ಈ ರಾಶಿಯ ಪತಿ ಪತ್ನಿಯರ ನಡುವೆ ಉದ್ವಿಗ್ನತೆ,ಜಗಳ

By Chirag Daruwalla  |  First Published Jan 8, 2024, 5:00 AM IST

ಇಂದು 7 ನೇ ಜನವರಿ 2023 ಸೋಮವಾರ, ನಿಮ್ಮ ರಾಶಿಯ ಈ ದಿನದ ಫಲ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. 12 ರಾಶಿ ಚಕ್ರಗಳ ಭವಿಷ್ಯವನ್ನು ಇಲ್ಲಿ ತಿಳಿಸಲಾಗಿದೆ.


ಮೇಷ ರಾಶಿ  (Aries) : ನಿಮ್ಮ ಆತ್ಮವಿಶ್ವಾಸ ಮತ್ತು ದಕ್ಷತೆಯಿಂದ ಯಾವುದೇ ಪರಿಸ್ಥಿತಿಯನ್ನು ಉತ್ತಮವಾಗಿ ನಿರ್ವಹಿಸುವುರಿ. ಯಾವುದೇ ರೀತಿಯ ಆಸ್ತಿಗೆ ಸಂಬಂಧಿಸಿದ ವಿಷಯ ಇದ್ದರೆ, ಅದರತ್ತ ಗಮನಹರಿಸಿ ನಿಮಗೆ ಯಶಸ್ಸು ಕೂಡ ಸಿಗಲಿದೆ. ಪತಿ-ಪತ್ನಿಯರ ನಡುವೆ ಕಲಹ ಉಂಟಾಗಬಹುದು.

ವೃಷಭ ರಾಶಿ  (Taurus):   ಇಂದು ಹೆಚ್ಚಿನ ಸಮಯವನ್ನು ಮನೆಯ ಅಲಂಕಾರ ಮತ್ತು ನಿರ್ವಹಣೆಗೆ ಸಂಬಂಧಿಸಿದ ಕೆಲಸಗಳಲ್ಲಿ ಕಳೆಯುವಿರಿ. ವಿದ್ಯಾರ್ಥಿಗಳಿಗೆ ತಮ್ಮ ಇಚ್ಛೆಯಂತೆ ಯೋಜನೆಯಲ್ಲಿ ಯಶಸ್ಸನ್ನು ಪಡೆಯಲು ಆಗಲ್ಲ. ಕುಟುಂಬ ವಾತಾವರಣ ಸಂತೋಷವಾಗಿ ಇರಲಿದೆ.

Tap to resize

Latest Videos

undefined

ಮಿಥುನ ರಾಶಿ (Gemini) :  ಇಂದು ನಿಮ್ಮ ಬಹುತೇಕ ಕೆಲಸಗಳು ಸರಿಯಾಗಿ ಆಗಲಿವೆ. ಇದರಿಂದ ನಿಮ್ಮ ಮನಸ್ಸು ನಿರಾಳವಾಗಿರುತ್ತದೆ. ಉತ್ತಮ ಜನರೊಂದಿಗೆ ಸಂಬಂಧಗಳು ಬೆಳೆಯಲಿದೆ. ಕೆಲವು ಜನರು ಅಸೂಯೆಯಿಂದ ನಿಮ್ಮ ಬೆನ್ನಿನ ಹಿಂದೆ ನಿಮ್ಮನ್ನು ಟೀಕಿಸಬಹುದು. ಅಂತಹವರಿಂದ ದೂರವಿರಿ.

ಕಟಕ ರಾಶಿ  (Cancer) : ಮನೆಗೆ ಸಂಬಂಧಿಕರ ಆಗಮನದಿಂದ ಖುಷಿ ಇರಲಿದೆ. ನಿಮ್ಮ ಮಗುವಿನಿಂದ ಕೆಲವು ಒಳ್ಳೆಯ ಸುದ್ದಿ ಬರಬಹುದು. ನಿಮ್ಮ ಪ್ರತಿಸ್ಪರ್ಧಿಗಳು ನಿಮ್ಮ ವಿರುದ್ಧ ಸಂಚು ಮಾಡಬಹುದು. ಆದ್ದರಿಂದ ಸಣ್ಣ ವಿಷಯಗಳನ್ನೂ ನಿರ್ಲಕ್ಷಿಸಬೇಡಿ. ಜಾಗರೂಕರಾಗಿರಿ.

