Daily Horoscope: ಮೇಲಧಿಕಾರಿಯ ಧೋರಣೆಗೆ ಕುಂಭ ಹೈರಾಣು

Published : Oct 11, 2022, 05:00 AM IST
Daily Horoscope: ಮೇಲಧಿಕಾರಿಯ ಧೋರಣೆಗೆ ಕುಂಭ ಹೈರಾಣು

ಸಾರಾಂಶ

11 ಅಕ್ಟೋಬರ್ 2022, ಸೋಮವಾರ ಕಟಕಕ್ಕೆ ಏಕಾಗ್ರತೆ ಕೊರತೆ, ಚಂಚಲತೆಯಿಂದ ಕೆಲಸದಲ್ಲಿ ಗುಣಮಟ್ಟ ಕಡಿಮೆಯಾಗುವುದು. ಸಿಂಹಕ್ಕೆ ಹಿತವಂಚಕರ ಮೋಸ ಬಯಲಾಗಿ ಆಘಾತ

ಮೇಷ(Aries): ಹಣದ ನಷ್ಟ ಉಂಟಾಗಬಹುದು. ನಿಮ್ಮ ಶತ್ರುಗಳು ನಿಮ್ಮ ಯಶಸ್ಸನ್ನು ಹಾಳುಗೆಡವಲು ಪ್ರಯತ್ನಿಸಬಹುದು. ಕಚೇರಿಯ ರಾಜಕೀಯಕ್ಕೆ ಹೈರಾಣಾಗುವಿರಿ. ಕೆಲಸ ಬಿಡುವ ಯೋಚನೆ ಕಾಡಬಹುದು. ಅಪರಿಚಿತರೊಂದಿಗೆ ಯಾವುದೇ ಸಂಭಾಷಣೆ ಅಥವಾ ಪ್ರಮುಖ ಕೆಲಸದ ಮೊದಲು ಸಂಪೂರ್ಣ ತನಿಖೆ ಮಾಡಿ. ದ್ರೋಹವಾಗುವ ಸಂಭವವಿದೆ. 

ವೃಷಭ(Taurus): ವೃತ್ತಿ ಬದಲಾವಣೆಗಾಗಿ ಪ್ರಯತ್ನ ಹೆಚ್ಚಿಸಲಿರುವಿರಿ. ಅವಕಾಶಗಳು ಕಾಣದೇ ಅಸಹಾಯಕತೆ ಕಾಡಬಹುದು. ಅಪಾಯಕಾರಿ ಕೆಲಸಗಳಿಂದ ದೂರವಿರಿ. ನಷ್ಟವನ್ನು ಹೊರತುಪಡಿಸಿ ಏನೂ ಸಿಗುವುದಿಲ್ಲ. ನಿಕಟ ಸಂಬಂಧಿಗಳೊಂದಿಗೆ ಸಹ ವಿವಾದಗಳು ಉಂಟಾಗಬಹುದು. ವ್ಯಾಪಾರದಲ್ಲಿ ಲಾಭ ಇರಲಿದೆ.

ಮಿಥುನ(Gemini): ಇಂದು ಹೆಚ್ಚಿನ ಸಮಯವನ್ನು ಮನೆ-ಕುಟುಂಬ ಮತ್ತು ಸಂಬಂಧಿಕರೊಂದಿಗೆ ಕಳೆಯಲಾಗುತ್ತದೆ. ನಿಕಟ ಸಂಬಂಧಿ ಅಥವಾ ಸ್ನೇಹಿತರೊಂದಿಗೆ ಸಂಘರ್ಷದ ಪರಿಸ್ಥಿತಿಯಿರಬಹುದು, ನಿಮ್ಮ ಕೋಪ ಮತ್ತು ಪ್ರಚೋದನೆಯನ್ನು ನಿಯಂತ್ರಿಸಿ. ಪತಿ ಪತ್ನಿಯರು ಪರಸ್ಪರ ಉತ್ತಮ ಬಾಂಧವ್ಯವನ್ನು ಹೊಂದಿರುತ್ತಾರೆ. 

