Daily Horoscope: ಕುಂಭಕ್ಕಿಂದು ಅನಿರೀಕ್ಷಿತ ಸಿಹಿ ಸುದ್ದಿ

By Suvarna News  |  First Published Apr 8, 2022, 5:00 AM IST

8 ಏಪ್ರಿಲ್ 2022, ಶುಕ್ರವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಮೀನಕ್ಕೆ ಕಾರ್ಯಗಳಲ್ಲಿ ಯಶಸ್ಸು


ಮೇಷ(Aries): ಕಾರ್ಯರಂಗದಲ್ಲಿ ನಿಮ್ಮ ಕೀರ್ತಿಯು ಮೇಲ್ಮಟ್ಟಕ್ಕೆ ಏರುವುದು. ವ್ಯಾಪಾರ, ಉದ್ಯೋಗಗಳಲ್ಲಿ ಪ್ರಗತಿ ಹೆಚ್ಚಲಿದೆ. ದಾಂಪತ್ಯ ಜೀವನದಲ್ಲಿ ಕಿರಿಕಿರಿ ತಪ್ಪದು. ಸಂಚಾರದಲ್ಲಿ ತೊಂದರೆ ಇರುವ ಕಾರಣ ಜಾಗ್ರತೆ ವಹಿಸುವುದು ಉತ್ತಮ. ಮಹಾಲಕ್ಷ್ಮೀ ಆರಾಧನೆ ಮಾಡಿ. 

ವೃಷಭ(Taurus): ಅನಿರೀಕ್ಷಿತ ಮಂಗಲಕಾರ್ಯದಲ್ಲಿ ಆಸಕ್ತಿ ತೋರಿ ಬರುತ್ತದೆ. ನಿಮ್ಮಿಂದ ಅಪರಿಚಿತರಿಗೆ ನೆರವು ದೊರಕುವ ಅವಕಾಶಗಳು ಎದುರಾಗುತ್ತವೆ. ನೆರವಾಗುವುದರಿಂದ ಮನಸ್ಸಿಗೆ ನೆಮ್ಮದಿ ಲಭ್ಯ, ಕೌಟುಂಬಿಕ ಸಮಸ್ಯೆಗಳು ಪರಿಹಾರ ಕಾಣಲಿವೆ. ದುರ್ಗಾ ಅಷ್ಟೋತ್ತರ ಪಠಿಸಿ

Latest Videos

undefined

ಮಿಥುನ(Gemini): ಪತ್ನಿಯ ಮನಸ್ಸಿಗೆ ನೋವು ನೀಡಿದರೆ ಉದ್ಯಮದಲ್ಲಿ ಏಳ್ಗೆ ಕಾಣಲು ಸಾಧ್ಯವಿಲ್ಲ. ಸಂಗಾತಿಯನ್ನು ಪ್ರೀತಿಯಿಂದ ನೋಡಿಕೊಳ್ಳಿ. ಕುಟುಂಬವರ್ಗದವರಿಂದ ಕಾರ್ಯವೈಖರಿಗೆ ಟೀಕೆಗಳು ಬರಬಹುದು. ಸರಿತಪ್ಪುಗಳನ್ನು ಪರಾಮರ್ಶಿಸಿ ಮುಂದುವರಿಯಿರಿ. ಹಸುವಿಗೆ ಹುಲ್ಲು ತಿನ್ನಿಸಿ. 

ಕಟಕ(Cancer): ನೂತನ ವ್ಯಾಪಾರಗಳ ಮೂಲಕ ಹೇರಳ ಧನಲಾಭ, ಮಾತೃವಿಗೆ ಅನಾರೋಗ್ಯ ಕಾಡಬಹುದು. ಸಕಾಲದಲ್ಲಿ ಚಿಕಿತ್ಸೆ ಕೊಡಿಸಿ. ಹಿರಿಯರ ಮಾತನ್ನು ಗೌರವಿಸಿ. . ಮೈ ಕೈ ನೋವಿನಂಥ ಸಮಸ್ಯೆಗಳು ಕಿರಿ ಕಿರಿ ತರಬಹುದು. ಲಲಿತಾ ಸಹಸ್ರನಾಮ ಪಠಣ ಮಾಡಿ. 

ಸಿಂಹ(Leo): ವಾಹನದಲ್ಲಿ ಪ್ರಯಾಣಿಸುವಾಗ ಬಹಳ ಎಚ್ಚರಿಕೆ ಅಗತ್ಯ. ಧರ್ಮ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಮುಂಬಡ್ತಿಯ ಜೊತೆಗೆ ಸ್ಥಾನಪಲ್ಲಟ ಯೋಗವೂ ಇದೆ. ಕೃಷಿ ಕಾರ್ಯದಲ್ಲಿ ತಡೆಯುಂಟಾಗಬಹುದು. ಅಮ್ಮನವರಿಗೆ ಕುಂಕುಮಾರ್ಚನೆ ಮಾಡಿಸಿ.

ವೀಳ್ಯದೆಲೆ ಹೀಗೆ ಬಳಸಿದ್ರೆ ಹಣ ನಿಮ್ಮತ್ತ ಹರಿದು ಬರುತ್ತದೆ..

ಕನ್ಯಾ(Virgo): ಸಾಮಾನ್ಯ ಸೌಖ್ಯದ ದಿನ. ಕಾರ್ಯಕ್ಷೇತ್ರದಲ್ಲಿ ನಿರೀಕ್ಷಿತ ಹಣ ಬಾರದೇ ಹೋಗಬಹುದು. ಅನಿರೀಕ್ಷಿತ ಧನ ವ್ಯಯವಾಗುವುದು. ಕುಟುಂಬದೊಂದಿಗೆ ಪ್ರಯಾಣ ಯೋಗವಿದೆ. ಮನೆಯಲ್ಲಿ ಶುಭ ಕಾರ್ಯಗಳು ಜರುಗಬಹುದು. ತಾಯಿಯ ಕೈಯಿಂದ ಸಿಹಿ ತಿನ್ನಿ. 