ಸಿಂಹ ರಾಶಿ  (Leo) :  ಬೇರೆ ಜನರ ಬಗ್ಗೆ ಚಿಂತಿಸಬೇಡಿ, ನಿಮ್ಮ ಸ್ವಂತ ಕೆಲಸದ ಬಗ್ಗೆ ಗಮನ ಇರಲಿ. ಯಾವುದೇ ಯಶಸ್ಸನ್ನು ಸಾಧಿಸಿದರೆ ಆ ಜನರೇ ನಿಮ್ಮ ಕಡೆಗೆ ಬರುತ್ತಾರೆ. ಕೆಲವೊಮ್ಮೆ ನಿಮ್ಮ ಮನಸ್ಸು ಚಂಚಲವಾಗುತ್ತದೆ. ಆದ್ದರಿಂದ ನಿಮ್ಮ ಮನಸ್ಸನ್ನು ನಿಯಂತ್ರಿಸುವುದು ಬಹಳ ಮುಖ್ಯ. ಬಹುತೇಕ ನಿಮ್ಮ ಎಲ್ಲಾ ಕೆಲಸಗಳು ಸುಗಮವಾಗಿ ಮುಗಿಸಬಹುದು.

ಕನ್ಯಾ ರಾಶಿ (Virgo) : ಇಂದಿನ ಗ್ರಹಗಳ ಸಂಚಾರದಿಂದ ನಿಮಗೆ ಪ್ರಯೋಜನಕಾರಿ ಮತ್ತು ಸಂತೋಷದಾಯಕ ಆಗಲಿದೆ. ಆದ್ದರಿಂದ ನಿಮ್ಮ ಕೆಲಸಕ್ಕೆ ಗಮನ ಕೊಡಿ. ಮಕ್ಕಳ ಮೇಲೆ ನಿಗಾ ಇರಿಸಿ‌‌. ಅವರೊಂದಿಗೆ ಕೋಪಗೊಳ್ಳುವ ಬದಲು ಶಾಂತವಾಗಿ ವರ್ತಿಸಿ. ವ್ಯಾಪಾರ ಚಟುವಟಿಕೆಗಳು ಸ್ವಲ್ಪ ಸುಧಾರಿಸಲು ಪ್ರಾರಂಭವಾಗುತ್ತದೆ. ಕುಟುಂಬದೊಂದಿಗೆ ಮನರಂಜನೆಯಲ್ಲಿ ಸಮಯ ಕಳೆಯಬಹುದು.

ತುಲಾ ರಾಶಿ (Libra) :  ಸಮಯ ಮತ್ತು ಹಣೆಬರಹ ಇಂದು ನಿಮ್ಮ ಪರವಾಗಿ ಕೆಲಸ ಮಾಡುತ್ತದೆ. ಇಂದು ನೀವು ಕೈಗೆತ್ತಿಕೊಳ್ಳುವ ಕೆಲಸಗಳು ಸರಿಯಾಗಿ ಪೂರ್ಣಗೊಳ್ಳಲಿವೆ. ವಿದ್ಯಾರ್ಥಿಗಳು ಸ್ವಲ್ಪ ಯಶಸ್ಸನ್ನೂ ಸಾಧಿಸಬಹುದು. ಯಾವುದೇ ಡಾಕ್ಯುಮೆಂಟ್ ಅಥವಾ ಕಾಗದಕ್ಕೆ ಸಹಿ ಮಾಡುವ ಮೊದಲು ಸರಿಯಾಗಿ ಪರಿಶೀಲನೆ ಮಾಡಿ.

