Daily Horoscope: ಈ ರಾಶಿಗೆ ಆದಾಯ ಕಡಿಮೆಯಿಂದ ಕದಡುವ ಮನಃಶಾಂತಿ

By Chirag Daruwalla  |  First Published Jun 21, 2023, 5:00 AM IST

21 ಜೂನ್ 2023, ಬುಧವಾರ ತುಲಾದ ವಿದ್ಯಾರ್ಥಿಗಳಿಗೆ ಒತ್ತಡ, ನಿಮ್ಮ ರಾಶಿಯ ಈ ದಿನದ ಫಲ ಹೇಗಿದೆ?


ಮೇಷ(Aries): ದಿನಚರಿಯನ್ನು ಅಂದುಕೊಂಡಂತೆ ಕಳೆಯಲಾಗದೆ ಕಿರಿಕಿರಿಯಾಗುವುದು. ಇಂದು ಯಾವುದೇ ರೀತಿಯ ಸಂದಿಗ್ಧ ಪರಿಸ್ಥಿತಿಯಲ್ಲಿ ಕುಟುಂಬ ಸದಸ್ಯರ ಸಹಕಾರವು ನಿಮಗೆ ಸಹಾಯ ಮಾಡುತ್ತದೆ. ಆತ್ಮಾವಲೋಕನದಲ್ಲಿ ಸ್ವಲ್ಪ ಸಮಯವನ್ನು ಕಳೆಯುವುದರಿಂದ ನಿಮ್ಮೊಳಗೆ ಹೊಸ ಶಕ್ತಿಯ ಸಂವಹನದ ಅನುಭವವಾಗುತ್ತದೆ. 

ವೃಷಭ(Taurus): ಇಂದು ನೀವು ಯಾವುದೇ ರಾಜಕೀಯ ಸಂಪರ್ಕದಿಂದ ಲಾಭ ಪಡೆಯಬಹುದು. ಸಮಯವನ್ನು ಸದುಪಯೋಗ ಪಡಿಸಿಕೊಳ್ಳಿ. ನಿಮ್ಮ ಜವಾಬ್ದಾರಿಗಳನ್ನು ಸರಿಯಾಗಿ ಪೂರೈಸಲು ನಿಮಗೆ ಸಾಧ್ಯವಾಗುತ್ತದೆ. ಆನ್‌ಲೈನ್ ಶಾಪಿಂಗ್ ಮತ್ತು ಮನರಂಜನೆಯಲ್ಲಿ ಕುಟುಂಬದೊಂದಿಗೆ ಮೋಜಿನ ಸಮಯ ಇರುತ್ತದೆ. 

Tap to resize

Latest Videos

ಮಿಥುನ(Gemini): ಈ ಬಾರಿ ಪ್ರಕೃತಿಯು ನಿಮಗಾಗಿ ಹೊಸ ಮಾರ್ಗವನ್ನು ಸಿದ್ಧಪಡಿಸುತ್ತಿದೆ. ಆದರೆ ಸರಿಯಾಗಿ ಸಮಯವನ್ನು ಬಳಸುವುದು ನಿಮ್ಮ ದಕ್ಷತೆಯ ಮೇಲೆ ಅವಲಂಬಿತವಾಗಿರುತ್ತದೆ. ಕೆಲವು ಹೂಡಿಕೆ ಯೋಜನೆಗಳು ಇರುತ್ತವೆ. ಮನೆಯ ಅನುಭವಿ ಸದಸ್ಯರ ಸಲಹೆ ಪಡೆಯಿರಿ. ಆಯಾಸ ಮತ್ತು ನಕಾರಾತ್ಮಕ ಆಲೋಚನೆಗಳು ನಿಮ್ಮ ಕೆಲಸದ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತವೆ.

ಕಟಕ(Cancer): ಸಾಮಾಜಿಕ ಮತ್ತು ಕೌಟುಂಬಿಕ ಚಟುವಟಿಕೆಗಳಲ್ಲಿ ನೀವು ಉತ್ತಮ ಕೊಡುಗೆಯನ್ನು ಹೊಂದಿರುತ್ತೀರಿ. ನಿಮ್ಮ ಯೋಗ್ಯತೆ ಮತ್ತು ಕೌಶಲ್ಯದ ಬಗ್ಗೆ ಜನರಿಗೆ ಮನವರಿಕೆಯಾಗುತ್ತದೆ. ಮನಸ್ಸಿನ ಶಾಂತಿಯನ್ನು ಪಡೆಯಲು ನಿಮ್ಮೊಂದಿಗೆ ನೀವು ಸ್ವಲ್ಪ ಸಮಯ ಕಳೆಯುವುದು ಸಹ ಮುಖ್ಯವಾಗಿದೆ. ಆರೋಗ್ಯ ಕೊಂಚ ಕೈ ಕೊಡುವುದು.

