ದಿನ ಭವಿಷ್ಯ: ಈ ರಾಶಿಯವrರು ದುರ್ಜನರ ಸಹವಾಸದಿಂದ ದೂರವಿರಿ!

By Suvarna News  |  First Published Dec 19, 2020, 7:02 AM IST

18 ಡಿಸೆಂಬರ್ 2020 ಶನಿವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ


ಮೇಷ - ಧನ ಸಮೃದ್ಧಿ, ವೇಸಿಯೋಗದ ನೈಪುಣ್ಯ ಫಲಗಳಿದ್ದಾವೆ, ಸಂಗಾತಿಯಿಂದ ಸಹಕಾರ, ನಾಗ ಪ್ರಾರ್ಥನೆ ಮಾಡಿ, ಗುರು ಪ್ರಾರ್ಥನೆ ಮಾಡಿ

ವೃಷಭ - ಕೆಲಸದಲ್ಲಿ ಬಲ, ಪ್ರಯತ್ನಕ್ಕೆ ತಕ್ಕ ಫಲವಿದೆ, ಹಣವ್ಯಯ, ಮಾತಿನಲ್ಲಿ ಎಚ್ಚರಿಕೆ ಇರಲಿ, ಮಹಾಗಣಪತಿ ಪ್ರಾರ್ಥನೆ ಮಾಡಿ

Tap to resize

Latest Videos

ಮಿಥುನ - ತಲೆ ಸಿಡಿತದ ಬಾಧೆ, ನರಗಳ ನೋವು ಇರಲಿದೆ, ಎಚ್ಚರಿಕೆ ಬೇಕು, ಆದಿತ್ಯ ಹೃದಯ ಪಠಿಸಿ

ಕಟಕ - ಸುಖ ಸಮೃದ್ಧಿ, ಮನಸ್ಸಿಗೆ ನೆಮ್ಮದಿ, ಕೃಷಿಕರಿಗೆ ಸಮಾಧಾನದ ದಿನ, ಅಮ್ಮನವರ ಪ್ರಾರ್ಥನೆ ಮಾಡಿ

ಪಟ ಪಟ ಹಾರೋ ಗಾಳಿಪಟದಲ್ಲಿದೆ ಆರೋಗ್ಯ ಸೂತ್ರ

ಸಿಂಹ - ಶತ್ರುಗಳ ಭಯ, ದೇಹಾಯಾಸ, ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ ಇದೆ, ಹಣದ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ, ಈಶ್ವರನಿಗೆ ಭಸ್ಮಾಭಿಷೇಕ ಮಾಡಿಸಿ

ಕನ್ಯಾ - ಪ್ರತಿಭಾ ಶಕ್ತಿ ಜಾಗೃತವಾಗುತ್ತದೆ, ಉನ್ನತ ಶಿಕ್ಷಣದವರಿಗೆ ಶುಭಫಲ, ಯಶಸ್ಸು ಕೀರ್ತಿ ಸಿಗಲಿದೆ, ನಾರಾಯಣ ಸ್ಮರಣೆ ಮಾಡಿ

ತುಲಾ - ಆರೋಗ್ಯದಲ್ಲಿ ಬಾಧೆ, ಬೆಂಕಿ ಸಂಬಂಧಿ ಕೆಲಸದಲ್ಲಿ ಎಚ್ಚರಿಕೆ ಇರಲಿ, ನೀರಿನ ಸಮೀಪದಲ್ಲಿ ಎಚ್ಚರಿಕೆ ಇರಲಿ, ಕಟೀಲು ದುರ್ಗಾ ಪ್ರಾರ್ಥನೆ ಮಾಡಿ

ವೃಶ್ಚಿಕ - ಶುಭಾಶುಭ ಮಿಶ್ರಫಲ, ಸಾಹಸ ಧೈರ್ಯಗಳು ತುಂಬಲಿವೆ, ಶುಭದಿನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಹಣ ಕೂಡಿಡುವುದರಲ್ಲಿ ಈ ರಾಶಿಯವರು ನಿಪುಣರು;ನಿಮ್ಮ ರಾಶಿ ಇದ್ಯಾ ನೋಡಿ !

ಧನುಸ್ಸು - ಭದ್ರಯೋಗ, ಹಂಸಯೋಗದ ಫಲಗಳಿದ್ದಾವೆ, ಸ್ತ್ರೀಯರಿಗೆ ಅನುಕೂಲದ ದಿನ, ಕೊಂಚ ಕಲಹವೂ ಇದೆ, ಗುರು ಸ್ಮರಣೆ ಮಾಡಿ

ಮಕರ - ಹೆಂಡತಿಯಿಂದ ಸಹಕಾರ, ಕೊಂಚ ಭಾವನೆಗಳಲ್ಲಿ ವ್ಯತ್ಯಾಸವಾಗಲಿದೆ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಕುಂಭ - ದುರ್ಜನರ ಸಹವಾಸದಿಂದ ದೂರವಿರಿ, ಸಹೋದರರಿಂದ ಸಹಕಾರ, ಚಂದ್ರನ ಪ್ರಾರ್ಥನೆ ಮಾಡಿ

ಮೀನ - ಶುಭಯೋಗ, ಭದ್ರಯೋಗ, ಹಣಸಯೋಗದ ಫಲವಿರಲಿದೆ, ವಸ್ತು ನಷ್ಟ, ಕಾರ್ತವೀರ್ಯಾರ್ಜುನ ಮಂತ್ರ ಪಠಿಸಿ

click me!