ವೃಶ್ಚಿಕ ರಾಶಿ (Scorpio) :  ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತವೆ. ಪ್ರಮುಖ ಅಥವಾ ರಾಜಕೀಯ ವ್ಯಕ್ತಿಯೊಂದಿಗೆ ಸಭೆ ನಡೆಯಲಿದೆ. ವಿದ್ಯಾರ್ಥಿಗಳು ಶ್ರಮಕ್ಕೆ ತಕ್ಕಂತೆ ಸರಿಯಾದ ಫಲಿತಾಂಶ ಪಡೆಯಬಹುದು. ಕೆಲವು ತಪ್ಪು ತಿಳುವಳಿಕೆಯಿಂದ ಪತಿ-ಪತ್ನಿಯರ ನಡುವೆ ಉದ್ವಿಗ್ನತೆ ಇರಲಿದೆ.

ಧನು ರಾಶಿ (Sagittarius):  ನಿಮ್ಮ ಹಣಕಾಸಿನ ಯೋಜನೆಗಳು ಇಂದು ಸಕ್ಸಸ್ ಆಗಲಿವೆ. ಹೂಡಿಕೆಗೆ ಸಂಬಂಧಿಸಿದ ಕೆಲಸಗಳಿಗೆ ಸಮಯ ಉತ್ತಮವಾಗಿದೆ. ಸಾಮಾಜಿಕ ಚಟುವಟಿಕೆಗಳ ಕಡೆಗೆ ಗಮನ ಇರಲಿದೆ.

ಮಕರ ರಾಶಿ (Capricorn):   ಇಂದು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ. ಇದರಿಂದ ನಿಮ್ಮ ವ್ಯಕ್ತಿತ್ವ ಹೆಚ್ಚಾಗಲಿದೆ . ಬಹುತೇಕ ಬಾಕಿ ಉಳಿದ ಕೆಲಸ ಪೂರ್ಣಗೊಳಿಸಬಹುದು. ನಿಮ್ಮ ಸ್ವಂತ ಸ್ನೇಹಿತರಲ್ಲಿ ಕೆಲವರು ನಿಮಗೆ ತೊಂದರೆ ಉಂಟುಮಾಡಬಹುದು.

ಕುಂಭ ರಾಶಿ (Aquarius):  ನಿಮ್ಮ ಕಾರ್ಯಗಳ ಮೇಲೆ ಗಮನವನ್ನು ಕೇಂದ್ರೀಕರಿಸಿ, ಇದರಿಂದ ನೀವು ಯಶಸ್ಸನ್ನು ಪಡೆಯಬಹುದು. ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ, ಇದರಿಂದ ಕೆಲವು ಜನರು ಇಂದು ನಿಮಗೆ ತೊಂದರೆ ಉಂಟುಮಾಡಬಹುದು. ಹಿರಿಯರ ಸಲಹೆಗೆ ಗಮನ ಕೊಡಿ. ಕೌಟುಂಬಿಕ ಜೀವನ ಸುಖಕರವಾಗಿರಬಹುದು. ಮಧುಮೇಹ ಮತ್ತು ರಕ್ತದೊತ್ತಡ ಇರುವವರು ವಿಶೇಷ ಕಾಳಜಿ ವಹಿಸಿ.

ಮೀನ ರಾಶಿ  (Pisces):  ಇಂದು ನಿಮಗೆ ಕೆಲವು ಯಶಸ್ಸಿನ ಅವಕಾಶಗಳು ಸಿಗಲಿದೆ. ಭೂಮಿ-ಆಸ್ತಿಗೆ ಸಂಬಂಧಿಸಿದ  ವ್ಯವಹಾರಗಳಿಗೆ ಉತ್ತಮ. ವಿಶೇಷ ವ್ಯಕ್ತಿಯೊಂದಿಗಿನ ಸಭೆಯು ನಿಮಗೆ ತುಂಬಾ ಸಂತೋಷವನ್ನು ನೀಡುತ್ತದೆ. ಕೌಟುಂಬಿಕ ವಾತಾವರಣ ಆಹ್ಲಾದಕರವಾಗಿರುತ್ತದೆ

click me!