Daily Horoscope: ಇಂದು ಈ ರಾಶಿಯವರ ‘ಬಂಧು’ ದೂರಾಗುವರು; ಸಾವಿನ ಸುದ್ದಿ ಸಾಧ್ಯತೆ..!

By Chirag Daruwalla  |  First Published Jul 21, 2023, 5:00 AM IST

ಇಂದು 21ನೇ ಜುಲೈ 2023 ಶುಕ್ರವಾರ, ನಿಮ್ಮ ರಾಶಿಯ ಈ ದಿನದ ಫಲ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. 12 ರಾಶಿ ಚಕ್ರಗಳ ಭವಿಷ್ಯವನ್ನು ಇಲ್ಲಿ ತಿಳಿಸಲಾಗಿದೆ.
 


ಮೇಷ ರಾಶಿ  (Aries) : ಮಕ್ಕಳ ವಿದ್ಯಾಭ್ಯಾಸ ಅಥವಾ ಮದುವೆಯ ಬಗ್ಗೆ ಚರ್ಚೆ ನಡೆಯಲಿದೆ. ನಿಮ್ಮ ಒಳ್ಳೆಯ ಸ್ವಭಾವದಿಂದಾಗಿ ಜನರು ನಿಮ್ಮನ್ನು ಗೌರವಿಸುತ್ತಾರೆ. ವೃತ್ತಿಜೀವನದ ವಿಚಾರದಲ್ಲಿ ಎಚ್ಚರಿಕೆ ವಹಿಸಿ. ಮನೆ-ಕುಟುಂಬ ಹಾಗೂ ಆರೋಗ್ಯ ಚೆನ್ನಾಗಿರಬಹುದು.

ವೃಷಭ ರಾಶಿ  (Taurus): ಇಂದು ನೀವು ಬ್ಯಾಂಕ್ ಹೂಡಿಕೆಯಂತಹ ಹಣಕಾಸಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದು. ಹಳೆಯ ಸ್ನೇಹಿತನನ್ನು ಇದ್ದಕ್ಕಿದ್ದಂತೆ ಭೇಟಿಯಾಗುವಿರಿ. ಕುಟುಂಬದ ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳು ಸಹ ಉದ್ಭವಿಸಬಹುದು. ಪ್ರತಿ ಕೆಲಸವನ್ನು ಗಂಭೀರವಾಗಿ ತೆಗೆದುಕೊಳ್ಳಿ. 

Tap to resize

Latest Videos

undefined

ಮಿಥುನ ರಾಶಿ (Gemini) : ಆಸ್ತಿ ವಿವಾದಗಳನ್ನು ಮಧ್ಯಸ್ಥಿಕೆಯಿಂದ ಬಗೆಹರಿಸಿಕೊಳ್ಳಬಹುದು. ಆರ್ಥಿಕ ಪರಿಸ್ಥಿತಿಗಳು ಮೊದಲಿಗಿಂತ ಉತ್ತಮವಾಗಿರುತ್ತವೆ. ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮವನ್ನೂ ಆಯೋಜಿಸಬಹುದು. ಆಪ್ತ ಸ್ನೇಹಿತನಿಗೆ ಹಣವನ್ನು ಸಾಲವಾಗಿ ನೀಡಬೇಕಾಗಬಹುದು.

ಕಟಕ ರಾಶಿ  (Cancer) :  ಕಠಿಣ ಪರಿಶ್ರಮದಿಂದ ನೀವು ಬಯಸಿದ ಎಲ್ಲವನ್ನೂ ಸಾಧಿಸುವಿರಿ. ಯಾವುದೇ ಹೂಡಿಕೆ ಸಂಬಂಧಿತ ವ್ಯವಹಾರದಲ್ಲಿ ನೀವು ಜಾಗರೂಕರಾಗಿದ್ದರೆ ಉತ್ತಮ. ಕುಟುಂಬ ಜೀವನದ ನಡುವೆ ಉತ್ತಮ ಸಮತೋಲನವನ್ನು ಕಾಪಾಡಿಕೊಳ್ಳಿ. 

ಕಷ್ಟ ಅಷ್ಟೇ ಅಲ್ಲ, ಸಂಪತ್ತನ್ನೂ ನೀಡುತ್ತಾನೆ ಶನಿದೇವ; ಈ ಮೂರು ರಾಶಿಯವರಿಗೆ ಇನ್ಮುಂದೆ ಹ್ಯಾಪಿ ಲೈಫ್..!

 

ಸಿಂಹ ರಾಶಿ  (Leo) :  ಸಹೋದರರೊಂದಿಗಿನ ಸಂಬಂಧದಲ್ಲಿಯೂ ಮಾಧುರ್ಯ ಬೆಳೆಯುತ್ತದೆ. ಐಷಾರಾಮಿ ವಸ್ತುಗಳನ್ನು ಖರೀದಿಸಲು ಸಾಧ್ಯವಿದೆ. ಕೆಲವು ಲಾಭದಾಯಕ ವ್ಯಾಪಾರ ಯೋಜನೆಗಳು ಇರಬಹುದು. ಪ್ರೀತಿಪಾತ್ರರನ್ನು ಭೇಟಿಯಾಗುವುದು, ನಿಮಗೆ ಸಂತೋಷವನ್ನು ನೀಡಬಹುದು.