ಕಟಕ(Cancer): ಏಕಾಗ್ರತೆ ಕೊರತೆಯಿಂದಾಗಿ ಕೆಲಸಗಳು ವಿಳಂಬವಾಗುವ ಜೊತೆಗೆ ಗುಣಮಟ್ಟದ ಕೊರತೆ ಕಾಡಲಿದೆ. ದೇಹವು ಅರೆನಿದ್ರಾವಸ್ಥೆ ಮತ್ತು ಆಯಾಸದಂತಹ ಪರಿಸ್ಥಿತಿಗಳನ್ನು ಹೊಂದಿರಬಹುದು. ವೃತ್ತಿ ಕ್ಷೇತ್ರದಲ್ಲಿ ಇನ್ನಷ್ಟು ಕಠಿಣ ಪರಿಶ್ರಮ ಮತ್ತು ಕೆಲವು ಬದಲಾವಣೆಗಳ ಅಗತ್ಯವಿದೆ. ವಾಹನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ.

Mangal Gochar 2022: ಮೇಷ, ಮಿಥುನ ಸೇರಿ ಈ 4 ರಾಶಿಗಳಿಗೆ ಕಾದಿದೆ ತೊಂದರೆಗಳ ಸರಮಾಲೆ..

ಸಿಂಹ(Leo): ನಿಮ್ಮ ಜೊತೆಯಿರುವವರ ಮೋಸ ಬಯಲಾಗಲಿದೆ. ಇದು ಆಘಾತ ತರಲಿದೆ. ವಿವಾಹ ವಿಳಂಬದಿಂದ ಕಿರಿಕಿರಿ ಹೆಚ್ಚಾಗಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಅನಿಸಿಕೆ ಮತ್ತು ಖ್ಯಾತಿಗೆ ಕಳಂಕ ಬರಬಹುದು. ಕೌಟುಂಬಿಕ ವಾತಾವರಣ ಸಂತೋಷವಾಗಿರಬಹುದು.

ಕನ್ಯಾ(Virgo): ಇಂದು ಯಾವುದೇ ಫೋನ್ ಕರೆಯನ್ನು ನಿರ್ಲಕ್ಷಿಸಬೇಡಿ. ಭಯ ಇಲ್ಲವೇ ದುರಾಸೆ ಕಾರಣಕ್ಕೆ ಒಳ್ಳೆಯ ಅವಕಾಶಗಳನ್ನು ಕಳೆದುಕೊಳ್ಳುವಿರಿ. ಕೀಳರಿಮೆಯಿಂದ ಹೊರ ಬರಲು ಪ್ರಯತ್ನ ಮಾಡದಿದ್ದಲ್ಲಿ ಸಾಕಷ್ಟನ್ನು ಕಳೆದುಕೊಳ್ಳಬೇಕಾದೀತು. ಆಯಾಸ ಕಾಡಬಹುದು. 

ತುಲಾ(Libra): ವೈಯಕ್ತಿಕ ಕಾರ್ಯಗಳಲ್ಲಿ ಯಶಸ್ಸು ಮನಸ್ಸಿಗೆ ನೆಮ್ಮದಿ ತರುತ್ತದೆ. ಅತ್ಯಂತ ಕಷ್ಟಕರವಾದ ಕಾರ್ಯಗಳನ್ನು ನಿರ್ಣಯದೊಂದಿಗೆ ಪೂರ್ಣಗೊಳಿಸುವ ಸಾಮರ್ಥ್ಯವನ್ನು ಹೊಂದಿರಿ. ಆತ್ಮಸ್ಥೈರ್ಯದಿಂದ ಕೆಲಸ ಮಾಡಿ, ನೀವು ಖಂಡಿತವಾಗಿಯೂ ಯಶಸ್ಸನ್ನು ಸಾಧಿಸುವಿರಿ. ನಿಮ್ಮ ಸಂಪರ್ಕಗಳ ವ್ಯಾಪ್ತಿಯನ್ನು ವಿಸ್ತರಿಸುವ ಅಗತ್ಯವಿದೆ. 

ವೃಶ್ಚಿಕ(Scorpio): ಅವಿವಾಹಿತರಿಗೆ ಯೋಗ್ಯ ಸಂಬಂಧ ಒದಗಿ ಬಂದು ಮನೆಯಲ್ಲಿ ಸಂತಸದ ವಾತಾವರಣ ಏರ್ಪಡುವುದು. ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚುವ ಜೊತೆಗೆ ಏಕಾಗ್ರತೆಯೂ ಹೆಚ್ಚುವುದು. ಅಲ್ಪಾವಧಿಯ ಷೇರು ವ್ಯವಹಾರಗಳು ನಷ್ಟ ತರಬಹುದು. 