Kedarnath Dham ಬಗ್ಗೆ 5 ಆಸಕ್ತಿಕರ ಸಂಗತಿಗಳು

ಸಿಂಹ(Leo): ಆದಾಯ ಕಡಿಮೆಯಾಗುವುದರಿಂದ ಮನಸ್ಸು ಕೊಂಚ ಅಸಮಾಧಾನಗೊಳ್ಳಲಿದೆ. ಈ ಸಮಯದಲ್ಲಿ ತಾಳ್ಮೆ ಅಗತ್ಯ. ನಿಮ್ಮ ಭವಿಷ್ಯದ ಯೋಜನೆಗಳನ್ನು ರಹಸ್ಯವಾಗಿಡಿ; ಇಲ್ಲದಿದ್ದರೆ ಬೇರೆಯವರು ಇದರ ಲಾಭ ಪಡೆಯಬಹುದು. ಕೆಲಸದ ಸ್ಥಳದಲ್ಲಿ ಏನು ನಡೆಯುತ್ತಿದೆ ಎಂಬುದರ ಮೇಲೆ ಗಮನ ಕೇಂದ್ರೀಕರಿಸಿ. ಕೌಟುಂಬಿಕ ವಾತಾವರಣ ಮಧುರವಾಗಿ ಇರಲಿದೆ.

ಕನ್ಯಾ(Virgo): ಮನಸ್ಸಿನಲ್ಲಿ ನಕಾರಾತ್ಮಕ ಭಾವನೆಗಳು ಬರಬಹುದು. ಇದು ಕೇವಲ ನಿಮ್ಮ ಅತಿಯಾದ ಯೋಚನೆ ಇರಬಹುದೇ ಪರಿಶೀಲಿಸಿ. ಸಂಬಂಧಗಳಲ್ಲಿ ಮಾಧುರ್ಯವನ್ನು ಕಾಪಾಡಿಕೊಳ್ಳಿ. ಅಹಿತಕರ ಚಟುವಟಿಕೆಗಳಿಗೆ ಗಮನ ಕೊಡಬೇಡಿ. ಪ್ರಸ್ತುತ ವ್ಯಾಪಾರ ಚಟುವಟಿಕೆಗಳು ನಿಧಾನವಾಗಬಹುದು. 

ತುಲಾ(Libra): ಯಾವುದೇ ಯೋಜನೆಯಲ್ಲಿ ಯಶಸ್ಸನ್ನು ಪಡೆಯುವ ವಿಷಯವಾಗಿ ವಿದ್ಯಾರ್ಥಿಗಳು ಒತ್ತಡವನ್ನು ಹೊಂದಿರುತ್ತಾರೆ. ಪ್ರಯತ್ನವಿದ್ದಲ್ಲಿ ಮಾತ್ರ ಫಲ ಎಂದು ನೆನಪಿಡಿ. ವ್ಯಾಪಾರಿಗಳು ನಿಮ್ಮ ವ್ಯವಹಾರಗಳ ಮೇಲೆ ಹಿಡಿತ ಸಾಧಿಸಿ. ಯಾರೊಂದಿಗೂ ವಾದಕ್ಕೆ ಇಳಿಯಬೇಡಿ. ಇಂದಿನ ವ್ಯಾಪಾರದಲ್ಲಿ ಪರಿಸ್ಥಿತಿಗಳು ಸ್ವಲ್ಪ ಅನುಕೂಲಕರವಾಗಿರುತ್ತದೆ. 
  