ತುಲಾ(Libra): ಬಂಧುಬಳಗದ ಕಡೆಯಿಂದ ಪ್ರಶಂಸೆ ಕೇಳಿಬಂದು ಉಲ್ಲಾಸಿತರಾಗುವಿರಿ. ಸಂಗಾತಿಯ ಬೆಂಬಲದಿಂದ ತೆಗೆದುಕೊಂಡ ನಿರ್ಧಾರಗಳೆಲ್ಲವೂ ಸಫಲ ಫಲಿತಾಂಶ ನೀಡುವುವು.  ಮನೆ ಕೆಲಸಗಳು ಹೆಚ್ಚು ಶ್ರಮದಾಯಕ ಎನಿಸುವುದು. ಪಕ್ಷಿಗಳಿಗೆ ಕಾಳುಗಳನ್ನು ಹಾಕಿ. 

ವೃಶ್ಚಿಕ(Scorpio): ಮನೋಬಲ ಹೆಚ್ಚಿರುವುದರಿಂದ ಅಲ್ಪ ಶ್ರಮದಿಂದ ಕಾರ್ಯ ಸಾಧನೆಯಾಗುವುದು. ಕೋಪದ ಕೈಗೆ ಬುದ್ಧಿ ಕೊಡಬೇಡಿ. ಸ್ನೇಹಿತರು ಸಾಲ ಕೇಳಬಹುದು. ಕೊಟ್ಟು ಕೋಡಂಗಿ ಆಗುವ ಬದಲು ಕೊಡದೇ ಇರುವುದೇ ಉತ್ತಮ. ಲಲಿತಾ ಸಹಸ್ರನಾಮ ಪಠಣ ಮಾಡಿ. 

Hanuman Jayantiಯಂದು ಹೀಗೆ ಮಾಡಿದ್ರೆ ಅದೃಷ್ಟ ನಿಮ್ಮದೇ

ಧನುಸ್ಸು(Sagittarius): ಮಕ್ಕಳ ಪ್ರೀತಿಯ ಬಲದಲ್ಲಿ ನೀವು ಅಂದುಕೊಂಡ ಕಾರ್ಯ ನೆರವೇರುವುದು. ಯಾರೋ ಮನೆಯವರ ಬಗ್ಗೆ ತಪ್ಪು ಮಾತನಾಡುತ್ತಿದ್ದಾರೆ ಎಂದರೆ ಹಿತ್ತಾಳೆ ಕಿವಿಯವರಂತೆ ಕೇಳಿಸಿಕೊಳ್ಳಬೇಡಿ. ಮನೆಯ ಸದಸ್ಯರ ಪರ ನಿಂತು ಮಾತಾಡಿ. ಶಾರದಾಂಬೆಯ ಸ್ಮರಣೆ ಮಾಡಿ. 

ಮಕರ(Capricorn): ಹೊಸ ರುಚಿ ಸವಿಯುವ ಅವಕಾಶ. ಮಾತು, ಹರಟೆ ಹೆಚ್ಚು. ಹಿರಿಯರ ಸಲಹೆಗಳನ್ನು ಪರಿಗಣಿಸಿ. ಅವಿವಾಹಿತರಿಗೆ ಕಂಕಣ ಬಲ.  ದಾಂಪತ್ಯದಲ್ಲಿ ಕೆಲ ಸಣ್ಣಪುಟ್ಟ ವಾದವಿವಾದಗಳು ಕಾಣಿಸಿಕೊಳ್ಳಬಹುದು. ಮನೆಗೆ ಮುತ್ತೈದೆ ಕರೆದು ಬಾಗೀನ ನೀಡಿ. 

ಕುಂಭ(Aquarius): ಉದ್ಯೋಗದಲ್ಲಿ ಅನಿರೀಕ್ಷಿತವಾಗಿ ಶುಭ ಸುದ್ದಿ ಕಿವಿಗೆ ಬೀಳಬಹುದು. ಆಪ್ತರೊಂದಿಗೆ ಮಹತ್ತರ ವಿಚಾರಗಳ ಚರ್ಚೆ ನಡೆಸುವುದರಿಂದ ಕೆಲ ನಿರ್ಧಾರಗಳು ಬಲವಾಗುವುವು. ನೀರು, ಬೆಂಕಿಯ ವಿಚಾರದಲ್ಲಿ ಹೆಚ್ಚಿನ ಜಾಗರೂಕತೆ ಇರಲಿ. ಲಲಿತಾ ಸಹಸ್ರನಾಮ ಹೇಳಿಕೊಳ್ಳಿ. 

ಮೀನ(Pisces): ಪ್ರಯತ್ನಬಲದಿಂದ ಯೋಜಿಸಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ತೋರಿಬರುವುದು. ದಿನವಿಡೀ ಮನಸ್ಸು ಪ್ರಫುಲ್ಲಿತವಾಗಿರಲಿದೆ. ಪಾಲುದಾರಿಕೆ ಕೆಲಸಗಳಿಗೆ ಕೈ ಹಾಕುವಿರಿ. ಸರ್ಕಾರಿ ಕೆಲಸಗಳು ಮುಗಿದು ನಿರಾಳವಾಗುವಿರಿ. ಮನೆಗೆ ಮುತ್ತೈದೆ ಕರೆದು ಬಾಗೀನ ನೀಡಿ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!