ಕನ್ಯಾ ರಾಶಿ (Virgo) :  ಇಂದು ಸ್ನೇಹಿತರೊಂದಿಗೆ ಸಮಯ ಕಳೆಯಬಹುದು. ಯಾವುದೇ ಹೊರಗಿನವರೊಂದಿಗೆ ಅಂತರ ಕಾಯ್ದುಕೊಳ್ಳಿ. ದುರಸ್ತಿ ಕೆಲಸದಲ್ಲಿ ಹಣವನ್ನು ಖರ್ಚು ಮಾಡಬಹುದು. ಪತಿ ಪತ್ನಿಯರ ನಡುವೆ ಪರಸ್ಪರ ಸಾಮರಸ್ಯ ಇರಲಿದೆ. ಆರೋಗ್ಯ ಸ್ವಲ್ಪ ದುರ್ಬಲವಾಗಬಹುದು.

ತುಲಾ ರಾಶಿ (Libra) : ನಿಮ್ಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಿ. ಕುಟುಂಬ ಸದಸ್ಯರ ನಡುವೆ ಸಂತೋಷದ ವಾತಾವರಣ ಇರಲಿದೆ. ವ್ಯಾಪಾರ ಸಂಬಂಧಿ ಚಟುವಟಿಕೆಗಳಲ್ಲಿ ಚುರುಕು ಇರಲಿದೆ. ದಾಂಪತ್ಯದಲ್ಲಿ ಮಧುರತೆ ಇರಲಿದೆ. ಆರೋಗ್ಯ ಚೆನ್ನಾಗಿರಬಹುದು.

ವೃಶ್ಚಿಕ ರಾಶಿ (Scorpio) :    ಇಂದು ಸಾರ್ವಜನಿಕ ಕಲ್ಯಾಣ ಮತ್ತು ಸಮಾಜ ಸೇವಾ ಕಾರ್ಯಗಳಿಗೆ ಹಣವನ್ನು ಖರ್ಚು ಮಾಡಬಹುದು. ನಿಮ್ಮ ಯಾವುದೇ ಗುರಿಗಳನ್ನು ಸಾಧಿಸುವುದು ಸಹ ಇಂದು ಸಾಧ್ಯ. ಕೆಲಸದಲ್ಲಿ ಕೆಲವು ಅಡಚಣೆಗಳು ಅಥವಾ ಕಿರುಕುಳವೂ ಇರಬಹುದು, ಎಚ್ಚರದಿಂದಿರಿ.

ಧನು ರಾಶಿ (Sagittarius):   ಇಂದು ಹೆಚ್ಚಿನ ಸಮಯವನ್ನು ಮನೆಯಲ್ಲಿಯೇ ಕಳೆಯಲಾಗುವುದು. ಇಂದು ಗೌರವ ಮತ್ತು ಖ್ಯಾತಿ ಹೆಚ್ಚಲಿದೆ. ವಿದ್ಯಾರ್ಥಿಗಳ ಮನಸ್ಸು ಅಧ್ಯಯನದ ಕಡೆ ಇರಲ್ಲ. ಅನಾರೋಗ್ಯವು ಕಿರಿಕಿರಿಯನ್ನು ಉಂಟು ಮಾಡಬಹುದು.

ಮಕರ ರಾಶಿ (Capricorn) :  ಕುಟುಂಬದವರ ನೆರವಿನಿಂದ ಸ್ಥಗಿತಗೊಂಡ ಕಾರ್ಯಗಳು ಪೂರ್ಣಗೊಳ್ಳಲಿವೆ. ಸಾಮಾಜಿಕ ಜೀವನದಲ್ಲಿ ಗೌರವವೂ ಹೆಚ್ಚಾಗುತ್ತದೆ.
ಇತರ ಜನರ ಭಾವನೆಗಳನ್ನು ಗೌರವಿಸುವುದರಿಂದ ಜನರು ನಿಮ್ಮ ಮೇಲೆ ನಂಬಿಕೆಯನ್ನು ಬೆಳೆಸಬಹುದು. ತರಾತುರಿಯಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಬದಲಾಯಿಸಬೇಕಾಗಿದೆ.

ಬುಧಾದಿತ್ಯ ಸಂಯೋಗ; ಈ ನಾಲ್ಕು ರಾಶಿಯವರಿಗೆ ರಾಜಯೋಗ, ಹಣದ ಮಳೆ

 

ಕುಂಭ ರಾಶಿ (Aquarius):  ರಾಜಕೀಯ ಕ್ಷೇತ್ರದಲ್ಲಿ ಪ್ರಾಬಲ್ಯ ಹೆಚ್ಚಾಗಲಿದೆ. ಹೊಸ ಜನರ ಸಂಪರ್ಕವೂ ಆಗಲಿದೆ. ನಿಕಟ ಸಂಬಂಧಿಯಿಂದ ಕೆಲವು ದುಃಖದ ಸುದ್ದಿಗಳು ಬರಬಹುದು. ಪಿತ್ರಾರ್ಜಿತ ಭೂವಿವಾದವೂ ಇದ್ದಕ್ಕಿದ್ದಂತೆ ಬರಬಹುದು. ಆರೋಗ್ಯವು ಅತ್ಯುತ್ತಮವಾಗಿರಬಹುದು.

ಮೀನ ರಾಶಿ  (Pisces):  ರಾಜಕೀಯ ಮತ್ತು ನ್ಯಾಯಾಲಯದ ಕೆಲಸಗಳಲ್ಲಿ ಯಶಸ್ಸನ್ನು ಸಾಧಿಸಬಹುದು. ಭೂಮಿಗೆ ಸಂಬಂಧಿಸಿದ ಕಾಮಗಾರಿಗಳು ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ನಿಮ್ಮ ಕೆಲವು ರಹಸ್ಯಗಳೂ ಬಹಿರಂಗವಾಗಬಹುದು. ಯಾವುದೇ ಚರ್ಮದ ಅಲರ್ಜಿ ಸಂಭವಿಸಬಹುದು.


 

click me!