಣ ಬರುತ್ತದೆ.
 
ಬುಧವಾರ ಹಸುವಿಗೆ ಹಸಿರು ಹುಲ್ಲನ್ನು ನೀಡುವುದರಿಂದ ಬಡತನ ದೂರವಾಗುತ್ತದೆ. ಇದಲ್ಲದೆ, ವರ್ಷ ಅಥವಾ ತಿಂಗಳ ಯಾವುದೇ ಬುಧವಾರದಂದು ನಿಮ್ಮ ತೂಕಕ್ಕೆ ಸಮನಾದ ಹುಲ್ಲು ಅಥವಾ ಮೇವನ್ನು ಖರೀದಿಸಿ ಮತ್ತು ಅದನ್ನು ಗೋಶಾಲೆ (Cowshed) ಗೆ ದಾನ ಮಾಡಿ.
 
ಬುಧವಾರದಂದು ಗಣೇಶನಿಗೆ ಬೆಲ್ಲ ಮತ್ತು ಶುದ್ಧ ಹಸುವಿನ ತುಪ್ಪವನ್ನು ಅರ್ಪಿಸಿ. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಗೆ ಸಂತೋಷವಾಗುತ್ತದೆ ಮತ್ತು ಜೀವನದಲ್ಲಿ ಸಂತೋಷ  (happiness) ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ.

ಸೇಡು ತೀರಿಸಿಕೊಳ್ಳಲು ಆತ್ಮದ ಪುನರ್ಜನ್ಮ; ಇದು ವಿಜ್ಞಾನಿಗಳಿಗೂ ಅಚ್ಚರಿ..!

 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!