ವೃಶ್ಚಿಕ(Scorpio): ಯುವಕರು ದುಶ್ಚಟಗಳಿಂದ ದೂರವಿರಬೇಕು. ಇಲ್ಲದಿದ್ದರೆ ಅದು ಅವರ ವ್ಯಕ್ತಿತ್ವದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುವಾಗ ಹೆಚ್ಚಿನ ಚರ್ಚೆಯ ಅಗತ್ಯವಿದೆ. ವ್ಯವಹಾರದಲ್ಲಿ ನಿಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಕಷ್ಟಪಡುವುದು ಅವಶ್ಯಕ. ಪತಿ ಪತ್ನಿಯರ ನಡುವೆ ಮಧುರವಾದ ವಿವಾದ ಉಂಟಾಗಬಹುದು. 

ಧನುಸ್ಸು(Sagittarius): ಮನೆ-ಕುಟುಂಬದಲ್ಲಿ ಸರಿಯಾದ ಸಮನ್ವಯವನ್ನು ಕಾಪಾಡಿಕೊಳ್ಳಲಾಗುವುದು. ಮಾನಸಿಕವಾಗಿ ಹಾಗೂ ದೈಹಿಕವಾಗಿ ಆರೋಗ್ಯವಾಗಿರುವುದು ಮುಖ್ಯ. ಅತಿಯಾದ ಕೆಲಸದ ಕಾರಣದಿಂದಾಗಿ ನಿಮ್ಮ ಕುಟುಂಬ ಸದಸ್ಯರಿಗೆ ಹೆಚ್ಚಿನ ಸಮಯವನ್ನು ನೀಡಲು ನಿಮಗೆ ಸಾಧ್ಯವಾಗುವುದಿಲ್ಲ. 

ಕರಾಗ್ರೇ ವಸತೇ.. ಬೆಳಗ್ಗೆ ಎದ್ದು ಕೈ ನೋಡಿಕೊಳ್ಳೋದು ಏಕೆ?

ಮಕರ(Capricorn): ದಿನದ ಆರಂಭದಲ್ಲಿ ನಿಮ್ಮ ವಿಶೇಷ ಕಾರ್ಯಗಳನ್ನು ಮುಗಿಸಲು ಪ್ರಯತ್ನಿಸಿ. ಆತ್ಮೀಯ ಗೆಳೆಯನ ಭೇಟಿಯಿಂದ ಮನಸ್ಸು ಸಂತೋಷವಾಗುತ್ತದೆ. ವಿಶೇಷ ಸಂಬಂಧದ ಮೂಲಕ ನಿಮ್ಮ ನೆಚ್ಚಿನ ವಸ್ತುವನ್ನು ಉಡುಗೊರೆಯಾಗಿ ಸ್ವೀಕರಿಸಲಾಗುತ್ತದೆ. ಧೈರ್ಯ ಮತ್ತು ಸಾಹಸದಿಂದ ಕಠಿಣ ಕೆಲಸವನ್ನು ಸುಲಭವಾಗಿ ಮಾಡಬಹುದು.

ಕುಂಭ(Aquarius): ಇಂದು ಯಾವುದೇ ದೊಡ್ಡ ಎಡವಟ್ಟು ನಿವಾರಣೆಯಾಗಿ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಅನುಭವಿಗಳ ಮಾರ್ಗದರ್ಶನದಿಂದ ಸಮಸ್ಯೆ ಪರಿಹಾರವಾಗುತ್ತದೆ. ಹಿಂದೆ ಯೋಚಿಸಿದ ಯೋಜನೆಯೊಂದಿಗೆ ಮುಂದುವರಿಯುವ ಸಮಯ ಈಗ. ಮನೆಯ ಹಿರಿಯರ ಆಶೀರ್ವಾದ ಮತ್ತು ಸಹಕಾರ ದೊರೆಯಲಿದೆ. 

ಮೀನ(Pisces): ಭೂಮಿಗೆ ಸಂಬಂಧಿಸಿದ ಕೆಲಸಗಳಲ್ಲಿ ಪ್ರಗತಿ ಕಂಡುಬರಲಿದೆ. ನೆರೆಹೊರೆಯವರೊಂದಿಗೆ ಸಂಬಂಧವನ್ನು ಹಾಳು ಮಾಡಿಕೊಳ್ಳಬೇಡಿ. ಇದರಿಂದ ಸಮಾಜದಲ್ಲಿ ನಿಮ್ಮ ಇಮೇಜ್ ಹಾಳಾಗಬಹುದು. ಕಾಲಾ ನಂತರದಲ್ಲಿ ವಿಷಯಗಳು ಉತ್ತಮಗೊಳ್ಳುತ್ತವೆ.

click me!