ದಿನ ಭವಿಷ್ಯ: ಈ ರಾಶಿಯವರಿಗೆ ನಷ್ಟ ಸಂಭವ, ಅನುಕೂಲವೂ ಇದೆ!

Published : Jun 23, 2021, 07:04 AM ISTUpdated : Jun 23, 2021, 11:04 AM IST
ದಿನ ಭವಿಷ್ಯ: ಈ ರಾಶಿಯವರಿಗೆ ನಷ್ಟ ಸಂಭವ, ಅನುಕೂಲವೂ ಇದೆ!

ಸಾರಾಂಶ

23 ಜೂನ್ 2021 ಬುಧವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

ಮೇಷ: ಸತ್ಯ ಹೇಳುವುದರಿಂದ ಕ್ಷಣಿಕವಾಗಿ ನೋವು ಆದರೂ ಮುಂದೆ ಅದರಿಂದ ಒಳ್ಳೆಯ ಪ್ರತಿಫಲ ಸಿಕ್ಕಲಿದೆ. ಧೈರ್ಯ ಹೆಚ್ಚಾಗಲಿದೆ.

ವೃಷಭ: ನೀವು ಮಾಡಿದ ತಪ್ಪಿನಿಂದಾಗಿ ಮನೆ ಮಂದಿಗೆ ತೊಂದರೆಯಾಗಲಿದೆ. ಪದೋನ್ನತಿ ಸಿಗಲಿದೆ. ಹೊಸ ವಸ್ತುಗಳನ್ನು ಕೊಂಡುಕೊಳ್ಳಲಿದ್ದೀರಿ.

ಮಿಥುನ: ಅಪರಿಚಿತರಿಂದ ಅಂತರ ಕಾಯ್ದುಕೊಳ್ಳಿ. ನಿಮ್ಮ ಶಕ್ತಿಯನ್ನು ಅರಿತುಕೊಂಡು ಅದಕ್ಕೆ ತಕ್ಕಂತೆ ಲೆಕ್ಕಾಚಾರಗಳನ್ನು ಹಾಕಿಕೊಳ್ಳಿ. ಶುಭಫಲ.

ಕಟಕ: ತಪ್ಪನ್ನೇ ಹುಡುಕುತ್ತಾ ಹೋದರೆ ಮನಸ್ಸು ಕೆಡಲಿದೆ. ಇರುವುದರಲ್ಲಿ ಸಂತೋಷವನ್ನು ಹುಡುಕಿಕೊಳ್ಳಿ. ಅತಿಯಾದ ಆಸೆ ಬೇಡ.

ಅಮಾವಾಸ್ಯೆಯಂದು ನೀವು ಯಾಕೆ ಜಾಗರೂಕರಾಗಿರಬೇಕು ಗೊತ್ತಾ?

ಸಿಂಹ - ಸ್ತ್ರೀಯರಿಂದ ಅನುಕೂಲ, ಕೆಲಸದಲ್ಲಿ ಸಾಧನೆ, ಸಮಾಧಾಮದ ದಿನ, ಸಹೋದರರಲ್ಲಿ ಭಿನ್ನಾಭಿಪ್ರಾಯ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕನ್ಯಾ - ನಷ್ಟ ಸಂಭವ, ಅನುಕೂಲವೂ ಇದೆ, ಮಿಶ್ರಫಲ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ತುಲಾ - ಆರೋಗ್ಯದಲ್ಲಿ ವ್ಯತ್ಯಾಸ, ದೇಹಸ್ಥಿತಿ ವ್ಯತ್ಯಾಸವಾಗಲಿದೆ, ಶುಭಫಲವೂ ಇದೆ, ಸಂಜೀವಿನಿ ರುದ್ರನ ಪ್ರಾರ್ಥನೆ ಮಾಡಿ

ವೃಶ್ಚಿಕ - ಸಂಗಾತಿಯಿಂದ ಸಹಕಾರ, ಓಡಾಟದಲ್ಲಿ ಎಚ್ಚರಿಕೆ ಇರಲಿ, ಕೃಷಿಕರು ಎಚ್ಚರವಾಗಿರಿ, ಭೂವರಾಹ ಸ್ವಾಮಿ ಪ್ರಾರ್ಥನೆ ಮಾಡಿ

ಗಣೇಶ ರುದ್ರಾಕ್ಷಿ ಧರಿಸಿದರೆ ನಿಮ್ಮ ಅದೃಷ್ಟವೇ ಬದಲಾಗತ್ತೆ…!

ಧನುಸ್ಸು: ಹಬ್ಬಕ್ಕೆ ಮನೆಯಲ್ಲಿ ಪೂರ್ವ ತಯಾರಿಗಳು ಶುರುವಾಗಲಿವೆ. ಶುಭ ಕಾರ್ಯಗಳಿಗೆ ಇದು ಸಕಾಲ. ವ್ಯವಹಾರ ಪ್ರಗತಿ ಕಾಣಲಿದೆ

ಮಕರ: ಸಣ್ಣ ವ್ಯಾಪಾರಿಗಳಿಗೆ ಇಂದು ಹೆಚ್ಚಿನ ಲಾಭ ದೊರೆಯಲಿದೆ. ಒಳ್ಳೆಯ ಮಾತುಗಳಿಂದ ನಿಮ್ಮ ಮನಸ್ಸಿಗೂ ನೆಮ್ಮದಿ ದೊರಕುತ್ತದೆ.

ಕುಂಭ: ಅತಿಯಾದ ಆಸೆ ಬೇಡ. ಹಾಗೆಂದು ವಿರಾಗಿಯ ರೀತಿ ಕೂರುವುದೂ ಬೇಡ. ನಿಮ್ಮ ಪಾಲನ್ನು ನೀವು ಪಡೆದುಕೊಳ್ಳುವುದು ಲೇಸು.

ಮೀನ: ಮಕ್ಕಳಿಂದ ನೆಮ್ಮದಿ ದೊರೆಯಲಿದೆ. ಸಾಹಿತ್ಯದ ಕಡೆಗೆ ಆಸಕ್ತಿ ಹೆಚ್ಚಲಿದೆ. ಪರರ ಸಂತೋಷದಲ್ಲಿಯೇ ನಿಮ್ಮ ಸಂತೋಷ ಅಡಗಿದೆ.

PREV
click me!

Recommended Stories

ಏಳು ರಾಶಿಗೆ ಇಂದು ಬಂಪರ್‌ ರಾಜಯೋಗದಿಂದ ಹಠಾತ್ ಲಾಭ, 12 ರಾಶಿ ಭವಿಷ್ಯ ಇಲ್ಲಿದೆ
ಮೇ 19 ರಂದು 6 ಯೋಗಗಳ ನಿರ್ಮಾಣ, ಈ 8 ರಾಶಿಗಳಿಗೆ ಅದೃಷ್ಟದ ಸುರಿಮಳೆ,12 ರಾಶಿಗಳ ಸಂಪೂರ್ಣ ಭವಿಷ್ಯ ಇಲ್ಲಿದೆ