30 ವರ್ಷಗಳ ನಂತರ ಮಕರದಲ್ಲಿ ಶನಿ ಮಾರ್ಗಿ; ಈ 3 ರಾಶಿಗಳಿಗೆ ಧನಬಲ

ಧನುಸ್ಸು(Sagittarius): ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಂತೆನಿಸಬಹುದು. ಕಾಲ ಎಲ್ಲಕ್ಕೂ ಪರಿಹಾರ ನೀಡುತ್ತದೆ ಎಂಬುದು ನೆನಪಿರಲಿ. ಮಕ್ಕಳ ಭಯ, ಕೀಳರಿಮೆ ಚಿಂತೆಯಾಗಿ ಕಾಡಬಹುದು. ಪರಿಹಾರ ಮಾರ್ಗಗಳತ್ತ ಗಮನ ಹರಿಸಿ. ಸಾಲ ಮಾಡಲು ಇಲ್ಲವೇ ಕೊಡಲು ಹೋಗಬೇಡಿ. 

ಮಕರ(Capricorn): ಬುದ್ಧಿ ಬಲವಿರುವುದರಿಂದ ಒಂದಾದ ಮೇಲೊಂದರಂತೆ ಕೆಲಸವನ್ನು ಸಮಾಧಾನವಾಗಿ ನಿರ್ವಹಿಸಿದರೆ  ದಿನಾಂತ್ಯಕ್ಕೆ ಖುಷಿ ಇರಲಿದೆ. ನಿರುದ್ಯೋಗಿಗಳಿಗೆ ಅವಕಾಶಗಳು ಅರಸಿ ಬರುವುವು. ಸಾಲ ಮಾಡಲು ಇಲ್ಲವೇ ಕೊಡಲು ಹೋಗಬೇಡಿ. ಉಳಿತಾಯ ಯೋಜನೆಗಳ ಬಗ್ಗೆ ಗಮನ ಹರಿಸಿ.

ಕುಂಭ(Aquarius): ಉದ್ಯೋಗಿಗಳಿಗೆ ಮೇಲಧಿಕಾರಿಗಳಿಂದ ಕಿರಿಕಿರಿ ತಪ್ಪಿದ್ದಲ್ಲ. ಎಲ್ಲರೂ ಇದ್ದೂ ಯಾರೂ ಅರ್ಥ ಮಾಡಿಕೊಳ್ಳುವುದಿಲ್ಲ ಎಂಬ ಕೊರಗು ಕಾಡುವುದು. ಮನೆಯ ಹಿರಿಯರ ಧೋರಣೆಗೆ ಬೇಸತ್ತು ಹೋಗುವಿರಿ. ಸುಸ್ತು, ಬೆನ್ನು ನೋವು ಕಾಡುವುದು. ವಿಶ್ರಾಂತಿ ಕೊರತೆ ಹಿಂಸೆ ತರುವುದು.

ಮೀನ(Pisces): ಪದೇ ಪದೆ ಕಾಡುವ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಯೋಗ, ಧ್ಯಾನ ಅಭ್ಯಾಸ ಮಾಡಿ. ನಂಬಿಕಸ್ಥರು ನಿಮ್ಮ ಬಳಿ ಸಹಾಯ ಯಾಚಿಸಿ ಬರಬಹುದು. ಕೈಲಾದ ಸಹಾಯ ಮಾಡಿ. ಪ್ರೇಮಿಗಳಿಗೆ ದಿನ ಚೆನ್ನಾಗಿದೆ. ಪೂರ್ವಪೀಡಿತ ಯೋಚನೆಯಿಂದ ಯಾರನ್ನೂ ಭೇಟಿಯಾಗಬೇಡಿ. 

PREV
Read more Articles on
click me!

Recommended Stories

ಇಂದು ಮಂಗಳವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಸೋಮವಾರ ಈ ರಾಶಿಗೆ ಶುಭ, ಅದೃಷ್ಟ